Site icon Vistara News

Sullia Election Results: ಸುಳ್ಯ ಗೆದ್ದ ಭಾಗೀರಥಿ ಮುರಳ್ಯ; ಬಿಜೆಪಿ ತೆಕ್ಕೆಯಲ್ಲೇ ಉಳಿದ ಕ್ಷೇತ್ರ

Sullia Election results winner Bhagirathi Muralya

ಸುಳ್ಯ: 30 ವರ್ಷಗಳಿಂದ ಬಿಜೆಪಿ ವಶದಲ್ಲಿರುವ ಸುಳ್ಯ ವಿಧಾನಸಭಾ ಮೀಸಲು ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಈ ಕ್ಷೇತ್ರದಲ್ಲಿ ಫಲಿತಾಂಶ (Sullia Election Results) ಬಂದಿದ್ದು, ಬಿಜೆಪಿಯ ಭಾಗೀರಥಿ ಮುರಳ್ಯ ಅವರು ಜಯಗಳಿಸಿದ್ದಾರೆ. ಈ ಮೂಲಕ ಬಿಜೆಪಿ ಪಾರುಪತ್ಯವುಳ್ಳ ಕ್ಷೇತ್ರ ಎಂಬುದನ್ನು ಸಾಬೀತುಪಡಿಸಿಕೊಂಡಿದೆ.

ಅಭ್ಯರ್ಥಿಗಳ ಬದಲಾವಣೆ

ಆರು ಅವಧಿಗೆ ಶಾಸಕರಾಗಿದ್ದ ಎಸ್. ಅಂಗಾರ ಅವರು ಇಲ್ಲಿ ಸೋಲಿಲ್ಲದ ಸರದಾರ ಆಗಿದ್ದರು. ಆದರೆ, ಈ ಬಾರಿ ಅಂಗಾರ ಅವರ ವಿರುದ್ಧ ಜನಾಕ್ರೋಶವಿದೆ ಎಂಬ ಕಾರಣಕ್ಕೆ ಟಿಕೆಟ್ ನಿರಾಕರಿಸಲಾಗಿತ್ತು. ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಭಾಗೀರಥಿ ಮುರಳ್ಯ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ಇಲ್ಲಿ ಕಳೆದ ನಾಲ್ಕು ಬಾರಿ ಡಾ. ರಘು ಅವರನ್ನು ಕಣಕ್ಕಿಳಿಸಿತ್ತಾದರೂ ಗೆಲುವಿನ ಸಮೀಪ ಬಂದಿದ್ದ ಅವರಿಗೆ ಗೆಲುವು ಒಲಿದಿರಲಿಲ್ಲ. ಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸಿ ಜಿ. ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು.

ಸುಳ್ಯ ಚುನಾವಣಾ ಫಲಿತಾಂಶ

ಆದರೆ, ಇದು ಬಿಜೆಪಿಯ ಭದ್ರಕೋಟೆಯಾಗಿದ್ದರಿಂದ ಸಹಜವಾಗಿಯೇ ಜನರು ಪಕ್ಷವನ್ನು ಬಿಟ್ಟು ಬೇರೆ ಕಡೆಗೆ ನೋಟ ಬೀರಲಿಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್‌ ನಡೆಸಿದ ಕಸರತ್ತು ಫಲ ಕೊಡಲಿಲ್ಲ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಬಾರಿಯ ಫಲಿತಾಂಶ
ಎಸ್ ಅಂಗಾರ ( ಬಿಜೆಪಿ): 95205 ಡಾ.ರಘು ( ಕಾಂಗ್ರೆಸ್ ) 69137 ಗೆಲುವಿನ ಅಂತರ : 26068

ಈ ಬಾರಿಯ ಚುನಾವಣೆ ಫಲಿತಾಂಶ
ಭಾಗೀರಥಿ ಮುರಳ್ಯ ( ಬಿಜೆಪಿ): 93911 | ಜಿ. ಕೃಷ್ಣಪ್ಪ (ಕಾಂಗ್ರೆಸ್‌) 63037 | ಗೆಲುವಿನ ಅಂತರ: 30884 | ನೋಟಾ: 2562

Exit mobile version