Site icon Vistara News

Rohini Sindhuri: ಸಾ.ರಾ. ಮಹೇಶ್‌-ರೋಹಿಣಿ ಸಿಂಧೂರಿ ಸಂಘರ್ಷ ಅಂತ್ಯ; ವಾಟ್ಸ್‌ಆ್ಯಪ್ ಮೆಸೇಜ್‌ನಲ್ಲೇನಿದೆ?

rohini sinduri warns legal action against lucky ali

ಮೈಸೂರು: ಕೃಷ್ಣರಾಜನಗರ ಶಾಸಕ ಸಾ.ರಾ. ಮಹೇಶ್ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ನಡುವಿನ ಸಂಘರ್ಷ ಕೊನೆಗೂ ಅಂತ್ಯವಾಗಿದೆ ಎಂದು ಹೇಳಲಾಗಿದೆ. ಐಎಎಸ್ ಅಧಿಕಾರಿ ಮಣಿವಣ್ಣನ್ ಮಧ್ಯಸ್ಥಿಕೆಯಲ್ಲಿ ಸಂಧಾನ ನೆರವೇರಿದೆ.

‌ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ, ಸಾರಾ ಮಹೇಶ್ ಮೇಲೆ ಭೂ ಒತ್ತುವರಿಯ ಆರೋಪ ಮಾಡಿ ಜಟಾಪಟಿಗೆ ಇಳಿದಿದ್ದರು. ಇದು ಕಾನೂನು ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿತ್ತು. ಇದರಿಂದ ಆಕ್ರೋಶಗೊಂಡಿದ್ದ ಸಾ.ರಾ. ಮಹೇಶ್‌, ರೋಹಿಣಿ ಸಿಂಧೂರಿ ವಿರುದ್ಧ ಸಾಲು ಸಾಲು ಆರೋಪ ಮಾಡಿ ತನಿಖೆಗೆ ಆಗ್ರಹಿಸಿದ್ದರು.

ಬೆಳಗಾವಿ ಅಧಿವೇಶನದ ವೇಳೆ ರೋಹಿಣಿ ಸಿಂಧೂರಿ ಅವರು ಸಾ.ರಾ. ಮಹೇಶ್ ಜತೆ ಸಂಧಾನಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಎಐಎಸ್‌ ಹಿರಿಯ ಅಧಿಕಾರಿ ಪಿ. ಮಣಿವಣ್ಣನ್‌ ಅವರು ಮಧ್ಯಸ್ಥಿಕೆ ವಹಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Budget 2023: ಆಕಾಶಕ್ಕೆ ಏಣಿ ಇಟ್ಟ ಸಿಎಂ ಬಸವರಾಜ ಬೊಮ್ಮಾಯಿ?: ಅಭೂತ ಪೂರ್ವ ತೆರಿಗೆ ಸಂಗ್ರಹಣೆ ಗುರಿ ಸಾಧನೆ ಹೇಗೆ?

ಸಾ.ರಾ.ಮಹೇಶ್ ಭೇಟಿ ನಂತರ ಅವರ ವಾಟ್ಸ್‌ಆ್ಯಪ್‌ಗೆ ರೋಹಿಣಿ ಸಿಂಧೂರಿ ಅವರು ಸುದೀರ್ಘ ಮೆಸೇಜ್ ಕಳಿಸಿದ್ದಾರೆನ್ನಲಾಗಿದೆ. ನಿಮ್ಮ ಜಾಗದ ವಿಚಾರದ ಸರ್ವೇ ಮಾಡಲು ನಾನು ದಿಶಾಂಕ್ ಆ್ಯಪ್ ನೋಡಿ ಆದೇಶಿಸಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಕೇವಲ ಕೆಲಸದ ವಿಚಾರವಷ್ಟೇ. ಇದರಲ್ಲಿ ವೈಯಕ್ತಿಕ ವಿಚಾರ ಏನೂ ಇಲ್ಲ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ.

Exit mobile version