Site icon Vistara News

Train Service | ವಿಜಯಪುರ-ಕೊಟ್ಟಾಯಮ್, ಹುಬ್ಬಳ್ಳಿ-ವಿಜಯಪುರ ನಡುವೆ ವಿಶೇಷ ರೈಲುಗಳ ಸಂಚಾರ

Train Service

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ರೈಲು ಸಂಖ್ಯೆ 07385/07386 ವಿಜಯಪುರ-ಕೊಟ್ಟಾಯಮ್‌-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ಮತ್ತು ರೈಲು ಸಂಖ್ಯೆ 07387/07388 ಎಸ್.ಎಸ್.ಎಸ್ ಹುಬ್ಬಳ್ಳಿ-ವಿಜಯಪುರ- – ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು(Train Service) ಓಡಿಸಲು ನಿರ್ಧರಿಸಿದೆ.

೧. ರೈಲು ಸಂಖ್ಯೆ. 07385/07386 ವಿಜಯಪುರ-ಕೊಟ್ಟಾಯಮ್-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌( ೧೧ ಸೇವೆ)
ರೈಲು ಸಂಖ್ಯೆ 07385 ವಿಜಯಪುರ-ಕೊಟ್ಟಾಯಮ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌, ನವೆಂಬರ್ 21ರಿಂದ 2023ರ ಜನವರಿ 30ರವರೆಗೆ ವಿಜಯಪುರದಿಂದ ಪ್ರತಿ ಸೋಮವಾರದಂದು ರಾತ್ರಿ 11.00 ಗಂಟೆಗೆ ಹೊರಡಲಿದ್ದು, ಮೂರನೇ ದಿನ (ಬುಧವಾರ) ಬೆಳಗಿನ ಜಾವ 2.20 ಗಂಟೆಗೆ ಕೊಟ್ಟಾಯಮ್ ತಲುಪಲಿದೆ.

ಇದನ್ನೂ ಓದಿ | ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌; ವಾರದಲ್ಲಿ 6 ದಿನ ಸಂಚರಿಸಲಿದೆ ರೈಲು

ಈ ರೈಲಿಗೆ ಬಸವನ ಬಾಗೇವಾಡಿ ರೋಡ್ (11.36 PM), ಆಲಮಟ್ಟಿ (11.57 PM), ಬಾಗಲಕೋಟೆ (12.50 AM), ಬಾದಾಮಿ (01.14 AM), ಹೊಳೆ ಆಲೂರು (01.35 AM), ಗದಗ (02.55 AM), ಎಸ್.ಎಸ್.ಎಸ್ ಹುಬ್ಬಳ್ಳಿ (05.00 AM), ರಾಣಿಬೆನ್ನೂರು (07.07 AM), ಹರಿಹರ (07.29 AM), ದಾವಣಗೆರೆ (07.43), ಬೀರೂರು (09.10 AM), ಅರಸೀಕೆರೆ (09.35), ತಿಪಟೂರು (10.26), ತುಮಕೂರು (11.30), ಯಲಹಂಕ (01.30/02.00 PM), ಕೃಷ್ಣರಾಜಪುರಂ (02.23 PM), ಬಂಗಾರಪೇಟೆ (03.13), ಸೇಲಂ (05.22 PM), ಈರೋಡ್ (06.20 PM), ತಿರುಪ್ಪೂರ್ (06.58 PM), ಕೊಯಮತ್ತೂರು (08.07 PM), ಪಾಲಕ್ಕಾಡ್ (09.35 PM), ತ್ರಿಶೂರ್ (11.22 PM) ಮತ್ತು ಎರ್ನಾಕುಲಂ ಟೌನ್ (12.40 AM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07386 ಕೊಟ್ಟಾಯಮ್-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ನವೆಂಬರ್ 23 ರಿಂದ 2023ರ ಫೆಬ್ರವರಿ 1 ರವರೆಗೆ ಕೊಟ್ಟಾಯಮ್ ನಿಲ್ದಾಣದಿಂದ ಪ್ರತಿ ಬುಧವಾರದಂದು ಮಧ್ಯಾಹ್ನ 03.30 ಗಂಟೆಗೆ ಹೊರಡಲಿದ್ದು, ಮರುದಿನ ರಾತ್ರಿ 08:30 ಗಂಟೆಗೆ ವಿಜಯಪುರ ನಿಲ್ದಾಣ ತಲುಪಲಿದೆ.

ಈ ರೈಲು ಎರ್ನಾಕುಲಂ ಟೌನ್ (05.10 PM), ತ್ರಿಶೂರ್ (06.27 PM), ಪಾಲಕ್ಕಾಡ್ (09.37 PM), ಕೊಯಮತ್ತೂರು (11.17 PM), ತಿರುಪ್ಪೂರ್ (12.03 AM), ಈರೋಡ್ (12.50 AM), ಸೇಲಂ (01.47 AM), ಬಂಗಾರಪೇಟೆ (04.40 AM), ಕೃಷ್ಣರಾಜಪುರಂ (05.38 AM), ಯಲಹಂಕ (06.55 AM), ತುಮಕೂರು (08.10 AM), ತಿಪಟೂರು (09.34 AM), ಅರಸೀಕೆರೆ (10.15 AM), ಬೀರೂರು (11.05 AM), ದಾವಣಗೆರೆ (12.25 PM), ಹರಿಹರ (12.39 PM), ರಾಣೆಬೆನ್ನೂರು (01.00 PM), ಎಸ್.ಎಸ್.ಎಸ್ ಹುಬ್ಬಳ್ಳಿ (02.50 PM), ಗದಗ (04.15 PM), ಹೊಳೆ ಆಲೂರು (05.07 PM), ಬಾದಾಮಿ (05.27 PM), ಬಾಗಲಕೋಟೆ (06.00 PM), ಆಲಮಟ್ಟಿ (06.42 PM) ಮತ್ತು ಬಸವನ ಬಾಗೇವಾಡಿ ರೋಡ (07.09 PM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಈ ವಿಶೇಷ ರೈಲುಗಳು ಒಟ್ಟು ೧೫ ಬೋಗಿಗಳನ್ನು ಹೊಂದಿರುತ್ತವೆ. ಒಂದು 2ನೇ ಹವಾನಿಯಂತ್ರಿತ ದರ್ಜೆ, ಎರಡು 3ನೇ ಹವಾನಿಯಂತ್ರಿತ ದರ್ಜೆ, ಹತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್‌ಗಳಿಂದ ಕೂಡಿದ ದ್ವಿತೀಯ ದರ್ಜೆ ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ಗಳನ್ನು ಒಳಗೊಂಡಿರುತ್ತದೆ.

೨.ರೈಲು ಸಂಖ್ಯೆ 07387/07388 ಎಸ್.ಎಸ್.ಎಸ್ ಹುಬ್ಬಳ್ಳಿ-ವಿಜಯಪುರ-ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್‌ (೧೧ ಸೇವೆ)

ರೈಲು ಸಂಖ್ಯೆ 07387 ಎಸ್.ಎಸ್.ಎಸ್ ಹುಬ್ಬಳ್ಳಿ-ವಿಜಯಪುರ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್‌ ನವೆಂಬರ್ 21 ರಿಂದ 2023ರ ಜನವರಿ 30ರವರೆಗೆ ಎಸ್.ಎಸ್.ಎಸ್ ಹುಬ್ಬಳ್ಳಿಯಿಂದ ಪ್ರತಿ ಸೋಮವಾರದಂದು ಮಧ್ಯಾಹ್ನ 03.00 ಗಂಟೆಗೆ ಹೊರಡಲಿದ್ದು, ಅದೇ ದಿನ ರಾತ್ರಿ 08:30 ಗಂಟೆಗೆ ವಿಜಯಪುರ ತಲುಪಲಿದೆ. ಈ ರೈಲು ಗದಗ (04.15 PM), ಹೊಳೆ ಆಲೂರು (05.07 PM), ಬಾದಾಮಿ (05.27 PM), ಬಾಗಲಕೋಟೆ (06.00 PM), ಆಲಮಟ್ಟಿ (06.42 PM) ಮತ್ತು ಬಸವನ ಬಾಗೇವಾಡಿ ರೋಡ (07.09 PM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07388 ವಿಜಯಪುರ-ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್‌ ನವೆಂಬರ್ 24 ರಿಂದ 2023ರ ಫೆಬ್ರವರಿ 2 ರವರೆಗೆ ವಿಜಯಪುರ ನಿಲ್ದಾಣದಿಂದ ಪ್ರತಿ ಗುರುವಾರದಂದು ರಾತ್ರಿ 09.00 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗಿನ ಜಾವ 02:45 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ಈ ರೈಲು ಬಸವನ ಬಾಗೇವಾಡಿ ರೋಡ (09.36 PM), ಆಲಮಟ್ಟಿ (09.56 PM), ಬಾಗಲಕೋಟ (11.10 PM), ಬಾದಾಮಿ (11.36 PM), ಹೊಳೆ ಆಲೂರು (12.04 AM) ಮತ್ತು ಗದಗ (01.25 AM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಈ ವಿಶೇಷ ರೈಲುಗಳ ಸಂಯೋಜನೆಯು ಹತ್ತು ಸ್ಲೀಪರ್‌ ಬೋಗಿಗಳು ಮತ್ತು ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್‌ಗಳಿಂದ ಕೂಡಿದ ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ಗಳನ್ನು ಹೊಂದಿರಲಿದೆ.

ಇದನ್ನೂ ಓದಿ | Modi programme| ಚೆನ್ನೈ- ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ನ. 11ರಂದು ಬೆಂಗಳೂರಿಂದ ಚಾಲನೆ

Exit mobile version