Site icon Vistara News

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Tata Motors has taken the lead in the SUV market with Nexon Punch

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಟಾಟಾ ಮೋಟಾರ್ಸ್ (Tata Motors) ಅದರ ಎರಡು ಉತ್ಪನ್ನಗಳಾದ ಪಂಚ್ ಮತ್ತು ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಾಗಿ ಹೊರಹೊಮ್ಮಿರುವುದರಿಂದ ಆರ್ಥಿಕ ವರ್ಷ 24 ಅನ್ನು ಅತ್ಯುತ್ತಮ ರೀತಿಯಲ್ಲಿ ಮುಕ್ತಾಯಗೊಳಿಸಿದೆ. ಟಾಟಾ ನೆಕ್ಸಾನ್ ರೇಸ್‌ನಲ್ಲಿ ಇದ್ದಂತೆ ಪೋಲ್ ಪೊಸಿಷನ್ ಅನ್ನು ಪಡೆದುಕೊಂಡಿದ್ದು, ಈ ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಾಬಲ್ಯ ಸಾಧಿಸಿದೆ. ವಿಭಾಗದಲ್ಲಿ ಭಾರಿ ಸ್ಪರ್ಧೆಯ ಹೊರತಾಗಿಯೂ ಪಂಚ್ ಎರಡನೇ ಸ್ಥಾನದಲ್ಲಿದೆ.

Tata Punch

ಟಾಟಾ ನೆಕ್ಸಾನ್ ಇತ್ತೀಚೆಗೆ ತನ್ನ 7ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ 7 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ್ದು, ಇದು ಭಾರತದ ಅತ್ಯಂತ ಪ್ರೀತಿಪಾತ್ರ ಎಸ್‌ಯುವಿ ಆಗಿದೆ.

ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಈ ವಿಭಾಗವು ಅತ್ಯಂತ ಸ್ಪರ್ಧಾತ್ಮಕ ಮತ್ತು ತೀವ್ರ ಪೈಪೋಟಿಯ ವಿಭಾಗವಾಗಿದೆ ಮತ್ತು ಟಾಟಾ ಮೋಟಾರ್ಸ್ ಈ ವಿಭಾಗದಲ್ಲಿರುವ ನಾಯಕರಲ್ಲಿ ಒಬ್ಬರಾಗಿದೆ. ನೆಕ್ಸಾನ್ ಮತ್ತು ಪಂಚ್‌ಗಾಗಿ ವಿವಿಧ ಆವಿಷ್ಕಾರಗಳನ್ನು ಪರಿಚಯಿಸಲು ಕಂಪನಿಯು ಮಾಡಿರುವ ಪ್ರಯತ್ನಗಳನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ: Agumbe Ghat: ಭಾರಿ ಮಳೆ; ಸೆ.15ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

2017ರಲ್ಲಿ ಪ್ರಾರಂಭವಾದಾಗಿನಿಂದಲೂ ನೆಕ್ಸಾನ್ ತನ್ನ ವಿಶಿಷ್ಟತೆ ಮತ್ತು ಔಟ್ ಆಫ್ ದಿ ಬಾಕ್ಸ್ ಗುಣ ಅಂದರೆ ವಿಭಿನ್ನತೆಯನ್ನು ಬಯಸುವ ಗ್ರಾಹಕರನ್ನು ಆಕರ್ಷಿಸಿದೆ ಮತ್ತು ಇದು ಅತ್ಯುತ್ತಮವಾದ ಕಾರ್ಯಕ್ಷಮತೆ ಮತ್ತು ಸೌಕರ್ಯವನ್ನು ಒದಗಿಸುತ್ತದೆ. ನೆಕ್ಸಾನ್‌ನ ಭವಿಷ್ಯಕ್ಕೆ ಸಲ್ಲುವ ವಿನ್ಯಾಸ, ಉನ್ನತ ಸುರಕ್ಷತಾ ಫೀಚರ್‌ಗಳು ಮತ್ತು ಸ್ಥಿರವಾದ ಬೆಳವಣಿಗೆಯಿಂದ ಇದು ಭಾರತೀಯ ಗ್ರಾಹಕರ ಜನಪ್ರಿಯ ಆಯ್ಕೆಯಾಗಿದೆ ಮತ್ತು ವಿಶ್ವಾಸಾರ್ಹತೆಯ ಖ್ಯಾತಿಯನ್ನು ಗಳಿಸಿದೆ.

ನೆಕ್ಸಾನ್ 2018 ರ ಭಾರತದ ಮೊದಲ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದ ವಾಹನವಾಗಿದೆ, ಆ ಮೂಲಕ ಇದು ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಮಾನದಂಡವನ್ನು ಸ್ಥಾಪಿಸಿದೆ. ಅಂದಿನಿಂದ ಇಂದಿನವರೆಗೂ ಪರಂಪರೆ ಮುಂದುವರಿದಿದೆ. 2024ರ ಫೆಬ್ರವರಿಯಲ್ಲಿ ಹೊಸ ಜನರೇಷನ್‌ನ ನೆಕ್ಸಾನ್ ವರ್ಧಿತ 2022 ಪ್ರೋಟೋಕಾಲ್ ಪ್ರಕಾರ ತನ್ನ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತು. ಅದರ ಬೆನ್ನಲ್ಲೇ ನೆಕ್ಸಾನ್.ಇವಿ ಈ ತಿಂಗಳು ಭಾರತ್- ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಪಡೆಯಿತು.

ಭಾರತೀಯ ರಸ್ತೆಗಳಲ್ಲಿ 7 ಲಕ್ಷ ನೆಕ್ಸಾನ್‌ ಇವೆ ಮತ್ತು ನೆಕ್ಸಾನ್ 41 ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿವೆ. ಅದರ ಅತ್ಯದ್ಭುತ ಕಾರ್ಯಕ್ಷಮತೆ ಅದರ ಮಾರಾಟದ ಬೆಳವಣಿಗೆಯಲ್ಲಿ ಪ್ರಮುಖ ಕೊಡುಗೆ ನೀಡಿರುವುದು ಎಲ್ಲರೂ ಗಮನಿಸಬಹುದಾಗಿದೆ. ಕಳೆದ ಎರಡು ವರ್ಷಗಳಲ್ಲಿ (2022 ಮತ್ತು 2023) ನೆಕ್ಸಾನ್ ನ 3 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. ನೆಕ್ಸಾನ್ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ನ ಬಹು ಪವರ್‌ಟ್ರೇನ್‌ಗಳಲ್ಲಿ ಲಭ್ಯವಿದೆ. ನೆಕ್ಸಾನ್ ಕಾಲ ಕಾಲಕ್ಕೆ ದೃಢವಾಗಿ ಬೆಳೆದಿದೆ ಮತ್ತು ಅದರ ವಿಭಾಗ ಪ್ರಮುಖ ವಿನ್ಯಾಸ, ವಿಭಾಗದ ಅತ್ಯುತ್ತಮ ಫೀಚರ್ ಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದಾಹಿ ನಿಷ್ಠಾವಂತ ಅಭಿಮಾನಿಗಳನ್ನು ಗಳಿಸಿದೆ.

ಇದನ್ನೂ ಓದಿ: Lakshmi Hebbalkar: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ: ಹೆಬ್ಬಾಳಕರ್

ಟಾಟಾ ಪಂಚ್: ಮತ್ತೊಂದೆಡೆ ಟಾಟಾ ಪಂಚ್ ಎಸ್‌ಯುವಿ ಗುಣಲಕ್ಷಣಗಳನ್ನು ಎಲ್ಲರೂ ಮೆಚ್ಚುವಂತೆ ಮಾಡಿದೆ. ಪಂಚ್‌ನ ಅದ್ಭುತ ವಿನ್ಯಾಸ, ಸೌಕರ್ಯ ಮತ್ತು ಅಪ್ರತಿಮ ಸಾಮರ್ಥ್ಯವು ಈಗಾಗಲೇ ಕಾರು ಹೊಂದಿರುವ ಮತ್ತು ಮೊದಲ ಬಾರಿಯ ಕಾರು ಖರೀದಿದಾರರಿಗೂ ಆಸಕ್ತಿ ಹುಟ್ಟುವಂತೆ ಮಾಡುತ್ತದೆ.

ಪಂಚ್ ಎಸ್‌ಯುವಿಯು ಅದ್ಭುತ ನಿಲುವು, ವಿಶಾಲವಾದ ಇಂಟೀರಿಯರ್‌ಗಳು ಮತ್ತು ವಿಭಾಗದಲ್ಲಿಯೇ ಅತ್ಯುನ್ನತ ಸುರಕ್ಷತಾ ರೇಟಿಂಗ್ (ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್) ಅನ್ನು ಹೊಂದಿದ್ದು, ನಿಸ್ಸಂದೇಹವಾಗಿ ಸಮಗ್ರ ಪ್ಯಾಕೇಜ್ ಹೊಂದಿರುವ ಕಾರ್ ಆಗಿದೆ. ಅದಲ್ಲದೆ, ಪಂಚ್.ಇವಿ ಇತ್ತೀಚೆಗೆ 5-ಸ್ಟಾರ್ ಬಿ ಎನ್ ಸಿ ಎ ಪಿ ರೇಟಿಂಗ್ ಅನ್ನು ಪಡೆದುಕೊಂಡಿದೆ, ಆ ಮೂಲಕ ಇದು ಭಾರತದ ಸುರಕ್ಷಿತ ಇವಿ ವಾಹನ ಎಂಬ ಹೆಗ್ಗಳಿಕೆ ಗಳಿಸಿದೆ.

ಒಟ್ಟಾರೆಯಾಗಿ, ಪಂಚ್ ಉಪ-ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿ ಸಾಧಿಸಿದೆ ಮತ್ತು ಆರ್ಥಿಕ ವರ್ಷ 24ರಲ್ಲಿ ಶ್ಲಾಘನೀಯ 170,076 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಮಾರ್ಚ್ 2024ರ ಸಮಯದಲ್ಲಿ ಪಂಚ್ ಉದ್ಯಮದಲ್ಲಿ #1 ಮಾರಾಟವಾದ ಕಾರು ಎಂಬ ಮನ್ನಣೆ ಗಳಿಸಿತ್ತು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಭಾರತದಲ್ಲಿನ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಲ್ಲಿ ಗಣನೀಯ ಬೆಳವಣಿಗೆಯನ್ನು ಕಂಡಿದೆ. ಮಾರುಕಟ್ಟೆಯ ಸ್ಥಿರ ಬೆಳವಣಿಗೆಯಿಂದ ಈ ವಿಚಾರ ವ್ಯಕ್ತವಾಗಿದೆ. ಉದ್ಯಮವು ಈ ವಿಭಾಗದಲ್ಲಿ ಮಾರುಕಟ್ಟೆ ಪಾಲಿನಲ್ಲಿ 4% ರಿಂದ 7%ಗೆ ಏರಿಕೆ ಕಂಡಿದೆ ಮತ್ತು ದೊಡ್ಡ ಎಸ್‌ಯುವಿ ಮಾರುಕಟ್ಟೆಯಲ್ಲಿ, ಮಾರುಕಟ್ಟೆ ಪಾಲು 8% ರಿಂದ 14%ಗೆ ಬೆಳೆದಿದೆ. ಈ ಅಭಿವೃದ್ಧಿಯು ಆಟೋಮೋಟಿವ್ ಕ್ಷೇತ್ರದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳ ಹೆಚ್ಚುತ್ತಿರುವ ಬೇಡಿಕೆ ಮತ್ತು ಅದರ ಮೇಲೆ ಹೆಚ್ಚುತ್ತಿರುವ ಆಕರ್ಷಣೆಯನ್ನು ಸಾರುತ್ತದೆ ಮತ್ತು ಉದ್ಯಮದಲ್ಲಿ ಪ್ರಮುಖ ಶಕ್ತಿಯಾಗಿ ಅದರ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.

Exit mobile version