ಬೆಂಗಳೂರು: ಇಲ್ಲಿನ ಕೆ.ಜಿ ಹಳ್ಳಿಯ ಪ್ರೋವಿನ್ಸ್ ಕಾಲಜೊಂದರಲ್ಲಿ ವಿದ್ಯಾರ್ಥಿಗಳ ನಡುವಿನ ಜಗಳವು ಒಬ್ಬನ ಕೊಲೆಯಲ್ಲಿ ಕೊನೆಯಾಗಿತ್ತು. ಆ ಪ್ರಕರಣ ಸಂಬಂಧ ಪೊಲೀಸರು 7 ಆರೋಪಿಗಳನ್ನು (Student Execution) ಬಂಧಿಸಿದ್ದಾರೆ.
ಕಳೆದ ಆಗಸ್ಟ್ 11ರಂದು ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಅವರದ್ದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ಮಹಮ್ಮದ್ ಸಾದ್ ಎಂಬುವವರಿಗೆ ರ‍್ಯಾಗಿಂಗ್ ಮಾಡಿದ್ದರು. ಮಹಮ್ಮದ್ ಸಾದ್ ಡ್ಯಾನ್ಸ್ ಮಾಡುತ್ತಿದ್ದಾಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಿಚಾಯಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಮಹಮ್ಮದ್ ಸಾದ್ ಮರುದಿನ ತನ್ನೊಂದಿಗೆ ಏಳು ಜನರ ಗ್ಯಾಂಗ್ ಕಟ್ಟಿಕೊಂಡು ಬಂದು ರ‍್ಯಾಗ್ ಮಾಡಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾನೆ. ಪಿಯುಸಿ-ಡಿಗ್ರಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಮಹಮ್ಮದ್ ಸಾದ್ ಹಾಗೂ ಆತನ ಸಹಚರರು, ಅರ್ಬಝ್ ಎಂಬಾತನ ಮೇಲೆ ಚಾಕು ಇರಿದ ಪರಿಣಾಮ ಆತ ಮೃತಪಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಜಿ ಹಳ್ಳಿ ಪೊಲೀಸರು ಪರಾರಿಯಾಗಿದ್ದ ಆರೋಪಿ ಮಹಮ್ಮದ್ ಸಾದ್ ಸೇರಿದಂತೆ ಆತನ 7 ಸ್ನೇಹಿತರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | ಚಲಿಸುವ ರೈಲಿಗೆ ಸಿಲುಕಿ ಕಾಲೇಜು ವಿದ್ಯಾರ್ಥಿನಿ ಸಾವು, ಆಕ್ರೋಶಿತರಿಂದ ಹೆದ್ದಾರಿ ತಡೆ, ಟಯರ್‌ಗೆ ಬೆಂಕಿ