ಶಿವಮೊಗ್ಗ: ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧನವಾಗಿರುವ ಶಂಕಿತ ಉಗ್ರ ಮಾಜ್ ಮುನೀರ್ಗೆ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ತಂದೆ ಮುನೀರ್ ಅಹಮದ್ ಅಂತಿಮ ದರ್ಶನ ಪಡೆಯಲು ಶನಿವಾರ ಅವಕಾಶ ಕಲ್ಪಿಸಲಾಯಿತು.
ಶಂಕಿತ ಉಗ್ರ ಮಾಜ್ ಮುನೀರ್ ತಂದೆ ಹೃದಯಾಘಾತದಿಂದ ಮಂಗಳೂರಿನಲ್ಲಿ ಶುಕ್ರವಾರ ಮೃತಪಟ್ಟಿದ್ದರು. ಹೀಗಾಗಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಮಾಜ್ನನ್ನು ತಂದೆ ಮುನೀರ್ ಅಹಮದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿಗೆ ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು.
ತೀರ್ಥಹಳ್ಳಿಯ ಮನೆಗೆ ಮಾಜ್ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಂತಿಮ ದರ್ಶನದ ವೇಳೆ ದುಃಖ ತಡೆಯಲಾರೆದ ಮಾಜ್ ಅತ್ತಿದ್ದಾನೆ. ಸುಮಾರು ಅರ್ಧ ಗಂಟೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ ಪೊಲೀಸರು, ಸೊಪ್ಪುಗುಡ್ಡೆ ಖಬರ ಸ್ಥಾನದಲ್ಲಿ ಅಂತ್ಯಕ್ರಿಯೆ ಬಳಿಕ ಮಾಜ್ನನ್ನು ಪೊಲೀಸರು ಪುನಃ ಶಿವಮೊಗ್ಗಕ್ಕೆ ಕರೆದೊಯ್ದರು.
ಇದನ್ನೂ ಓದಿ | ಪೆಟ್ರೋಲ್ ಬಂಕ್ನಲ್ಲಿ ವಂಚನೆ ಆರೋಪ; ರೊಚ್ಚಿಗೆದ್ದ ಜನರಿಂದ ಪ್ರತಿಭಟನೆ