Site icon Vistara News

Suicide Case: ಕೆ.ಸುಧಾಕರ್‌ ಸೋಲಿನಿಂದ ನೊಂದ ಅಭಿಮಾನಿ ಆತ್ಮಹತ್ಯೆ, ಬದುಕುಳಿದ ಸಾ.ರಾ ಮಹೇಶ್‌ ಅಭಿಮಾನಿ

venkatesh suicide

ಚಿಕ್ಕಬಳ್ಳಾಪುರ/ಮೈಸೂರು: ತಮ್ಮ ನೆಚ್ಚಿನ ನಾಯಕರು ಚುನಾವಣೆಯಲ್ಲಿ ಸೋತದ್ದರಿಂದ ನೊಂದಿರುವ ಇಬ್ಬರು ಅಭಿಮಾನಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಒಬ್ಬ (Suicide Case) ಸತ್ತುಹೋಗಿದ್ದಾನೆ. ಇನ್ನೊಬ್ಬ ಬದುಕುಳಿದಿದ್ದಾನೆ.

ಮಾಜಿ ಸಚಿವ, ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ಗೆ ಚುನಾವಣೆಯಲ್ಲಿ ಸೋಲಾದ ಹಿನ್ನೆಲೆಯಲ್ಲಿ ನೊಂದ ಅವರ ಕಟ್ಟಾ ಅಭಿಮಾನಿಯಾಗಿದ್ದ ಚಿತ್ತಾರ ವೆಂಕಟೇಶ (46) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ 17ನೇ ವಾರ್ಡಿನ ಕೋಟೆ ನಿವಾಸಿಯಾದ ಈತ ಚಿಕ್ಕಬಳ್ಳಾಪುರ ತಾಲೂಕಿನ ವಡ್ರೆಪಾಳ್ಯ ಬಳಿ ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾ.ರಾ ಮಹೇಶ್‌ ಅಭಿಮಾನಿ ಆತ್ಮಹತ್ಯೆ ಯತ್ನ

ಮೈಸೂರು: ಕೆ.ಆರ್‌ ನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸಾ.ರಾ ಮಹೇಶ್ ಅವರು ಸೋಲು ಕಂಡಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕೆ.ಆರ್.ನಗರ ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವೆಂಕಟೇಶ್(47) ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದು, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಸೋಲಿನಿಂದ ಮನನೊಂದಿದ್ದ ವೆಂಕಟೇಶ್, ಗ್ರಾಮದಲ್ಲಿ ಎದುರಾಳಿ ಪಕ್ಷದ ಕಾರ್ಯಕರ್ತರ ಟೀಕೆಯಿಂದ ಹತಾಶರಾಗಿದ್ದರು.‌ ಕೆ.ಆರ್ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: Chikkaballapur Election Results : ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್‌ರನ್ನು ಹೀನಾಯವಾಗಿ ಸೋಲಿಸಿದ ಪ್ರದೀಪ್‌ ಈಶ್ವರ್‌

Exit mobile version