Site icon Vistara News

Sringeri Election Results: ಶೃಂಗೇರಿಯಲ್ಲಿ ಈ ಬಾರಿಯೂ ಸೋತ ಜೀವರಾಜ; ರಾಜೇಗೌಡರೇ ಇಲ್ಲೀಗ ರಾಜ!

Sringeri Election results winner TD Rajegowda

ಶೃಂಗೇರಿ: ಭಾರಿ ಕುತೂಹಲಕ್ಕೆ ಕಾರಣವಾಗಿರುವ ಈ ಬಾರಿ ವಿಧಾನಸಭಾ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ (Sringeri Election Results) ಈ ಬಾರಿ ಶಾಸಕ ಟಿ.ಡಿ. ರಾಜೇಗೌಡ ಅವರೇ ಪುನರಾಯ್ಕೆಯಾಗಿದ್ದಾರೆ.

ಅಲ್ಪ ಮತದಲ್ಲಿ ಸೋತ ಜೀವರಾಜ್

ಕಳೆದ ಬಾರಿ ಕೇವಲ 2 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಈ ಬಾರಿ ಕೇವಲ 153 ಅಂತರಗಳ ಸೋಲು ಕಂಡಿದ್ದಾರೆ. ಹಿಂದೂ ಸಂಘಟನೆಗಳ ಕಡೆಗಡನೆ ಕಳೆದ ಬಾರಿ ಜೀವರಾಜ್ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆದರೆ, ಈ ಬಾರಿ ಈ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ಮುನ್ನುಗ್ಗಿದ್ದರು. ಆದರೆ, ಅವರಿಗೆ ಅದೂ ಸಹ ಕೈಹಿಡಿಯಲಿಲ್ಲ. ಅಂತಿಮ ಮೆಟ್ಟಲಿನಲ್ಲಿ ಎಡವಿದ್ದಾರೆ.

ಎರಡನೇ ಬಾರಿ ಟಿ.ಡಿ. ರಾಜೇಗೌಡರ ಕಮಾಲ್‌!

ಕಳೆದ ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಟಿ.ಡಿ. ರಾಜೇಗೌಡ ಈ ಬಾರಿಯೂ ಜಯ ಕಂಡಿದ್ದಾರೆ. ದಲಿತ, ಅಲ್ಪಸಂಖ್ಯಾತರ ಜತೆಗೆ ಒಕ್ಕಲಿಗ ಮತಗಳನ್ನು ಸೆಳೆಯುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಬಿಜೆಪಿಯನ್ನು ಮತ್ತೆ ಮಣಿಸಲು ಮಾಡಿರುವ ರಣತಂತ್ರ ಯಶ ಕಂಡಿದೆ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ರಾಜೇಗೌಡ ಪ್ರಚಾರ ನಡೆಸಿದ್ದರು. ಜನ ಇವರನ್ನು ಒಪ್ಪಿ ಮತ್ತೆ ವಿಧಾನಸಭೆಗೆ ಕಳುಹಿಸಿದ್ದಾರೆ.

ನಿರ್ಣಾಯಕ ಪಾತ್ರ ವಹಿಸಿದ ಸುಧಾಕರ್ ಶೆಟ್ಟಿ

ಇನ್ನು ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಕೂಡ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಭಾರಿ ಪೈಪೋಟಿ ಒಡ್ಡಿದ್ದರು. ನಿರೀಕ್ಷೆಗೂ ಮೀರಿ ಕ್ಷೇತ್ರದಲ್ಲಿ ಮತದಾರರ ಗಮನ ಸೆಳೆದಿರುವುದು ಎರಡೂ ಪಕ್ಷಗಳಿಗೂ ಸ್ವಲ್ಪ ಮಟ್ಟಿನ ದಿಗಿಲನ್ನು ಉಂಟು ಮಾಡಿತ್ತು. ಇವರು ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಕೂಲಿಕಾರ್ಮಿಕರ ಮತಗಳನ್ನು ಸೆಳೆದಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯ ಫಲಿತಾಂಶದಲ್ಲಿ ಇವರು ಪಡೆದುಕೊಂಡ ಮತಗಳು ನಿರ್ಣಾಯಕ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಚುನಾವಣೆಯ ಫಲಿತಾಂಶ ಏನು?
ಟಿ. ಡಿ. ರಾಜೇಗೌಡ (ಕಾಂಗ್ರೆಸ್): 62, 780 -ಡಿ.ಎನ್. ಜೀವರಾಜ್ (ಬಿಜೆಪಿ) 60,791- ಎಚ್.ಜಿ ವೆಂಕಟೇಶ್ (ಜೆಡಿಎಸ್) 9,799-ಗೆಲುವಿನ ಅಂತರ: 1,989

ಈ ಬಾರಿ ಚುನಾವಣಾ ಫಲಿತಾಂಶ ಇಂತಿದೆ
ಟಿ.ಡಿ. ರಾಜೇಗೌಡ (ಕಾಂಗ್ರೆಸ್) 59171 | ಡಿ.ಎನ್ ಜೀವರಾಜ್ (ಬಿಜೆಪಿ) 58970 | ಸುಧಾಕರ್ ಶೆಟ್ಟಿ (ಜೆಡಿಎಸ್) 19417 | ಗೆಲುವಿನ ಅಂತರ: 201

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version