Site icon Vistara News

Suraj Revanna Case: ಅಣ್ಣ ಸೂರಜ್‌ 8 ದಿನ ಸಿಐಡಿ ಕಸ್ಟಡಿಗೆ; ತಮ್ಮ ಪ್ರಜ್ವಲ್‌ ನ್ಯಾಯಾಂಗ ಬಂಧನಕ್ಕೆ!

Suraj Revanna Case

ಬೆಂಗಳೂರು: ಸಲಿಂಗ ಕಾಮ ಪ್ರಕರಣದಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಎಂಎಲ್‌ಸಿ ಸೂರಜ್‌ ರೇವಣ್ಣನನ್ನು (Suraj Revanna Case) 8 ದಿನ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶರಾದ ಕೆ.ಎನ್‌.ಶಿವಕುಮಾರ್‌ ಅವರು ಸೂರಜ್‌ನನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ವಿಚಾರಣೆಗಾಗಿ ಹತ್ತು ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, 10 ದಿನಕ್ಕೆ ಬದಲಾಗಿ 8 ದಿನ ಸಿಐಡಿ ಕಸ್ಟಡಿಗೆ ನೀಡಲು ಸೂಚಿಸಿದೆ. ಇದರಿಂದ ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ.

ಜುಲೈ 8ರವರೆಗೆ ಪ್ರಜ್ವಲ್‌ಗೆ ನ್ಯಾಯಾಂಗ ಬಂಧನ

ಅಣ್ಣ ಸೂರಜ್ ರೇವಣ್ಣ ಅರ್ಜಿ ವಿಚಾರಣೆ ಮುಗಿಯುತ್ತಿದ್ದಂತೆ ಪ್ರಜ್ವಲ್ ರೇವಣ್ಣನನ್ನು (Prajwal Revanna) ಕೋರ್ಟ್‌ಗೆ ಎಸ್ಐಟಿ ಟೀಂ ಹಾಜರುಪಡಿಸಿತು. ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್‌ನ ಕಸ್ಟಡಿಗೆ ಪಡೆಯಲಾಗಿತ್ತು. ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ 42 ಎಸಿಎಂಎಂ ಕೋರ್ಟ್‌ಗೆ ಎಸ್ಐಟಿ ಹಾಜರು ಪಡಿಸಿದೆ. ಹೀಗಾಗಿ ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ‌ ಕೋರ್ಟ್‌ ಆದೇಶ ನೀಡಿದೆ.

ಸೋದರ ಸೂರಜ್ ರೇವಣ್ಣ ಕೇಸ್‌ನ ಆದೇಶ ಬರೆಸುತ್ತಿರುವುದನ್ನು ನೋಡಿದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸಿಐಡಿ‌ ಕಸ್ಟಡಿಗೆ ಹೋಗಲಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಅಣ್ಣನನ್ನು ಎಷ್ಟು ದಿನ ಕಸ್ಟಡಿಗೆ ನೀಡಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳನ್ನು ಪ್ರಜ್ವಲ್ ಕೇಳಿದ್ದಾರೆ.

ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

suraj revanna shivakumar

ಹಾಸನ: ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ (Homosexuality, abnormal sexual abuse, physical abuse) ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಂಎಲ್‌ಸಿ ಸೂರಜ್‌ ರೇವಣ್ಣ (Suraj Revanna Case) ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಕಾಣಿಸಿಕೊಂಡಿದೆ. ಸಂತ್ರಸ್ತ ಯುವಕನ ವಿರುದ್ಧ ದೂರು ನೀಡಿದ್ದ ಸೂರಜ್‌ ರೇವಣ್ಣ ಮಾಜಿ ಆಪ್ತ ಶಿವಕುಮಾರನೇ ಆ ಯುವಕನನ್ನು ಸೂರಜ್‌ಗೆ ಪರಿಚಯ ಮಾಡಿಸಿಕೊಟ್ಟಿದ್ದ ಎಂಬುದು ಖಚಿತವಾಗಿದ್ದು, ಸೂರಜ್‌ಗೆ ʼಹನಿ ಟ್ರ್ಯಾಪ್‌ʼ (Honey trap) ಮಾಡಿಸಿದನೇ ಎಂಬ ಅನುಮಾನ ವ್ಯಕ್ತವಾಗಿದೆ.

ಸೂರಜ್ ರೇವಣ್ಣ ವಿರುದ್ಧ ದೂರು ಪ್ರಕರಣ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಮೊದಲ ಸಂತ್ರಸ್ತ ಯುವಕನ ವಿರುದ್ಧ ದೂರು ನೀಡಿದ್ದ ಶಿವಕುಮಾರ್, ಇದೀಗ ದೂರು ನೀಡಿದ್ದ ಸಂತ್ರಸ್ತನ ಜೊತೆಗೇ ಸೇರಿಕೊಂಡಿದ್ದಾನೆ. ಹೀಗಾಗಿ, ಸೂರಜ್ ರೇವಣ್ಣ ಬಳಿ ಹಣ ಕೀಳಲು ಇಬ್ಬರೂ ಸೇರಿ ಪ್ಲಾನ್‌ ಮಾಡಿದ್ರಾ ಎಂಬ ಅನುಮಾನ ಮೂಡಿದೆ. ಹಲವು ವರ್ಷಗಳಿಂದ ಸೂರಜ್ ಜೊತೆಗೇ ಇದ್ದ ಶಿವಕುಮಾರ್‌, ಅವರ ವೀಕ್‌ನೆಸ್ ತಿಳಿದು ಸ್ಕೆಚ್ ಹಾಕಿರಬಹುದು ಎನ್ನಲಾಗಿದೆ.

ಯುವಕ ಐದು ಕೋಟಿ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ ಬಗ್ಗೆ ಶಿವಕುಮಾರ್ ಮತ್ತು ಸೂರಜ್ ದೂರು ನೀಡಿದ್ದರು. ಬ್ಲ್ಯಾಕ್‌ಮೇಲ್ ಆರೋಪದಲ್ಲಿ ‌ಪಾತ್ರ ತಿಳಿಯುತ್ತಿದ್ದಂತೆ ಶಿವಕುಮಾರ್‌ ಉಲ್ಟಾ ಹೊಡೆದಿದ್ದಾನೆ. ಮೊದಲ ಸಂತ್ರಸ್ತ ಸಲ್ಲಿಸಿರುವ ದೂರಿನ ಮೇಲೆಯೂ ಅನುಮಾನ ಮೂಡಿದೆ. ಡಿಜಿಪಿಗೆ ಕೊಟ್ಟ‌ ದೂರಿಗೂ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆದ ದೂರಿಗೂ ವ್ಯತ್ಯಾಸವಿದೆ.

ಸಂತ್ರಸ್ತ ಮೊದಲು ಎರಡು ಪುಟಗಳ ದೂರು ನೀಡಿದ್ದ. ನಂತರ ಹದಿನಾಲ್ಕು ಪುಟಗಳ ದೂರು ವೈರಲ್ ಆಗಿದೆ. ಡಿಜಿಪಿ ಕಚೇರಿ‌ ಮುಂದೆ ನಿಂತು ಫೋಟೋ‌ ತೆಗೆದು ಯುವಕ ಸೂರಜ್‌ಗೆ ಕಳಿಸಿದ್ದ. ಸೂರಜ್‌ ಅನ್ನು ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಲು ಈ ಫೋಟೋ‌ ಕಳಿಸಿರುವುದಾಗಿ ಆರೋಪವಿದೆ.

ಪರಿಚಯ ಮಾಡಿಸಿದ್ದೇ ಶಿವಕುಮಾರ್‌

ಅರಕಲಗೂಡು ಮೂಲದ ಯುವಕನನ್ನು ಸೂರಜ್‌ಗೆ ಪರಿಚಯ ಮಾಡಿಸಿದ್ದೇ ಶಿವಕುಮಾರ್ ಎಂಬುದು ಗೊತ್ತಾಗಿದೆ. ಶಿವಕುಮಾರ್, ಸೂರಜ್ ರೇವಣ್ಣನ ಆಪ್ತ. ಈತ ಒಳ್ಳೆಯ ಹುಡುಗ ಯುವಕನನ್ನು ಸೂರಜ್ ಬಳಿ ಕರೆತಂದು ಪರಿಚಯ ಮಾಡಿಕೊಟ್ಟಿದ್ದ ಶಿವಕುಮಾರ್. ಊರುಕಡೆ ಒಳ್ಳೆಯ ಸಂಘಟನೆ ಮಾಡಿಕೊಂಡಿದ್ದಾನೆ. ನಮ್ಮ ಪಕ್ಷಕ್ಕೆ ದುಡಿಯುತ್ತಾನೆ ಅಂತ ಯುವಕನ ಪರ ಹೇಳಿದ್ದ. ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ಮೂಲದ ಯುವಕನನ್ನು 4 ತಿಂಗಳ ಹಿಂದೆ ಸೂರಜ್‌ಗೆ ಪರಿಚಯ ಮಾಡಿಸಿದ್ದ. ಹೀಗಾಗಿ, ಯುವಕನನ್ನು ಬಿಟ್ಟು ಸೂರಜ್ ಟ್ರ್ಯಾಪ್ ಮಾಡಿದನೇ ಸೂರಜ್ ಆಪ್ತ ಶಿವಕುಮಾರ್ ಎಂಬ ಅನುಮಾನ ಮೂಡಿದೆ.

ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ ಇನ್ನೊಂದು ಘಟನೆಯೂ ನಡೆದಿದೆ. ಲೋಕಸಭೆ ಚುನಾವಣೆ ಫಲಿತಾಂಶದ ದಿನ ಶಿವಕುಮಾರ್‌ ಬಿಜೆಪಿ ಬಣವೊಂದರ ನಾಯಕರ, ಕಾರ್ಯಕರ್ತರ ಜೊತೆ ಕಾಣಿಸಿಕೊಂಡಿದ್ದ. ಈ ಬಣ ಕಾಂಗ್ರೆಸ್‌ನ ಶ್ರೇಯಸ್‌ ಪಟೇಲ್‌ ಗೆಲುವನ್ನು ಹಾಗೂ ಪ್ರಜ್ವಲ್‌ ರೇವಣ್ಣ ಸೋಲನ್ನು ಸಂಭ್ರಮಿಸಿತ್ತು. ಶ್ರೇಯಸ್ ಪರ ಸೆಲೆಬ್ರೇಷನ್ ಮಾಡಿದ ಬಿಜೆಪಿ ಕಾರ್ಯಕರ್ತರ ತಂಡದಲ್ಲಿ ಶಿವಕುಮಾರ್ ಕಂಡುಬಂದಿದ್ದ.

Suraj Revanna Case: ನಾಪತ್ತೆಯಾದ ಸೂರಜ್‌ ಆಪ್ತನ ವಿರುದ್ಧವೂ ದೂರು ನೀಡಿರುವ ಸಂತ್ರಸ್ತ!

ಹೀಗಾಗಿ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣರನ್ನು ಶಿವಕುಮಾರ್ ಸಿಲುಕಿಸಿದನೇ ಎಂಬ ಅನುಮಾನ ದಟ್ಟವಾಗಿದೆ. ಸೂರಜ್ ಪರ, ಸಂತ್ರಸ್ತ ಯುವಕನ ವಿರುದ್ಧ ಬ್ಲ್ಯಾಕ್‌ಮೇಲ್ ದೂರು ನೀಡಿ ನಂತರ ಶಿವಕುಮಾರ್ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಶಿವಕುಮಾರ್ ವಿರುದ್ಧ ಅನುಮಾನ ಹೆಚ್ಚಿದೆ. ಜೊತೆಗಿದ್ದೇ ಖತರ್‌ನಾಕ್‌ ಪ್ಲಾನ್ ಮಾಡಿ, ಯುವಕನ ಮೂಲಕ ʼಹನಿಟ್ರ್ಯಾಪ್‌ʼ ಮಾಡಿದ ಶಿವಕುಮಾರ್, ಸೂರಜ್‌ ಬೆನ್ನಿಗೆ ಹಿಂದಿನಿಂದ ಇರಿದನೇ ಎಂಬ ಅನುಮಾನ ಪೊಲೀಸರಲ್ಲೂ ಮೂಡಿದೆ.

Exit mobile version