Site icon Vistara News

CM Siddaramaiah: ಸಿಎಂ ಸಿದ್ದರಾಮಯ್ಯ ಮನೆ ಮೇಲೆ ಕಲ್ಲೆಸೆತ; ಇದು ಯಾರ ಕೃತ್ಯ?

Sathyamurthy

ಮೈಸೂರು: ನಗರದ ಟಿ.ಕೆ. ಬಡಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮನೆ ಮೇಲೆ ವ್ಯಕ್ತಿಯೊಬ್ಬ ಕಲ್ಲೆಸೆದಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಮೈಸೂರಿನ ಸತ್ಯಮೂರ್ತಿ ಎಂಬ ವ್ಯಕ್ತಿ ಕಲ್ಲು ಎಸೆದ ಆರೋಪಿ. ಬೆಳಗ್ಗೆ 8 ಗಂಟೆಯಲ್ಲಿ ಘಟನೆ ನಡೆದಿದ್ದು, ತಕ್ಷಣವೇ ವ್ಯಕ್ತಿಯನ್ನು ಸರಸ್ವತಿಪುರಂ ಪೊಲೀಸರು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿದ್ದಾರೆ. ಕಲ್ಲೆಸೆತದಿಂದ ಸಿಎಂ ಮನೆಯ ಕಿಟಕಿ ಗಾಜು ಪುಡಿ ಪುಡಿಯಾಗಿದ್ದು, ತಕ್ಷಣ ಕಿಟಕಿ ಗಾಜನ್ನು ಸಿಬ್ಬಂದಿ ಸರಿಪಡಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರ ಒಡೆದು ಹಾಕಿದ್ದ ವ್ಯಕ್ತಿ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತಿ ಇವಿಎಂ ಅನ್ನು ಒಡೆದು ಹಾಕಿ ಮತದಾನ ಕೇಂದ್ರದಲ್ಲಿ ಗಲಾಟೆ ಮಾಡಿದ್ದ. ಅದೇ ರೀತಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂಂದ್ರ ಅವರನ್ನು “ರೌಡಿ ರಾಜೇಂದ್ರ ಮೈಸೂರಿನ ಜಿಲ್ಲಾಧಿಕಾರಿ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ. ಈತ ಮಾನಸಿಕ ಅಸ್ವಸ್ಥ ಎಂದು ಈ ಹಿಂದೆ ಹೇಳಲಾಗಿತ್ತು. ಘಟನೆ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Karnataka Politics : ಬಿಜೆಪಿ ಶಾಸಕರ ಅನುದಾನ ಕಿತ್ತು ಕಾಂಗ್ರೆಸ್‌ ಸದಸ್ಯರಿಗೆ ಕೊಟ್ಟ ಸರ್ಕಾರ! ಇದೆಂಥ ದ್ವೇಷ!

ಮೊನ್ನೆಯಷ್ಟೇ ಸಿಎಂ ಮನೆಗೆ ಭೇಟಿ ನೀಡಿದ್ದ

ಸಿಎಂ ಮನೆಗೆ ಕಲ್ಲೆಸೆದ ವ್ಯಕ್ತಿ ಸತ್ಯಮೂರ್ತಿ, ಭಾನುವಾರವಷ್ಟೇ ಸಿಎಂ‌‌ ಮನೆಗೆ ಭೇಟಿ ನೀಡಿದ್ದ. ಸಿಎಂ ಭೇಟಿಗೆ ಬಂದಿದ್ದ ಸಂದರ್ಭದಲ್ಲಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ. ಈ ಹಿಂದೆ ಇವಿಎಂ‌ ಯಂತ್ರ ಒಡೆದ ದೃಶ್ಯ ಬಳಸಿ ಜೈಲರ್ ಸಿನಿಮಾ ಹಾಡನ್ನು ಮಿಕ್ಸ್ ಮಾಡಿದ ವಿಡಿಯೊವನ್ನು ಹಂಚಿಕೊಂಡಿದ್ದ. ಸತ್ಯ ಮೂರ್ತಿ ತನ್ನ ಅವಾಂತರಗಳಿಗೆ ತಾನೇ ಬಿಲ್ಡಪ್ ಕೊಟ್ಟುಕೊಂಡಿರುವುದು ಕಂಡುಬಂದಿದೆ.

Exit mobile version