Site icon Vistara News

Solar Eclipse | ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಹೆರಿಗೆಗೆ ಗರ್ಭಿಣಿಯರು ಹಿಂದೇಟು, ಅನಿವಾರ್ಯ ಡೆಲಿವರಿ ಮಾತ್ರ ನಡೀತಿದೆ

delivary eclipse

ಗದಗ/ಹುಬ್ಬಳ್ಳಿ: ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ ಹೆರಿಗೆಗೆ ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ದೈವ ನಂಬಿಕೆ, ಮೂಢನಂಬಿಕೆಯಿಂದ ಗರ್ಭಿಣಿಯರು ತಮ್ಮ ಹೆರಿಗೆ ದಿನಾಂಕವನ್ನು ಮುಂದೂಡಿದ್ದಾರೆ. ಗದಗ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಂತೂ ಸಿಜೇರಿಯನ್ ಮಾಡಿಸಿಕೊಳ್ಳುವ ಸಂಖ್ಯೆ ಶೇ. 80ರಷ್ಟು ಕಡಿಮೆ ಆಗಿದೆ ಎನ್ನಲಾಗಿದೆ. ವೈದ್ಯರು ಕೆಲವು ಗರ್ಭಿಣಿಯರಿಗೆ ಅ.೨೫ಕ್ಕೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಗ್ರಹಣ ಕಾರಣದಿಂದ ಗರ್ಭಿಣಿಯರು ಆಸ್ಪತ್ರೆಗೆ ಆಗಮಿಸಿಲ್ಲ. ಹಬ್ಬ, ಅಮಾವಾಸ್ಯೆ ಮತ್ತು ಗ್ರಹಣ ಏಕಕಾಲದಲ್ಲಿ ಆಗಮಿಸಿದ ಹಿನ್ನೆಲೆ ಆಸ್ಪತ್ರೆಯತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಆರೋಗ್ಯ ಸಮಸ್ಯೆ, ಹೆರಿಗೆ ನೋವು ಕಾಣಿಸಿಕೊಂಡು ನಡೆಯುವ ಹೆರಿಗೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ವೈದ್ಯರು ಹೇಳುವುದೇನು?
ʻʻನನ್ನ ಅನುಭವದ ಪ್ರಕಾರ ಗ್ರಹಣ ಕಾಲದಲ್ಲಿ ಹೆರಿಗೆ ಆದರೆ ಏನೂ ತೊಂದರೆಯಿಲ್ಲ. ತಾಯಿ, ಮಗು ಚೆನ್ನಾಗಿಯೇ ಇರುತ್ತಾರೆʼʼ ಎನ್ನುತ್ತಾರೆ ಹುಬ್ಬಳ್ಳಿಯ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ. ದತ್ತಾತ್ರೆಯ ಜಲ್ದೆ ಅವರು. ಆದರೆ, ಜನರೇ ಮುಂದೂಡಲು ಹೇಳುತ್ತಾರೆ ಎಂದಿದ್ದಾರೆ.

ಗ್ರಹಣ ಕಾಲದಲ್ಲಿ ಅನಿವಾರ್ಯವಾದ ಹೆರಿಗೆಗಳನ್ನು ಮಾಡಬೇಕಾಗುತ್ತದೆ. ಸಹಜ ನೋವಿನಿಂದ ಆಗುವ ಹೆರಿಗೆ, ಯಾವುದಾದರೂ ಆರೋಗ್ಯದ ಸಮಸ್ಯೆ ಇದ್ದರೆ ಕಾಯುವುದು ಕಷ್ಟ. ಆದರೆ, ಇತರ ಸನ್ನಿವೇಶಗಳಲ್ಲಿ ಅಗತ್ಯ ಬಿದ್ದರೆ ಮುಂದೂಡಬಹುದು ಎನ್ನುತ್ತಾರೆ.

ʻʻಗ್ರಹಣ ಸಂದರ್ಭದಲ್ಲಿ ಸಿಜೇರಿಯನ್ ಮಾಡಿಸಲು ಜನ ಹಿಂದೇಟು ಹಾಕುತ್ತಾರೆ. ಗ್ರಹಣ ಮುಗಿಯುವವರೆಗೆ ಹೆರಿಗೆ ಮುಂದೂಡಿ ಎಂದು ಒತ್ತಾಯಿಸುತ್ತಿದ್ದಾರೆ. ಗ್ರಹಣ ಕಾಲದಲ್ಲಿ ಮಕ್ಕಳು ಜನಿಸಬಾರದು ಅನ್ನೋದು ಕೆಲವರ ನಂಬಿಕೆ. ಬಹುತೇಕ ಸಂದರ್ಭಗಳಲ್ಲಿ ಜನರ ಭಾವನೆಗೆ ಸ್ಪಂದಿಸಬೇಕಾಗುತ್ತದೆʼʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Solar Eclipse 2022 | ಗ್ರಹಣದಿಂದ ಯಾವ ರಾಶಿಗೆ ಶುಭ? ಯಾವೆಲ್ಲಾ ರಾಶಿಗೆ ಅಶುಭ? ಪರಿಹಾರಕ್ಕೆ ಯಾವ ಮಂತ್ರ ಪಠಿಸಬೇಕು?

Exit mobile version