Site icon Vistara News

Suicide | ಸ್ಕೂಲ್‌ನಲ್ಲಿ ಎಲ್ಲರೆದರು ಟೀಚರ್‌ ಬೈದರೆಂದು ನೇಣಿಗೆ ಶರಣಾದ ವಿದ್ಯಾರ್ಥಿನಿ!

Suicides In India belagavi bailahongala

ಬೆಂಗಳೂರು: ಶಾಲೆಯಲ್ಲಿ ಎಲ್ಲರೆದರು ಟೀಚರ್‌ ಬೈದಿದ್ದಕ್ಕೆ ಅವಮಾನವಾಗಿದೆ ಎಂದು ಭಾವಿಸಿ, ಮನನೊಂದು ಬೆಂಗಳೂರಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ನಡೆದಿದೆ. ಬಾಣಸವಾಡಿಯ ಪಿಳ್ಳಾರೆಡ್ಡಿ ನಗರದಲ್ಲಿ ಅಮೃತಾ ಎಂಬಾಕೆ ನೇಣಿಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ.

ಮರಿಯಮ್‌ ಶಾಲೆಯಲ್ಲಿ ಜಮಾಯಿಸಿದ ಅಮೃತಳ ಪೋಷಕರು

ಅಮೃತ ಬಾಣಸವಾಡಿಯ ಮರಿಯಮ್ ಶಾಲೆಯಲ್ಲಿ ಓದುತ್ತಿದ್ದಳು. ಕ್ಲಾಸ್‌ನಲ್ಲಿ ಎಲ್ಲರ ಮುಂದೆ ಶಿಕ್ಷಕಿಯೊಬ್ಬರು ಬೈದಿದ್ದಾರೆನ್ನಲಾಗಿದೆ. ಇದು ಆಕೆಗೆ ಭಾರಿ ಅಪಮಾನವಾದಂತೆ ಆಗಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದಾಳೆ. ಈ ನೋವಿನಿಂದ ಹೊರ ಬರಲು ಆಗದೆ, ಭಾನುವಾರ ಸಂಜೆ 5.15ರ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ಅಮೃತ ಹಾಗೂ ಡೆತ್‌ನೋಟ್‌

ಡೆತ್‌ನೋಟ್‌ ಬರೆದಿಟ್ಟ ಅಮೃತ
ಅಮೃತ ಡೆತ್‌ನೋಟ್ ಬರೆದಿಟ್ಟಿದ್ದು, “ಅಮ್ಮಾ, ನನ್ನನ್ನು ಕ್ಷಮಿಸಿಬಿಡು. ನನಗೆ ಶಾಲೆಯಲ್ಲಾದ ಘಟನೆಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಅಪರಾಧಿ ಪ್ರಜ್ಞೆಯನ್ನು ಹೊತ್ತುಕೊಂಡು ಬಾಳಲು ಇಷ್ಟಪಡಲಾರೆ” (Mom am sorry am not able to forget in school. I cannot live with this guilty) ಎಂದು ಬರೆದುಕೊಂಡಿದ್ದಾಳೆ. ಕೊನೆಯಲ್ಲಿ I love u mom, daddy ಎಂದೂ ಬರೆದಿದ್ದಲ್ಲದೆ, ತಾತ, ಅಜ್ಜಿ ಹೆಸರನ್ನೂ ಉಲ್ಲೇಖ ಮಾಡಿದ್ದಾಳೆ.

ಕಾಪಿ ಚೀಟಿ ತಂದಿದ್ದಳೆಂದು ನಿಂದಿಸಿದ್ದ ಕ್ಲಾಸ್‌ ಟೀಚರ್‌
ಕಾಪಿ ಚೀಟಿ ತಂದಿದ್ದಳು ಎಂದು ಸ್ಕೂಲ್‌ ಟೀಚರ್ ಶಾಲಿನಿ ಎಂಬುವವರು ನಿಂದಿಸಿದ್ದರು. ಕಳೆದ ನಾಲ್ಕೈದು ದಿನಗಳಿಂದ ಕ್ಲಾಸ್‌ನಲ್ಲಿ ಟೀಚರ್‌ ಹಾಗೂ ಸ್ನೇಹಿತರು ಅವಮಾನ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಅಮೃತ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಮೃತ ತಂದೆ-ತಾಯಿಗೆ ಒಬ್ಬಳೇ ಮಗಳಾಗಿದ್ದಳು. ಈಗ ಆಕೆಯನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ | Suicide | ತಂದೆ-ತಾಯಿಯನ್ನು ಮನೆಯಲ್ಲಿರಿಸಿಕೊಳ್ಳಲು ಒಪ್ಪದ ಪತ್ನಿ: ಮನನೊಂದ ಅಮ್ಮ-ಮಗ ಆತ್ಮಹತ್ಯೆ

Exit mobile version