ಬೆಂಗಳೂರು: ನಾವಿನ್ನು ಮನೆಗೆ ಬರಲ್ಲ, ನಮ್ಮನ್ನು ಹುಡುಕಬೇಡಿ ಎಂದು ಪತ್ರ ಬರೆದು ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು (Students Missing case) ನಾಪತ್ತೆಯಾಗಿದ್ದು, ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಪ್ರಕರಣದಲ್ಲೂ ಇದ್ದಕ್ಕಿದ್ದಂತೆ ಜುಲೈ 25ರಂದು ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು ಇಬ್ಬರು ಸ್ನೇಹಿತೆಯರಾಗಿದ್ದು, ನಾವಿನ್ನು ಮನೆಗೆ ಬರವುದಿಲ್ಲ, ಇನ್ನು ಹುಡುಕಬೇಡಿ ಎಂದು ಪತ್ರದ ಮೂಲಕ ತಿಳಿಸಿ ನಾಪತ್ತೆಯಾಗಿದ್ದಾರೆ. ಪೋಷಕರು ದೂರು ನೀಡಿದ್ದು, ಹೈಗ್ರೌಂಡ್ಸ್ ಪೊಲೀಸರಿಂದ ಇಬ್ಬರು ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ಶುರುವಾಗಿದೆ.
ಕಳೆದ ಜುಲೈ 25ರಂದು ಇದೀಗ ಇದೇ ರೀತಿಯ ಪ್ರಕರಣವೊಂದು ನಡೆದಿದ್ದು, ರಾಯಚೂರಿನ ಸರ್ಕಾರಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು. ಬಳಿಕ ತನಿಖೆ ಕೈಗೊಂಡ ಪೊಲೀಸರಿಗೆ ಅವರು ಹುಬ್ಬಳ್ಳಿಯಲ್ಲಿ ಇರುವ ಮಾಹಿತಿ ಸಿಕ್ಕಿದ್ದರಿಂದ ಕಾರ್ಯಾಚರಣೆ ನಡೆಸಿ ವಾಪಸ್ ಪೋಷಕರ ಬಳಿಗೆ ಕರೆದೊಯ್ದು ಬಿಟ್ಟಿದ್ದರು.
ಇದನ್ನೂ ಓದಿ | Students Missing case | ಸರ್ಕಾರಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ; ಪೋಷಕರಲ್ಲಿ ಆತಂಕ