Site icon Vistara News

Suicide Case: ಜೂಜಾಟಕ್ಕಾಗಿ ಮೀಟರ್‌ ಬಡ್ಡಿಗೆ ಸಾಲ ಕೊಡಿಸಿ, ಜಾಮೀನು ಹಾಕಿದ್ದವ ಆತ್ಮಹತ್ಯೆ; ಸಾವಿಗೂ ಮುನ್ನ ಸೆಲ್ಫಿ ವಿಡಿಯೊ

suicide case in ramanagara

ರಾಮನಗರ: ಹಣದ ಜಾಮೀನಿಗೆ ಸಹಿ ಹಾಕಿರುವ ಸಂಬಂಧ ಮಾನಸಿಕ ಹಿಂಸೆ (Mental violence), ಬೆದರಿಕೆಗೆ ಬೇಸತ್ತ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೊ (Selfie Video) ಮಾಡಿ ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು ದಕ್ಷಿಣದ ಬನ್ನೇರುಘಟ್ಟ ರಸ್ತೆ ಸಮೀಪ ಪ್ರಕರಣ ನಡೆದಿದ್ದು, ಶಿವರಾಜ್ (33) ಮೃತ ವ್ಯಕ್ತಿಯಾಗಿದ್ದಾರೆ. ಹಣದ ಜಾಮೀನಿಗೆ ಸಹಿ ಹಾಕಿದ್ದ ಸಂಬಂಧ ಮಾನಸಿಕ ಹಿಂಸೆ, ಬೆದರಿಕೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆತ ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.

ಜೂಜಾಟಕ್ಕಾಗಿ ರೇಣುಕಾರಾಧ್ಯ‌ ಎಂಬಾತನಿಂದ ಶಿವರಾಜ್ ಸ್ನೇಹಿತರು 30 ಸಾವಿರ ರೂಪಾಯಿಯನ್ನು ಸಾಲವನ್ನಾಗಿ ಪಡೆದಿದ್ದರು. ಈ ಮೀಟರ್ ಬಡ್ಡಿ ರೂಪದ ಸಾಲಕ್ಕೆ ಶಿವರಾಜ್‌ ಜಾಮೀನು ನೀಡಿದ್ದ. ಆದರೆ, ಸ್ನೇಹಿತರು ಅಸಲು ಹೋಗಲಿ, ಮೀಟರ್ ಬಡ್ಡಿಯನ್ನೂ ಕಟ್ಟಿಲ್ಲ. ಈ ಕಾರಣಕ್ಕಾಗಿ ರೇಣುಕಾರಾಧ್ಯ ಆಗಾಗ ಕೇಳಿ ಕೇಳಿ ಕೊನೆಗೆ ಬೆದರಿಕೆ ಒಡ್ಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದಾದ ಬಳಿಕ ರೇಣುಕಾರಾಧ್ಯ ಕಡೆಯವರು ಬೈಕ್ ಅನ್ನು ಸಹ ತೆಗೆದುಕೊಂಡು ಹೋಗಿದ್ದರು. ಅಲ್ಲದೆ, ಹಣ ಕಟ್ಟುವಂತೆ ಇಲ್ಲವೇ ಕಟ್ಟಿಸುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಈ ಕಾರಣದಿಂದ ತನಗೆ ಜೀವನ ಮಾಡಲು ಆಗುತ್ತಿಲ್ಲ. ಮಾನಸಿಕವಾಗಿ ನೊಂದಿದ್ದೇನೆ ಎಂದು ವಿಡಿಯೊ ಮಾಡಿದ್ದ ಶಿವರಾಜ್‌ ಆರೋಪಿಗಳ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: POCSO Case: ಪೋಕ್ಸೋ ಆರೋಪಿಗೆ ಅನುಕೂಲ ಮಾಡಲು 3 ಲಕ್ಷಕ್ಕೆ ಬೇಡಿಕೆ ಇಟ್ಟ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ

ಈ ಪ್ರಕರಣ ಸಂಬಂಧ ಧನು, ವೆಂಕಟೇಶ, ರೇಣುಕಾರಾಧ್ಯ ಎಂಬುವವರ ಮೇಲೆ ಪ್ರಕರಣವನ್ನು ದಾಖಲು ಮಾಡಲಾಗಿದೆ. ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Exit mobile version