ಬೆಂಗಳೂರು, ಕರ್ನಾಟಕ: ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ನಟ ಶಿವಣ್ಣನ ಪತ್ನಿ ಗೀತಾ ಶಿವರಾಜಕುಮಾರ್ ಅವರು ತಮ್ಮ ಮುಂದಿನ ನಡೆಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಹೋದರ ಈಗಾಗಲೇ ಕಾಂಗ್ರೆಸ್‌ನಲ್ಲಿರುವುದರಿಂದ ತಾವು ಕಾಂಗ್ರೆಸ್ ಸೇರ್ಪಡೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ವಿಸ್ತಾರನ್ಯೂಸ್ ಜತೆ ಮಾತನಾಡಿರುವ ಅವರು, ”ನಟ ದರ್ಶನ ಹಾಗೂ ಸುದೀಪ್ ಅವರು ಯಾವ ರಾಜಕೀಯ ಪಕ್ಷವನ್ನು ಸೇರಿಲ್ಲ. ಅವರು ಕಾಂಗ್ರೆಸ್ ಪಕ್ಷದ ಪರವಾಗಿಯೂ ಪ್ರಚಾರ ಮಾಡಬಹುದು” ಎಂದು ಹೇಳಿದ್ದಾರೆ(Karnataka Election 2023).
ಸುದೀಪ್ ಹಾಗೂ ದರ್ಶನ್ ಯಾವ ಪಕ್ಷ ಸೇರಿಲ್ಲ. ಅವರಿಬ್ಬರು ಸ್ನೇಹಿತರು ಮತ್ತು ಕಲಾವಿದರು. ಸುದೀಪ್ ಮತ್ತು ದರ್ಶನ್ ಅವರು ಕಾಂಗ್ರೆಸ್ ಪಕ್ಷದ ಪರವಾಗಿಯೂ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಯಲಹಂಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ ಮಾಡಿದ್ದಾರೆ. ಸುದೀಪ್ ಕೂಡಾ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಬಹುದು. ಅವರು ಉತ್ತಮ ಸ್ನೇಹಿತರು. ಭೇಟಿ ಸಂದರ್ಭದಲ್ಲಿ ನಾನು ಸುದೀಪ್ ಏನು ಮಾತುಕತೆ ಆಗಿದೆ ಎಂಬುದು ನಮಗೆ ಗೊತ್ತು. ಅದನ್ನು ಹೇಳಲು ಆಗುತ್ತಾ? ಅವರು ಡಿಕೆಶಿ ಕೂಡಾ ಸ್ನೇಹಿತ ಅಂದಿದ್ದಾರಲ್ವಾ? ಎಂದು ಗೀತಾ ಶಿವರಾಜಕುಮಾರ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಪರವಾಗಿಯೂ ಸ್ಟಾರ್ಸ್ ಪ್ರಚಾರ ಮಾಡುತ್ತಾರೆ ಎಂದ ಸಾಧುಕೋಕಿಲ
ಸಂಗೀತ ನಿರ್ದೇಶಕ, ಹಾಸ್ಯ ಕಲಾವಿದ ಸಾಧು ಕೋಕಿಲ ಮಾತನಾಡಿ, ಕಾಂಗ್ರೆಸ್‌ನಿಂದ ಸ್ಟಾರ್ ಪ್ರಚಾರಕರಾಗಿ ಹೋಗ್ತಾ ಇರುವೆ. ಈಗಾಗ್ಲೇ ವರುಣಾ ದಲ್ಲಿ ಪ್ರಚಾರ ಮಾಡಿರುವೆ. ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡಿದ್ದೇನೆ. ನನ್ನ ಜೊತೆ ಮತ್ತಷ್ಟು ಸ್ಟಾರ್ಸ್ ಕಾಂಗ್ರೆಸ್ ಪ್ರಚಾರಕ್ಕೆ ಬರೋ ಸಾಧ್ಯತೆ ಇದೆ ಎಂದು ಹೇಳಿದರು.
ಡಿ ಕೆ ಶಿವಕುಮಾರ್ ಎಲ್ಲೆಲ್ಲಿ ಹೇಳ್ತಾರೋ ಅಲ್ಲೆಲ್ಲ ಹೋಗಿ ಪ್ರಚಾರ ಮಾಡ್ತೇನೆ ಎಂದು ಹೇಳಿದ ಸಾಧು ಕೋಕಿಲ ಅವರು, ಗೀತಾ ಶಿವರಾಜಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದರಿಂದ ಇಲ್ಲಿಗೆ ಬಂದಿರುವೆ. ಅವರಿಗೋಸ್ಕರನೇ ನಾನು ಇಲ್ಲಿಗೆ ಬಂದಿರೋದು. ಕಲಾವಿದರನ್ನ ಯಾವತ್ತೂ ಬಿಟ್ಟು ಕೊಡೋಲ್ಲ ಅಂತ . ಹೇಳಿದ್ದಾರೆಇದರಿಂದ ಕಲಾವಿದರಿಗೆ ತುಂಬಾ ಸಹಾಯ ಆಗುತ್ತದೆ. ಶಿವಣ್ಣ ಅಂದ್ರೆ ನಂಗೆ ತುಂಬಾ ಇಷ್ಟ.ಹಾಗೇನೇ ಗೀತಕ್ಕ ಸಹ ಹೌದು. ಅಧಿಕ್ಕಾಗಿಯೇ ನಾನು ಇಲ್ಲಿ ಬಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕೃತ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಸಾಧುಕೋಕಿಲ, ನಾನು ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನೋಡೋಣ ಎಂದು ಮಾತು ಮುಗಿಸಿದರು ಅವರು.