Site icon Vistara News

Suicide case | ಸಾಲ ಭಾದೆ ತಾಳದೆ ಯುವ ರೈತ ಆತ್ಮಹತ್ಯೆ

Suicide case

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಯುವ ರೈತನೊಬ್ಬ ಸಾಲಭಾದೆ ತಾಳಲಾರದೆ ಶುಕ್ರವಾರ ಕೆರೆಗೆ ಹಾರಿ ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾರೆ.

ಗ್ರಾಮದ ಎಂ.ಕಿರಣ್(24) ಮೃತ ರೈತ. ಕಿರಣ್ ತನ್ನ ತಾಯಿಯ ಜಮೀನಿನಲ್ಲಿ ಶುಂಠಿ, ತಂಬಾಕು, ರಾಗಿ ಸೇರಿದಂತೆ ಇನ್ನಿತರ ಬೆಳೆಯನ್ನು ಬೆಳೆಯುಲು ವಿವಿಧ ಬ್ಯಾಂಕ್, ಮಹಿಳಾ ಸಂಘಗಳು, ಖಾಸಗಿ ಫೈನಾನ್ಸ್‌ಗಳ ಸಹಿತ ಕೈಸಾಲವನ್ನೂ ಮಾಡಿದ್ದರು.

ಮೃತ ರೈತ ಎಂ.ಕಿರಣ್

ಈ ಮೂಲಕ ಸುಮಾರು 6 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ಬೆಳೆ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಶುಕ್ರವಾರ ಮಧ್ಯಾಹ್ನ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತನ ತಾಯಿ ಶಶಿಕಲಾ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ. ಬೆಟ್ಟದಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ | ಸೊರಬದ ಯುವ ರೈತ ಆತ್ಮಹತ್ಯೆಗೆ ಶರಣು, ಅಕಾಲಿಕ ಮಳೆಯಿಂದ ಕೈಕೊಟ್ಟ ಬೆಳೆ

Exit mobile version