Site icon Vistara News

Self Harming: ಅನುಮಾನಾಸ್ಪದ‌ ರೀತಿಯಲ್ಲಿ ವಿದ್ಯಾರ್ಥಿನಿ‌ ಸಾವು

Student Hima

ಹೊಸಕೋಟೆ: ಅನುಮಾನಾಸ್ಪದ‌ ರೀತಿಯಲ್ಲಿ ವಿದ್ಯಾರ್ಥಿನಿ‌ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿಯಲ್ಲಿ ನಡೆದಿದೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು, ಸಾವಿನ (Self Harming) ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಹಿಮಾ (18) ಶವವಾಗಿ ಪತ್ತೆಯಾದ ದ್ವಿತೀಯ ಪಿಯು ವಿದ್ಯಾರ್ಥಿನಿ. ಮುಳಬಾಗಿಲು ತಾಲೂಕಿನ ನಂಗಲಿ ಮೂಲದ ವಿದ್ಯಾರ್ಥಿನಿ, ಅಜ್ಜಿ ಮನೆಯಲ್ಲಿದ್ದು ಹೊಸಕೋಟೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಅಜ್ಜಿ ಬೆಳಗ್ಗೆ ಹೂವಿನ ವ್ಯಾಪಾರಕ್ಕೆ ಹೋದ ವೇಳೆ ಘಟನೆ ನಡೆದಿದೆ. ಫೋನ್‌ ಮಾಡಿದಾಗ ಹಿಮಾ ಕರೆ ಸ್ವೀಕರಿಸಿಲ್ಲ. ಹೀಗಾಗಿ ಪಕ್ಕದ ಮನೆಯವರನ್ನು ಕಳುಹಿಸಿ ನೋಡಿದಾಗ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಅಕಾಲಿಕ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಇದನ್ನೂ ಓದಿ | Electric shock : ವಿದ್ಯಾರ್ಥಿನಿ ತಲೆ ಮೇಲೆ ಬಿತ್ತು ಹೈಟೆನ್ಶನ್‌ ತಂತಿ! ಕ್ಷಣಾರ್ಧದಲ್ಲೇ ಪ್ರವಹಿಸಿದ ವಿದ್ಯುತ್‌

ಸರಿಸೃಪಗಳನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

ದೇವನಹಳ್ಳಿ: ವಿದೇಶದಿಂದ ಸರಿಸೃಪಗಳನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ಆಮೆ, ಹಾವು ಸೇರಿದ ವಿವಿಧ ಸರಿಸೃಪಗಳನ್ನು ರಕ್ಷಣೆ ಮಾಡಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ರವಾನೆ ಮಾಡಲು ಯತ್ನಿಸುತ್ತಿದ್ದಾಗ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಸೂಟ್‌ಕೇಸ್‌ನಲ್ಲಿ ಆಮೆ, ಹಾವು ಸೇರಿ ವಿವಿಧ ಸರೀಸೃಪಗಳ ಸಾಗಣೆಗೆ ಯತ್ನಿಸುತ್ತಿದ್ದ 32 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಸಾಗಣೆ ವೇಳೆ ಮರಿ ಕಾಂಗರೂ ಸೂಟ್ ಕೇಸ್‌ನಲ್ಲಿಯೇ ಮೃತಪಟ್ಟಿರುವುದು ಕಂಡುಬಂದಿದೆ. ಅಧಿಕಾರಿಗಳು ಜೀವಂತ ಪ್ರಾಣಿಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದು, ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ | Love affair : ಡಿವೋರ್ಸ್‌ ಕೊಡೋವರ್ಗೂ ಕಾಪಾಡಿ ಪ್ಲೀಸ್!‌ ಒಲ್ಲದ ಗಂಡನ ಬಿಟ್ಟು, ನಲ್ಲನ ಜತೆ ಓಡಿ ಬಂದಳು

ಬಾಲಕಿ ಮೇಲೆ ತಿಂಗಳಿನಿಂದ ನಿರಂತರ ಲೈಂಗಿಕ ದೌರ್ಜನ್ಯ; ಶಿರಾಳಕೊಪ್ಪದಲ್ಲಿ ಅಜ್ಮತುಲ್ಲಾ ಅರೆಸ್ಟ್‌

ಶಿವಮೊಗ್ಗ: ಮುಸ್ಲಿಂ ಯುವಕನೊಬ್ಬ (Muslim youngster) ಕಳೆದ ಒಂದು ತಿಂಗಳಿನಿಂದ ಅಪ್ರಾಪ್ತ ವಯಸ್ಸಿನ ಬಾಲಕಿ (Minor girl) ಮೇಲೆ ನಿರಂತರ ಲೈಂಗಿಕ ದೌರ್ಜನ್ಯ (Physical abuse) ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದ್ದು ಈಗ ಆತನನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ (shivamogga News) ಶಿಕಾರಿಪುರದ ಶಿರಾಳಕೊಪ್ಪದಲ್ಲಿ ಈ ಘಟನೆ ನಡೆದಿದೆ. ಶಿರಾಳಕೊಪ್ಪ ಮೂಲಕ ಅಜ್ಮತ್ತುಲ್ಲಾ ಎಂ. ಅಲಿಯಾಸ್ ಇಬ್ಬು (23) ಎಂಬಾತನೇ ಹಿಂದು ಧರ್ಮಕ್ಕೆ ಸೇರಿದ ಬಾಲಕಿಯ ಮೇಲೆ ಕಳೆದ ಒಂದು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿ. ಆತನ ಮೇಲೆ ಪೋಕ್ಸೋ ಕಾಯಿದೆಯಡಿ (Pocso Case) ಕೇಸು ದಾಖಲಾಗಿದೆ.

ಬಾಲಕಿಗೆ ವಿವಿಧ ಆಮಿಷಗಳನ್ನು ಒಡ್ಡಿ, ಆಕೆಯನ್ನು ಪುಸಲಾಯಿತಿ ತನ್ನ ದುಷ್ಕೃತ್ಯಕ್ಕೆ ಆತ ಬಳಸಿಕೊಳ್ಳುತಿದ್ದ ಎಂದು ಹೇಳಲಾಗಿದೆ. ಸಾಕಷ್ಟು ಲೈಂಗಿಕ ಅರಿವು ಇಲ್ಲದ ಬಾಲಕಿಗೆ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆಗ ವಿಚಾರಿಸಿದಾಗ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಬೆಳಕಿಗೆ ಬಂದಿದೆ.

ಇದೀಗ ಶಿರಾಳಕೊಪ್ಪ ಠಾಣೆಯಲ್ಲಿ ಹೆತ್ತವರು ದೂರು ದಾಖಲಿಸಿದ್ದಾರೆ. ಆತನ ಮೇಲೆ ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಮತ್ತು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

Exit mobile version