ವಿಜಯನಗರ: ಇಲ್ಲಿನ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ (Suicide Case) ಮಾಡಿಕೊಳ್ಳುತ್ತಿದ್ದರೂ ಅದನ್ನು ತಪ್ಪಿಸದೆ ಸ್ಥಳೀಯರು ವಿಡಿಯೊ ಮಾಡುತ್ತಿದ್ದ ಅಮಾನವೀಯ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ವಿದ್ಯುತ್ ಕಂಬಕ್ಕೆ ಮಂಜುನಾಥ್ (25) ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನುಮನಹಳ್ಳಿಯ ಫ್ಲೈಓವರ್‌ನಲ್ಲಿ ಮಂಜುನಾಥ ಮೇಲಿನ ವಿದ್ಯುತ್ ಕಂಬ ಏರಿದ ಮಂಜುನಾಥ್, ಉಟ್ಟಿದ್ದ ಲುಂಗಿಯನ್ನೇ ಕುಣಿಕೆಯಾಗಿ ಮಾಡಿಕೊಂಡು ನೇಣಿಗೆ ಶರಣಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ನೇಣು ಹಾಕಿಕೊಳ್ಳುವ ವಿಡಿಯೊ ಚಿತ್ರೀಕರಣ
ಮಂಜುನಾಥ್ ಫ್ಲೈಓವರ್‌ನ ಕಂಬ ಏರಿ ನೇಣು ಹಾಕಿಕೊಳ್ಳುತ್ತಿದ್ದರೆ, ಸ್ಥಳದಲ್ಲಿದ್ದವರು ಮೊಬೈಲ್ ಮೂಲಕ ವಿಡಿಯೊ ಮಾಡಿಕೊಳ್ಳುತ್ತಿದ್ದರೇ ವಿನಃ ಎದುರಿಗೆ ಕಾಣುತ್ತಿದ್ದರೂ ತಪ್ಪಿಸಲು ಮುಂದಾಗಿಲ್ಲ. ಅಲ್ಲದೆ, ಆತ ಕುಡಿದು ಹೀಗೆ ಮಾಡಿಕೊಳ್ಳುತ್ತಿದ್ದಾನೆ ಎಂದು ಮಾತಾಡಿಕೊಂಡಿದ್ದಾರೆ. ಅಲ್ಲದೆ, ಹಾಗೇ ವಿಡಿಯೊ ಮಾಡಿಕೊಂಡಿದ್ದಾರೆ. ಇದು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ | Suicide Case | ವಿದ್ಯುತ್ ಕಂಬಗಳನ್ನು ನೆಡುವ ಟ್ರ್ಯಾಕ್ಟರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ