ಚಿಕ್ಕೋಡಿ: ಸೂರ್ಯಗ್ರಹಣದಿಂದ ಕೆಲವು ರಾಶಿಯವರಿಗೆ ದೋಷವಿರುವುದನ್ನು ಪರಿಹರಿಸಿಕೊಳ್ಳಲು ನದಿಯಲ್ಲಿ ಕುಳಿತುಕೊಳ್ಳುವ ರೂಢಿ ಇದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ೨೦ಕ್ಕೂ ಹೆಚ್ಚು ಅರ್ಚಕರು ನದಿಯಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು.
ಗ್ರಹಣ ಸ್ಪರ್ಶದಿಂದ ಮೋಕ್ಷದವರೆರೆಗೂ ಕೃಷ್ಣಾ ನದಿಯಲ್ಲಿ ಕುಳಿತುಕೊಳ್ಳಲಿರುವ ಅರ್ಚಕರು ಗ್ರಹಣ ಕಾಲ ಮುಗಿದ ಬಳಿಕ ಮತ್ತೆ ನೀರಿನಿಂದ ಮೇಲೆ ಬಂದು ಪೂಜೆ ಸಲ್ಲಿಸಲಿದ್ದಾರೆ.
ಗ್ರಹಣದ ಸಮಯದಲ್ಲಿ ನೀರಲ್ಲಿ ಕುಳಿತರೆ ದುಷ್ಪರಿಣಾಮ ಆಗೊಲ್ಲ ಎಂಬ ನಂಬಿಕೆ ಇರುವುದರಿಂದ ಈ ಕ್ರಮ ಅನುಸರಿಸಿದ್ದಾರೆ.
ಉಡುಪಿಯಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ
ಉಡುಪಿಯ ಮಲ್ಪೆ ಬೀಚಿನಲ್ಲಿ ಗ್ರಹಣ ವೀಕ್ಷಣೆಗೆ ಪೂರ್ಣಪ್ರಜ್ಞ ಕಾಲೇಜಿನ ಖಗೋಳಾಸಕ್ತರಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗ್ರಹಣ ನೋಡಲು ನೆರೆದಿರುವ ಸಾವಿರಾರು ಜನರೂ ನೆರೆದಿದ್ದಾರೆ.
ಮಲ್ಪೆಯ ಸೂರ್ಯಾಸ್ತ ವಿಶ್ವ ಪ್ರಸಿದ್ಧವಾಗಿದ್ದು, ಈ ವೇಳೆ ಗ್ರಹಣ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆ ಇದೆ. ಪ್ರತಿಫಲನ ವಕ್ರೀಭವನ ಟೆಲಿಸ್ಕೋಪ್ ಮೂಲಕ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಲಾಗಿದ್ದು, ಬರಿಯ ಕಣ್ಣಿನಲ್ಲಿ ಗ್ರಹಣ ನೋಡದಂತೆ ಸೂಚನೆ ನೀಡಲಾಗಿದೆ. ಎಲ್ಇಡಿ ಸ್ಕ್ರೀನ್ ಮೂಲಕ ಗ್ರಹಣ ವೀಕ್ಷಣೆಗೆ ಅವಕಾಶವಿದೆ.