Site icon Vistara News

Physical Abuse: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಶೇಷ ಚೇತನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರ ಸೆರೆ

Girl physically abused

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಶೇಷ ಚೇತನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಬ್ದುಲ್ ಹಲೀಂ (37), ಈತನಿಗೆ ಸಹಕರಿಸಿದ ಶಮೀನಾ ಬಾನು(22) ಬಂಧಿತರು. ಬೈಕ್ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಹಲೀಂ ಜತೆ ಸ್ನೇಹಿತ ಕೂಡ ಚಿಕಿತ್ಸೆ ಪಡೆಯುತ್ತಿದ್ದ. ಅವರನ್ನು ನೋಡಲು ಅಪ್ರಾಪ್ತ ವಯಸ್ಸಿನ ಮಗಳನ್ನು ಕರೆದುಕೊಂಡು ತಾಯಿ ಹೋಗಿದ್ದಳು. ಶಮೀನಾ ಬಾನು ಜತೆ ಬಾಲಕಿಯನ್ನು ಬಿಟ್ಟು ತಾಯಿ ಪೊಲೀಸ್ ಠಾಣೆಗೆ ಹೋಗಿದ್ದಳು. ಈ ವೇಳೆ ಆರೋಪಿಯು ಸ್ನೇಹಿತನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲೀಂ ಹಾಗೂ ಆತನಿಗೆ ಸಹಕರಿಸಿದ ಶಮೀನಾ ಬಾನುವನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | Murder Case : ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಮೇಸ್ತ್ರಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಗಂಡ

ಯುವಕನ ಅಜಾಗರೂಕತೆಯ ಕಾರು ಚಾಲನೆಗೆ ಆಟೋ ಚಾಲಕ ದಾರುಣ ಸಾವು

ಬೆಂಗಳೂರು: ಯುವಕನ ಅಜಾಗರೂಕತೆಯ ಕಾರು ಚಾಲನೆಗೆ ಆಟೋ ಚಾಲಕ ಬಲಿಯಾಗಿರುವ ಘಟನೆ ದೇವನಹಳ್ಳಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೇವಾ ಕಾಲೇಜು ರಸ್ತೆಯ ಬೆಳ್ಳಳ್ಳಿ ಕ್ರಾಸ್ ಬ್ರಿಡ್ಜ್ ಬಳಿ ಆಟೋಗೆ ಕಾರು ಡಿಕ್ಕಿಯಾಗಿದ್ದರಿಂದ ಆಟೋ ಚಾಲಕ ಮೃತಪಟ್ಟಿದ್ದಾರೆ.

ನವೀನ್ ಕುಮಾರ್ (52) ಮೃತ ದುರ್ದೈವಿ. ಸೀವನ್ ಸಂತೊಷ (19) ಆರೋಪಿ. ಬುಧವಾರ ರಾತ್ರಿ ಬಾಗಲೂರಿನಿಂದ ಹೆಣ್ಣೂರು ಕಡೆ ಆಟೋ ಚಾಲಕ ಹೋಗುತ್ತಿದ್ದಾಗ ಹಿಂಬದಿಯಿಂದ ಅತಿ ವೇಗವಾಗಿ ಸ್ವಿಪ್ಟ್ ಕಾರು ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯುವಕ ಪಾರ್ಟಿಯಲ್ಲಿ ಮಧ್ಯಪಾನ ಮಾಡಿ ಕಾರು ಚಾಲನೆ ಮಾಡಿರುವುದು ಅಪಘಾತಕ್ಕೆ ಕಾರಣವಾಗಿದೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಸರಣಿ ಅಪಘಾತದಲ್ಲಿ ಬೈಕ್‌ ಸವಾರ ಸಾವು

ಬೆಂಗಳೂರು: ಪಲ್ಸರ್ ಬೈಕ್, ಲಾರಿ ಹಾಗೂ ಕ್ರೇನ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಹೊಸೂರು ಮುಖ್ಯರಸ್ತೆಯ ವೀರಸಂದ್ರ ಜಂಕ್ಷನ್ ಬಳಿ ನಡೆದಿದೆ. ಬೈಕ್ ಸವಾರ ಸತ್ಯಂ ಪಾಟೀಲ್ (26) ಮೃತ. ಅಪಘಾತ ನಡೆದ ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ಸತ್ಯಂ ಪಾಟೀಲ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅಪಘಾತ ಮಾಡಿದ ವಾಹನ ಚಾಲಕನನ್ನು ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Physical Assault: ಪ್ರೇಮ ನಿವೇದನೆ ಒಪ್ಪದ 12 ವರ್ಷದ ಬಾಲಕಿಗೆ 10 ಬಾರಿ ಚಾಕು ಇರಿದು ಕೊಂದ ದುಷ್ಟ

ಖಾಸಗಿ ಬಸ್ ಡಿಕ್ಕಿಯಾಗಿ ಸೈಕಲ್ ಸವಾರ ಸಾವು

ಬೆಂಗಳೂರು: ಖಾಸಗಿ ಬಸ್ ಡಿಕ್ಕಿಯಾಗಿ ಸೈಕಲ್ ಸವಾರ ಮೃತಪಟ್ಟಿರುವುದು ಬನಶಂಕರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃಷ್ಣಾ ರೆಡ್ಡಿ (79) ಮೃತ ವ್ಯಕ್ತಿ. ಕುಮಾರಸ್ವಾಮಿ ಲೇಔಟ್‌ನಿಂದ ಕತ್ರಿಗುಪ್ಪೆಗೆ ತೆರಳುವ ಮಾರ್ಗದಲ್ಲಿ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣಾರೆಡ್ಡಿ ಅವರು ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ. ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version