Site icon Vistara News

Stone Pelting: ಬೆಳಗಾವಿಯಲ್ಲಿ ಯುವಕರ ಗುಂಪಿನ ಮೇಲೆ ಕಲ್ಲು ತೂರಾಟ, ಆತಂಕ

belgavi stone pelting

ಬೆಳಗಾವಿ: ನಿನ್ನೆ ಅಯೋಧ್ಯೆಯಲ್ಲಿ ರಾಮ ಮಂದಿರ (Ayodya Ram Mandir) ಪ್ರಾಣ ಪ್ರತಿಷ್ಠೆಯ ಬಳಿಕ ಬೆಳಗಾವಿಯಲ್ಲಿ ಘೋಷಣೆ ಕೂಗುತ್ತ ಹೊರಟ ಒಂದು ಯುವಕರ ಗುಂಪಿನ ಮೇಲೆ ಇನ್ನೊಂದು ಗುಂಪು ಕಲ್ಲು (Stone Pelting) ತೂರಿದೆ. ಇದರಿಂದ ಕೆಲಹೊತ್ತು ಆತಂಕ ಉಂಟಾಗಿದೆ.

ಬೆಳಗಾವಿಯ ಪಾಟೀಲ ಗಲ್ಲಿಯಲ್ಲಿ ಘಟನೆ ನಡೆದಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಬಳಿಕ ಯುವಕರ ಗುಂಪೊಂದು ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತ ಹೊರಟಿತ್ತು. ಈ ಸಂದರ್ಭದಲ್ಲಿ ಈ ಯುವಕರ ಗುಂಪಿನ ಮೇಲೆ ಮತ್ತೊಂದು ಗುಂಪಿನ ಯುವಕರಿಂದ ಕಲ್ಲು ತೂರಾಟ ನಡೆದಿದೆ. ಪ್ರತಿಯಾಗಿ ಇವರೂ ಕಲ್ಲು ತೂರಿದರು.

ಎರಡು ಗುಂಪುಗಳ ಮಧ್ಯೆ ಪರಸ್ಪರ ಕಲ್ಲು ತೂರಾಟದಿಂದ ಕೆಲಹೊತ್ತು ಆತಂಕ ಉಂಟಾಯಿತು. ತಕ್ಷಣವೇ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರಿಂದ ಲಘು ಲಾಠಿ ಚಾರ್ಜ್ ನಡೆದಿದೆ. ಎರಡೂ ಗುಂಪಿನ ಯುವಕರೂ ಕೂಡಲೇ ‌ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ‌ಠಾಣೆ ಪೊಲೀಸರು ಭೇಟಿ ನೀಡಿದ್ದು, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿ‌ ನಿಯೋಜನೆ ಮಾಡಲಾಗಿದೆ.

ನಿನ್ನೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ರಾಜ್ಯದ ಹಲವು ಕಡೆ ಎಲ್‌ಇಡಿ ಸ್ಕ್ರೀನ್‌ ಹಾಕಿ ದೊಡ್ಡ ಪರದೆಯಲ್ಲಿ ಕಾರ್ಯಕ್ರಮವನ್ನು ಬಿತ್ತರಿಸಲಾಯಿತು. ಸಾವಿರಾರು ಮಂದಿ ಈ ಸ್ಕ್ರೀನ್‌ಗಳ ಮುಂದೆ ನೆರೆದು ಈ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು. ಬೆಳಗಾವಿಯಲ್ಲೂ ನೂರಾರು ಕಡೆ ಟೆಂಟ್‌ಗಳನ್ನು ಹಾಕಿ ದೊಡ್ಡ ಪರದೆಯಲ್ಲಿ ಕಾರ್ಯಕ್ರಮ ಬಿತ್ತರಿಸಿದ್ದಲ್ಲದೆ, ಬಂದವರಿಗೆ ಪಾನಕ- ಪ್ರಸಾದ ವಿತರಿಸುವ ವ್ಯವಸ್ಥೆಯನ್ನೂ ಮಾಡಲಾಯಿತು. ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಇದರ ಉಸ್ತುವಾರಿ ವಹಿಸಿದ್ದರು.

ಇದನ್ನೂ ಓದಿ: Ram Mandir: ರಾಜ್ಯದೆಲ್ಲೆಡೆ ಬೆಳಗಿದ ರಾಮ ಜ್ಯೋತಿ; ದೀಪೋತ್ಸವ ಸಂಭ್ರಮದ ಕ್ಷಣಗಳು ಇಲ್ಲಿವೆ

Exit mobile version