Site icon Vistara News

Death Threat | ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಗೆ ಕೊಲೆ ಬೆದರಿಕೆ

ಕೊಲೆ ಬೆದರಿಕೆ

ಉಡುಪಿ: ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಗೆ ಕೊಲೆ ಬೆದರಿಕೆ ಬಂದ (Death Threat) ಪ್ರಕರಣ ಬೆಳಕಿಗೆ ಬಂದಿದೆ. ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಕೋಟ ಮೂಲದ ಅಜಿತ್ ಕುಮಾರ್ ಶೆಟ್ಟಿ ಅವರಿಗೆ ಮೊಬೈಲ್‌ ಕರೆ ಮಾಡಿರುವ ದುಷ್ಕರ್ಮಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಅಜಿತ್ ಕುಮಾರ್ ಶೆಟ್ಟಿ ಅವರಿಗೆ ಭರತ್ ದಾಸ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಅಜಿತ್‌ ಆರೋಪಿಸಿದ್ದಾರೆ. ತನಗೆ 10 ಲಕ್ಷ ರೂಪಾಯಿ ನೀಡಬೇಕು ಇಲ್ಲವಾದರೆ ಕೊಲೆ ಮಾಡುವುದಾಗಿ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ದಾನೆ ಎಂದು ಅಜಿತ್‌ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ನಿರಂತರವಾಗಿ ಮೊಬೈಲ್ ಮೆಸೇಜ್ ಮೂಲಕವು ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಈ ಸಂಬಂಧ ಕೋಟ ಪೊಲೀಸ್‌ ಠಾಣೆಯಲ್ಲಿ ಅಜಿತ್‌ ಕುಮಾರ್‌ ಶೆಟ್ಟಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಮಹಿಳೆಗೆ ಕೊಲೆ ಬೆದರಿಕೆ ಆರೋಪ; ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು

Exit mobile version