Site icon Vistara News

Stabbing Case: ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ; ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಗೆ ಹೋಗಿದ್ದಕ್ಕೆ ಹಲ್ಲೆ ಆರೋಪ

Keerthi

ತುಮಕೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಕಾಂಗ್ರೆಸ್‌ ಕಾರ್ಯಕರ್ತನಿಗೆ ಚಾಕು ಇರಿದ (Stabbing Case) ಆರೋಪ ಕೇಳಿಬಂದಿದೆ. ಕುಣಿಗಲ್ ತಾಲೂಕಿನ ನಡೆಮಾವಿನಪುರದಲ್ಲಿ ಘಟನೆ ನಡೆದಿದ್ದು, ಡಿ.ಕೆ‌.ಸುರೇಶ್ ನಾಮಿನೇಷನ್‌ಗೆ ಯಾಕೆ‌ ಹೋಗಿದ್ದೆ ಎಂದು ಮೂವರು ಗಲಾಟೆ ತೆಗೆದು ಚಾಕು ಇರಿದಿದ್ದಾರೆ ಎನ್ನಲಾಗಿದೆ.

ಕುಣಿಗಲ್ ತಾಲೂಕು ಯೂತ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ವೆಂಕಟಗೌಡನಪಾಳ್ಯದ ಕೀರ್ತಿ ಹಲ್ಲೆಗೊಳಗಾದ ಯುವಕ. ಬಿಜೆಪಿ ಕಾರ್ಯಕರ್ತರಾದ ಚಂದ್ರ, ಜಗದೀಶ, ಸುನೀಲ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರೋ ಆರೋಪಿಗಳು ರಾಜಕೀಯ ವೈಷಮ್ಯಕ್ಕೆ ಹಲ್ಲೆ ಮಾಡಿದ್ದಾರೆಂದು ಕೀರ್ತಿ ದೂರು ನೀಡಿದ್ದಾರೆ.

ಕಾಂಗ್ರೆಸ್​ ಮುಖಂಡ ಡಿ.ಕೆ‌ ಸುರೇಶ್ ಅವರ ನಾಮಪತ್ರ ಸಲ್ಲಿಕೆಗೆ ಯಾಕೆ‌ ಹೋಗಿದ್ದೆ ಎಂದು ಕೀರ್ತಿ ಅವರ ಜೊತೆಗೆ ಶನಿವಾರ ಸಂಜೆ ನಡೆಮಾವಿನಪುರ ಗ್ರಾಮ ಪಂಚಾಯಿತಿ ಬಳಿ ಮೂವರು ಗಲಾಟೆ ತೆಗೆದಿದ್ದಾರೆ. ಬಳಿಕ ದೊಣ್ಣೆಯಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ | Fire Accident : ಬೆಂಗಳೂರಲ್ಲಿ ಬೆಂಕಿ ಅವಘಡಕ್ಕೆ 25 ಕೋಟಿ ರೂ. ಮೌಲ್ಯದ ಟಯರ್‌ಗಳು ಸುಟ್ಟುಕರಕಲು

ಹಲ್ಲೆಗೊಳಗಾದ ಕೀರ್ತಿಗೆ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಕೀಯ ವೈಷಮ್ಯ ಹಿನ್ನೆಲೆ‌ಯಲ್ಲಿ ಹಲ್ಲೆ ಮಾಡಿದ್ದಾರೆಂದು ಕಾಂಗ್ರೆಸ್​​ ಕಾರ್ಯಕರ್ತ ಕೀರ್ತಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ (IPC 1860 U/S 307,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version