ರಾಮನಗರ: ಈ ಸ್ವಾಮೀಜಿಗೆ ಎರಡು ವರ್ಷದ ಹಿಂದೆ ಪಟ್ಟಾಭಿಷೇಕ ಆಗಿತ್ತು. ಆದರೆ, ಯಾಕೋ ಅವರಿಗೆ ಈ ಬದುಕು ಅಷ್ಟಾಗಿ ಹಿಡಿಸಿಲ್ಲ. ಹೀಗಾಗಿ ಅವರು ಒಂದು ಪತ್ರ ಬರೆದಿಟ್ಟು ಊರು ಬಿಟ್ಟಿದ್ದಾರೆ. ಅವರ ಜತೆಗೆ ಒಬ್ಬ ವಿವಾಹಿತ ಮಹಿಳೆ ಕೂಡಾ ಓಡಿ ಹೋಗಿದ್ದಾರೆ.
ಇದು ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮಿ ಹರೀಶ್ ಅವರ ಕಥೆ. ಹರೀಶ್ ಈ ಹಿಂದೆ ಕಂಬಾಳು ಮಠದಲ್ಲಿದ್ದರಂತೆ. ಅಲ್ಲಿ ಅವರಿಗೆ ಯುವತಿಯೊಬ್ಬಳ ಜತೆ ಪ್ರೇಮ ಚಿಗುತ್ತಿತ್ತಂತೆ. ಆ ಯುವತಿಗೆ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದೆ. ಈ ವಿಚಾರದಲ್ಲಿ ಮನ ನೊಂದಿದ್ದ ಸ್ವಾಮೀಜಿ ಇದೀಗ ಅದೇ ಯುವತಿ ಜತೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ | ಲಲಿತ್ ಮೋದಿ: ವಂಚಿಸಿ ಭಾರತದಿಂದ ಪರಾರಿ, ಸುಶ್ಮಿತಾ ಸೇನ್ ಜತೆ ಡೇಟಿಂಗ್ ಸವಾರಿ!
ಎರಡು ವರ್ಷದ ಹಿಂದೆ ಮಠಾಧಿಪಯಾಗಿ ಪಟ್ಟಾಭಿಷೇಕ ಮಾಡಲಾಗಿತ್ತು ಎನ್ನಲಾಗಿದೆ. ರಾತ್ರೋ ರಾತ್ರಿ ಪತ್ರ ಬರೆದು ಮಠದಿಂದ ಸ್ವಾಮಿಜಿ ಪರಾರಿಯಾಗಿದ್ದಾರೆ. ʻಪತ್ರದಲ್ಲಿ ತನಗೆ ಸನ್ಯಾಸತ್ವ ಇಷ್ಟವಿಲ್ಲ. ನಾನು ಮಠ ಬಿಟ್ಟು ಓಡಿ ಹೋಗುತ್ತೇನೆ. ನಾನು ಯಾರ ಕೈಗೂ ಸಿಗುವುದಿಲ್ಲ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿʼ ಎಂದು ಬರೆದಿದ್ದಾರೆ.
ಮಠದಲ್ಲಿದ್ದರೂ ಸ್ವಾಮೀಜಿ ಮನಸು ಪ್ರೀತಿಯ ಬಗ್ಗೆ ಯೋಚಿಸುತ್ತಿತ್ತು ಎನ್ನಲಾಗಿದೆ. ಹಾಗಿರುವಾಗ ಈ ರೀತಿ ಇರುವುದು ಬೇಡ. ಈ ಅಧ್ಯಾತ್ಮಿಕ ಬದುಕು ಬಿಟ್ಟು ನೇರವಾಗಿ ಲೌಕಿಕಕ್ಕೆ ಮರಳೋಣ ಎಂದು ಸ್ವಾಮೀಜಿ ತೀರ್ಮಾನ ಮಾಡಿ ಈ ರೀತಿ ಮೊದಲು ಪ್ರೀತಿಸುತ್ತಿದ್ದ ಹುಡುಗಿಯ ಜತೆಗೆ ಪರಾರಿ ಆಗಿದ್ದಾರೆ ಎಂದು ಹೇಳಲಾಗಿದೆ. ಕುದೂರು ಠಾಣೆಯಲ್ಲಿ ಸ್ವಾಮೀಜಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ.
ಇದನ್ನೂ ಓದಿ | ದೇವಸ್ಥಾನದಲ್ಲಿ ಮರ್ಡರ್ ಮಾಡಿ ಪರಾರಿಯಾಗುವಾಗ ಸೀಜರ್‌ಗಳ ಕೈಗೆ ಸಿಕ್ಕಿಬಿದ್ದರು!