ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Suraj Revanna Case) ಸೂರಜ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 42ನೇ ಎಸಿಎಂಎಂ ಕೋರ್ಟ್ ವಜಾಗೊಳಿಸಿದೆ. ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದಲ್ಲಿ ಸೂರಜ್ ಬಂಧನವಾಗಿ, ಸದ್ಯ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ.
ಸಿಆರ್‌ಪಿಸಿ 437 ಅಡಿ ಸೂರಜ್ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 42ನೇ ಎಸಿಎಂಎಂ ಕೋರ್ಟ್ ವಜಾಗೊಳಿಸಿದೆ. ಸೂರಜ್ ರೇವಣ್ಣ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದಿಸಿದರು. ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಿಐಡಿ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ್ದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಸೂರಜ್‌ನ ಜುಲೈ 18ರವರೆಗೆ (Suraj Revanna Case) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದರು. ಇದರಿಂದ ಸೂರಜ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು.
Robbery Case: ವೃದ್ಧ ದಂಪತಿಯ ಮೇಲೆ ಹಲ್ಲೆ ಎಸಗಿ ಚಿನ್ನಾಭರಣ ದರೋಡೆ ಮಾಡಿದ ಚಡ್ಡಿ ಗ್ಯಾಂಗ್!
ಮನೆ ಊಟ, ಹಾಸಿಗೆ ಪುಸ್ತಕಕ್ಕೆ ಬೇಡಿಕೆ ಇಟ್ಟ ದರ್ಶನ್; ದೇಹದ ತೂಕ ಇಳಿದ ಭಯದಲ್ಲಿ ಕೋರ್ಟ್ ಮೊರೆ!
ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ (Renuka swamy Murder) ಪ್ರಕರಣದಲ್ಲಿ ದರ್ಶನ್ (Actor Darshan: ) ಜೈಲು ಸೇರಿದ್ದಾರೆ. ದರ್ಶನ್ ಅವರು ಜೈಲಿನಲ್ಲಿದ್ದು ಒಂದು ತಿಂಗಳು ಆಗುತ್ತಾ ಬಂದಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡಿಕೊಂಡು , ಹೊರಗಡೆ ಮೀನು, ಮಟನ್ ತಿಂದು ಕೊಂಡು ಹಾಯಾಗಿದ್ದ ದರ್ಶನ್, ಕೈದಿಗಳಿಗೆ ಯಾವ ರೀತಿಯ ಊಟ ನೀಡುತ್ತಾರೋ ಅದನ್ನೇ ಸೇವಿಸಬೇಕು. ಹೀಗಾಗಿ ದರ್ಶನ್ ಅವರು ಸರಿಯಾಗಿ ಊಟ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಈ ಕಾರಣದಿಂದಲೇ ಅವರು 25 ದಿನಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ. . ಈ ಕಾರಣದಿಂದ ದರ್ಶನ್ ಅವರು ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಊಟ, ಹಾಸಿಗೆ ಜೊತೆ ಇನ್ನಷ್ಟು ವಸ್ತುಗಳನ್ನು ಕೋರಿ ನಟ ದರ್ಶನ್ ಕೋರ್ಟ್ಗೆ ಮನವಿ ಮಾಡಿದ್ದಾರೆ.
ವಕೀಲ ಪ್ರವೀಣ್ ತಿಮ್ಮಯ್ಯ ಅವರ ಮೂಲಕ ಅರ್ಜಿ ಸಲ್ಲಿಕೆಯಾಗಿದೆ. ದರ್ಶನ್‌ಗೆ ಈಗ ದೇಹದ ತೂಕ ಇಳಿಕೆ ಆಗುತ್ತಿರುವ ಭಯವೂ ಕಾಡುತ್ತಿದೆ. ಊಟ, ಹಾಸಿಗೆ, ಪುಸ್ತಕ, ಬಟ್ಟೆ, ಚಮಚವನ್ನು ಮನೆಯಿಂದ ತರಿಸಿಕೊಳ್ಳಲು ದರ್ಶನ್ ಕೋರ್ಟ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಜೈಲಿನಲ್ಲಿ ನೀಡುತ್ತಿರುವ ಊಟ ಅವರಿಗೆ ಜೀರ್ಣವಾಗುತ್ತಿಲ್ಲ. ಅವರಿಗೆ ಫುಡ್ ಪಾಯಿಸನಿಂಗ್ ಆಗುತ್ತಿದೆ. ಇದರ ಜೊತೆಗೆ ಭೇದಿ ಕೂಡ ಆಗುತ್ತಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ಹೀಗೆಂದು ಜೈಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ.
ಮನೆ ಊಟಕ್ಕೆ ಅನುಮತಿ ಕೋರಿದ್ದಕ್ಕೆ ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ’ ಎಂದು ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಹೀಗಾಗಿ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕು’ ಎಂದು ದರ್ಶನ್ ಪರ ವಕೀಲರು ಕೋರಿದ್ದಾರೆ.
ಇದನ್ನೂ ಓದಿ: Actor Darshan: ಆರೋಪಿಗಳಿಗೆ ಗಂಟಲು ಮುಳ್ಳಾದ ಗುರುತು ಪತ್ತೆ ಪರೇಡ್, ಬೆಟ್ಟು ಮಾಡಿ ತೋರಿಸಿದ ಸಾಕ್ಷಿಗಳು
ನಟ ದರ್ಶನ್ ಅವರು ಜೈಲಿನಲ್ಲಿದ್ದು ಒಂದು ತಿಂಗಳು ಆಗುತ್ತಾ ಬಂದಿದೆ. ಹೊರಗಿದ್ದಾಗ ಅವರು ಮಾಂಸದೂಟ ಮಾಡಿಕೊಂಡು ಹಾಯಾಗಿ ಇದ್ದರು. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಆದರೆ, ಜೈಲಿನಲ್ಲಿ ಆ ರೀತಿ ಇಲ್ಲ. ಜೈಲಿನ ಇತರ ಕೈದಿಗಳಿಗೆ ಯಾವ ರೀತಿಯ ಊಟ ನೀಡುತ್ತಾರೋ ಅದನ್ನೇ ಸೇವಿಸಬೇಕು. ದರ್ಶನ್ ಅವರಿಗೆ ನಿತ್ಯ ಚಿಂತೆ ಕಾಡುತ್ತಿದೆ. ಯಾವಾಗ ಹೊರಗೆ ಬರುತ್ತೇನೋ ಎನ್ನುವ ಆತಂಕ ಮೂಡಿದೆ. ಹೀಗಾಗಿ ಅವರು ಜೈಲಿನಲ್ಲಿ ಸರಿಯಾಗಿ ಊಟ ಮಾಡುತ್ತಿಲ್ಲ.