Site icon Vistara News

Suicide Case | ವಿಜಯನಗರ, ಶಿವಮೊಗ್ಗದಲ್ಲಿ ಪ್ರತ್ಯೇಕ ಕಡೆ ಇಬ್ಬರು ರೈತರು ಸೇರಿ ಮೂವರ ಆತ್ಮಹತ್ಯೆ

ವಿಜಯಪುರ/ಶಿವಮೊಗ್ಗ: ಸಾಲಗಾರರ ಕಾಟಕ್ಕೆ ರೈತರಿಬ್ಬರು ಪ್ರತ್ಯೇಕ ಕಡೆಗಳಲ್ಲಿ ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಹಾಗೂ ವಿಜಯನಗರದಲ್ಲಿ ನಡೆದಿದ್ದರೆ, ಇನ್ನೊಬ್ಬರು ವಿಜಯನಗರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ.

ವಿಜಯಪುರ ನಗರದ ಸಾಯಿಪಾರ್ಕ್ ಬಳಿ 43 ವರ್ಷದ ಭೀರಪ್ಪ ಭೀಮಪ್ಪ ಅಬಲಾಪುರ ಎಂಬುವವರು ನೇಣಿಗೆ ಶರಣಾದ ದುರ್ದೈವಿ. ಸಾಲಗಾರರ ಕಾಟಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ನಿರ್ಮಾಣಕ್ಕೆಂದು 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲಗಾರರು ಹಣ ನೀಡುವಂತೆ ಕೇಳುತ್ತಿದ್ದರು, ಆದರೆ ಹಣ ಹೊಂದಿಸಲು ಆಗದೆ ಗುರುವಾರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದ ರೈತ ಆತ್ಮಹತ್ಯೆ

ಸಾಲದ ಬಾಧೆ ತಾಳಲಾರದೆ ರೈತರೊಬ್ಬರು ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಘಟನೆ ನಡೆದಿದೆ. ತಾಂಡಾದ ದೊಡ್ಮನೆ ನಿವಾಸಿ ಜಯನಾಯ್ಕ ಎಂಬಾತತನ್ನ ಚಿಕ್ಕಪ್ಪನ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತರಲಘಟ್ಟ ತಾಂಡ ಸರ್ವೆ ನಂಬರ್ 44ರಲ್ಲಿ ತನ್ನ ಹೆಂಡತಿಯ ಹೆಸರಿಗೆ ಮೂರು ಎಕರೆ 37 ಗುಂಟೆ ಜಮೀನಿನ ಇದ್ದು, ಇದರ ಮೇಲೆ 6 ಲಕ್ಷ ಬ್ಯಾಂಕ್ ಸಾಲ ಮಾಡಿಕೊಂಡಿದ್ದರು. ಸರ್ವೆ ನಂಬರ್ 39/5 ರಲ್ಲಿ ಸ್ವತಃ ತನ್ನ ಹೆಸರಿಗಿದ್ದ ಒಂದು ಎಕರೆ ಜಮೀನಿನ ಮೇಲೂ ಎರಡು ಲಕ್ಷ ಸಾಲ ಮಾಡಿಕೊಂಡಿದ್ದ ಜಯನಾಯ್ಕ ಅವರಿಗೆ ಒಟ್ಟು ಎಂಟು ಲಕ್ಷ ರೂಪಾಯಿ ಸಾಲವಿತ್ತು. ಜತೆಗೆ ಕೈ ಸಾಲವೂ ಇತ್ತು ಎನ್ನಲಾಗಿದೆ. 15 ದಿನಗಳ ಹಿಂದೆ ಬ್ಯಾಂಕಿನಿಂದ ಜಯನಾಯ್ಕ್‌ಗೆ ನೋಟಿಸ್ ಬಂದಿತ್ತು. ಇತ್ತ ಎರಡು ವರ್ಷದಿಂದ ಶುಂಠಿ, ಮೆಕ್ಕೆ‌ಜೋಳ‌ ಬೆಳೆ ಕೈಹಿಡಿದಿರಲಿಲ್ಲ. ಈ ಬಾರಿಯೂ ಅತಿವೃಷ್ಟಿಯಿಂದ ಬೆಳೆ ನಾಶವಾಗಿತ್ತು. ಇದರಿಂದ ನೊಂದ ಜಯನಾಯ್ಕ್‌ ನೇಣಿಗೆ ಶರಣಾಗಿದ್ದಾರೆ.

ಕಬ್ಬಿಣದ ತಂತಿಗೆ ನೇಣಿಗೆ ಶರಣು

ವಿಜಯಪುರದ ಪ್ರತಾಪ್ ನಗರದಲ್ಲಿ ಕಬ್ಬಿಣದ ತಂತಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನಂದ ವರನಾಳ ಮೃತಪಟ್ಟಿರುವ ದುರ್ದೈವಿ. ಆನಂದ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆತನು ಧರಿಸಿದ್ದ ಅಂಗಿಯಿಂದಲೇ ನೇಣು ಬಿಗಿದುಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಜಯಪುರ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ | ಪತಿಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮಹಿಳೆ ಮನನೊಂದು ಆತ್ಮಹತ್ಯೆ

Exit mobile version