ಬೆಂಗಳೂರು: ಎಂಥಾ ಕಾಲ ಬಂತು ನೋಡಿ.. ಇಲ್ಲೊಬ್ಬ ಹುಡುಗಿ ತನ್ನ ಕ್ರಶ್‌ನ ಡೇಟ್ ಆಫ್ ಬರ್ತ್ (Date of Birth) ಹೇಳಿಲ್ಲ ಎಂದು ಕಾಲೇಜಿನಲ್ಲಿ ಸೀನಿಯರ್ ಆಗಿರುವ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿಸಿದ್ದಾಳೆ (Attack on senior student by a girl). ಆಕೆ ಹಲ್ಲೆ ಮಾಡಲು ಕರೆದುಕೊಂಡು ಬಂದಿದ್ದು (Students fight) ಯಾರನ್ನು ಎಂದರೆ ಸ್ವತಃ ಆಕೆಯ ಅಣ್ಣನನ್ನು ಮತ್ತು ಆತನ ಗೆಳೆಯರನ್ನು!
ಜೆಪಿ ನಗರ ಮೂರನೇ ಹಂತದಲ್ಲಿರುವ ಪ್ರೆಸಿಡೆನ್ಸಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಮೊಹಮ್ಮದ್ ಅಜೀಮ್ ಪಾಶಾ (Second PU student) ಎಂಬಾತನೇ ಹಲ್ಲೆಗೆ ಒಳಗಾದವನು. ಜಯನಗರ ಮೂರನೇ ಬ್ಲಾಕ್ ನಿವಾಸಿಯಾಗಿರುವ ಈತನ ಮೇಲೆ ಹಲ್ಲೆ ಮಾಡಿಸಿದ್ದು ಯಾರೆಂದರೆ ಅದೇ ಕಾಲೇಜಿಗೆ ಮೊನ್ನೆ ಮೊನ್ನೆಯಷ್ಟೇ ಪ್ರಥಮ ಪಿಯುಸಿಗೆ ಸೇರಿದ್ದ ಮೆಹಖ್ ಖಾನ್. ಹಲ್ಲೆ ಮಾಡಿದ್ದು ಮೆಹಖ್‌ನ ಅಣ್ಣ ಹಸೀಬುದ್ದೀನ್, ಆತನ ಗೆಳೆಯರಾದ ದಾನಿಯಿಲ್ ಖಾನ್, ಹಸೀಬುದ್ದೀನ್, ಝೈನ್, ಶೇಖ್ ಪೇಕ್. ಇದೀಗ ಗಾಯಾಳು ಪಾಶಾ ಜೆಪಿ ನಗರ ಪೊಲೀಸರಿಗೆ ದೂರು ನೀಡಿದ್ದಾನೆ.
ಹಾಗಿದ್ದರೆ ಈ ಘಟನೆಯ ಹಿನ್ನೆಲೆ ಏನು?
ಕಳೆದ ಜುಲೈ 22ರಂದು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳ ಆಹ್ವಾನ ಕಾರ್ಯಕ್ರಮ ಇತ್ತು. ಆವತ್ತು ಮೆಹಖ್ ಖಾನ್ ಗೂ ಮೊಹಮ್ಮದ್ ಅಜೀಮ್ ಪಾಶಾನಿಗೂ ಪರಿಚಯವಾಗಿತ್ತು. ಜುಲೈ 24ರಂದು ಮೆಹಖ್ ಖಾನ್ ಅಜೀಮ್ ಪಾಶಾನನ್ನು ತನ್ನ ದ್ವಿಚಕ್ರ ವಾಹನದಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋಗಿ ಒಬ್ಬ ಹುಡುಗನ ಬರ್ತ್ ಡೇ ಯಾವಾಗ ಎಂದು ಹೇಳುವಂತೆ ಕೇಳಿದ್ದಳು. ಆಗ ಹುಡುಗ ಯಾರೆಂದರೆ ಆಗಷ್ಟೇ ಪ್ರಥಮ ಪಿಯುಸಿಗೆ ಜಾಯಿನ್ ಆಗಿದ್ದ ಮೊಹಮ್ಮದ್ ಉಬೇದುಲ್ಲಾ. ಆದರೆ, ಅಜೀಮ್ ಪಾಶಾ ತನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಅಲ್ಲೇ ಸ್ವಲ್ಪ ಮಾತಿಗೆ ಮಾತು ಬೆಳೆದು ಇಬ್ಬರೂ ತಮ್ಮ ಮನೆಗೆ ಹೋಗಿದ್ದಾರೆ.
ಮರುದಿನ ಅಂದರೆ ಜುಲೈ 25ರಂದು ಮಧ್ಯಾಹ್ನದ ಹೊತ್ತಿಗೆ ಮೆಹಖ್ ಅಜೀಮ್ ಪಾಶಾನ ಬಳಿಗೆ ಬರುತ್ತಾಳೆ. ನೀನು ನನಗೆ ಉಬೇದುಲ್ಲಾನ ಹುಟ್ಟುಹಬ್ಬ ಯಾವಾಗ ಅಂತ ಹೇಳುವುದಿಲ್ಲ ಅಲ್ವಾ ಅಂತ ಕೇಳಿದ್ದಾಳೆ. ನನ್ನಲ್ಲಿ ಇಲ್ಲ ಎಂದು ಆತ ಹೇಳಿದ್ದಾನೆ. ಆಗ ಆಕೆ ನಾನು ಯಾರೆಂದು ತೋರಿಸುತ್ತೇನೆ ಎಂದು ತನ್ನಿಬ್ಬರು ಗೆಳೆಯರಾದ ಝೈನ್ ಮತ್ತು ಶೇಖ್‌ನನ್ನು ಕರೆಸಿಕೊಂಡಿದ್ದಾಳೆ. ಅವರಿಬ್ಬರೂ ಅಜೀಮ್ ಪಾಶಾನನ್ನು ಕಾಲೆಜಿನಿಂದ ಹೊರಗೆ ಕರೆ ತಂದು ಕಬಾಬ್ ಮ್ಯಾಜಿಕ್ ಬಳಿಗೆ ಕರೆದುಕೊಂಡು ಹೋಗಿ ಇತರರನ್ನು ಸೇರಿಸಿ ಹೊಡೆಸಿದ್ದಾಳೆ ಎನ್ನುವುದು ಅಜೀಮ್ ಪಾಶಾ ಹೇಳುವ ಕಥೆ.
ಮಹಮ್ಮದ್ ಉಬೇದುಲ್ಲಾನ ಮೇಲೂ ಕೇಸ್!
ನಿಜವೆಂದರೆ ಹಲ್ಲೆಗೊಳಗಾದ ದ್ವಿತೀಯ ಪಿಯು ವಿದ್ಯಾರ್ಥಿ ಅಜೀಮ್ ಪಾಶಾ ಮೆಹಖ್, ಆಕೆಯ ಅಣ್ಣ ಮತ್ತು ಗೆಳೆಯರ ಮೇಲೆ ಮಾತ್ರವಲ್ಲ, ಯಾರ ಡೇಟ್ ಆಫ್ ಬರ್ತ್ ಕೇಳಿದ್ದಳಲ್ಲ, ಆ ಮಹಮ್ಮದ್ ಉಬೇದುಲ್ಲಾನ ಮೇಲೂ ಕೇಸ್ ಹಾಕಿದ್ದಾನೆ!
ಈ ಪ್ರಕರಣದಲ್ಲಿ ನಿಜಕ್ಕೂ ಅಜೀಮ್ ಪಾಶಾ ಅಮಾಯಕನಾ ಎನ್ನುವ ಬಗ್ಗೆಯೂ ಪೊಲೀಸರು ಗಮನ ಹರಿಸಿದ್ದಾರೆ. ಡೇಟ್ ಆಫ್ ಬರ್ತ್ ಹೇಳಿಲ್ಲ ಎಂಬ ಕಾರಣಕ್ಕೆ ಈ ರೀತಿ ಹಲ್ಲೆ ಮಾಡುತ್ತಾರಾ? ಆಕೆಗೆ ಡೇಟ್ ಆಫ್ ಬರ್ತ್ ಬೇಕು ಎಂದಿದ್ದರೆ ಮಹಮ್ಮದ್ ಉಬೇದುಲ್ಲಾನನ್ನೇ ಕೇಳಬಹುದಿತ್ತಲ್ಲ ಎಂಬ ಪ್ರಶ್ನೆಗಳು ಮೂಡುತ್ತವೆ. ಸರ್‌ಪ್ರೈಸ್ ಕೊಡುವ ಉದ್ದೇಶದಿಂದ ಕೇಳಿದ್ದರೂ ಸಿಗದೆ ಇದ್ದಾಗ ಅಣ್ಣನನ್ನು ಕರೆಸಿಕೊಂಡು ಬಂದು ಹೊಡೆಸುತ್ತಾರಾ? ಹಾಗಿದ್ದರೆ ಅಜೀಮ್ ಪಾಶಾನೇ ಮೆಹಖ್ ವಿಚಾರದಲ್ಲಿ ಏನಾದರೂ ಕೆಟ್ಟದಾಗಿ ನಡೆದುಕೊಂಡಿದ್ದನಾ? ಅದಕ್ಕಾಗಿ ಮೆಹಖ್ ಅಣ್ಣನನ್ನು ಕರೆಸಿ ಹೊಡೆಸಿದಳಾ? ಅದಕ್ಕೆ ಅಜೀಮ್ ಈ ಕಥೆ ಕಟ್ಟಿದನಾ? ಇನ್ನು ಮುಂದೆ ಮೆಹಖ್ ಖಾನ್ ನೀಡಲಿರುವ ಕೌಂಟರ್ ಕಂಪ್ಲೇಂಟ್‌ನಲ್ಲಿ ಪ್ರಕರಣದ ಬೇರೆ ಬೇರೆ ಮುಖಗಳು ತೆರೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: Assault Case: ಕುಣಿಗಲ್ ಪಟ್ಟಣದಲ್ಲಿ ಹಾಡ ಹಗಲೇ ಕುಣಿದ ಲಾಂಗ್- ಮಚ್ಚು, ಯುವಕನಿಗೆ ಗಂಭೀರ ಹಲ್ಲೆ