Site icon Vistara News

Tata Motors: ಪಂಚ್. ಇವಿ, ನೆಕ್ಸಾನ್.ಇವಿಗೆ ಭಾರತ್-ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್

Tata Motors Panch EV Nexon EV 5 star rating by Bharat NCAP

ಬೆಂಗಳೂರು: ಟಾಟಾ ಮೋಟಾರ್ಸ್‌ನ (Tata Motors) ಅಂಗಸಂಸ್ಥೆ ಮತ್ತು ಭಾರತದ ಇವಿ ಕ್ರಾಂತಿಯ ಪ್ರವರ್ತಕರಾಗಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ) ಇಂದು ಮಹತ್ವದ ಪ್ರಕಟಣೆಯಲ್ಲಿ ಪಂಚ್.ಇವಿ ಮತ್ತು ನೆಕ್ಸಾನ್.ಇವಿ ಭಾರತ್-ಎನ್‌ಸಿಎಪಿಯಿಂದ 5-ಸ್ಟಾರ್ ರೇಟಿಂಗ್ ಪಡೆದಿದೆ ಎಂದು ಘೋಷಿಸಿದೆ.

ಪಂಚ್.ಇವಿ ಇಲ್ಲಿಯವರೆಗೆ ಯಾವುದೇ ವಾಹನ ಕೂಡ ಗಳಿಸದೇ ಇದ್ದ ಅತ್ಯಧಿಕ ಸ್ಕೋರ್‌ ಪಡೆಯುವ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ. ಪಂಚ್.ಇವಿ ಅಡಲ್ಟ್ ಆಕ್ಯುಪೆಂಟ್ಸ್ ಪ್ರೊಟೆಕ್ಷನ್(ಎಓಪಿ) ಅಂದರೆ ವಯಸ್ಕರ ರಕ್ಷಣೆ ವಿಭಾಗದಲ್ಲಿ ದಾಖಲೆಯ 31.46/32 ಅಂಕಗಳು, ಚಿಲ್ಡ್ರನ್ ಆಕ್ಯುಪೆಂಟ್ ಪ್ರೊಟೆಕ್ಷನ್ (ಸಿಓಪಿ) ಅಂದರೆ ಮಕ್ಕಳ ರಕ್ಷಣೆ ವಿಭಾಗದಲ್ಲಿ 45/49 ಅಂಕಗಳನ್ನು ಪಡೆದುಕೊಂಡಿದೆ.

ನೆಕ್ಸಾನ್.ಇವಿ ಎಓಪಿ ಮತ್ತು ಸಿಓಪಿಯಲ್ಲಿ ಕ್ರಮವಾಗಿ 29.86/32 ಮತ್ತು 44.95/49 ಅಂಕಗಳನ್ನು ಗಳಿಸಿದೆ. ಈ ಮೂಲಕ ಟಾಟಾ ಮೋಟಾರ್ಸ್ ಈಗ ಭಾರತ್-ಎನ್‌ಸಿಎಪಿ ಮತ್ತು ಗ್ಲೋಬಲ್-ಎನ್‌ಸಿಎಪಿ ಪರೀಕ್ಷೆಗಳಲ್ಲಿ 5-ಸ್ಟಾರ್‌ಗಳನ್ನು ಗಳಿಸಿರುವ ಅತಿ ಸುರಕ್ಷಿತ ಶ್ರೇಣಿಯ ಎಸ್‌ಯುವಿ ಉತ್ಪನ್ನ ಶ್ರೇಣಿಗಳನ್ನು ಹೊಂದಿರುವ ಏಕೈಕ ಒಇಎಂ ಆಗಿದೆ.

ಇದನ್ನೂ ಓದಿ: Aliens: ಏಲಿಯನ್‌ಗಳು ಅನ್ಯಗ್ರಹ ಜೀವಿಗಳಲ್ಲ; ಈ ಭೂಮಿಯ ರಹಸ್ಯ ನಿವಾಸಿಗಳು! ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಾತನಾಡಿ, “ನೆಕ್ಸಾನ್.ಇವಿ ಮತ್ತು ಪಂಚ್.ಇವಿ ಭಾರತ್-ಎನ್‌ಸಿಎಪಿಯಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಈ ಮಹತ್ವದ ಸಾಧನೆ ಮಾಡಿದ್ದಕ್ಕಾಗಿ ಟಾಟಾ ಮೋಟಾರ್ಸ್‌ಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ. ದೇಶದಲ್ಲಿ ಸುರಕ್ಷಿತ ವಾಹನಗಳು ಇರಬೇಕು ಎನ್ನುವ ಭಾರತ ಸರ್ಕಾರದ ದೃಷ್ಟಿಗೆ ಈ ಪ್ರಮಾಣೀಕರಣವು ಸೂಕ್ತವಾಗಿ ಹೊಂದಿಕೆಯಾಗುತ್ತದೆ ಮತ್ತು ಭಾರತದ ಆಟೋಮೊಬೈಲ್ ಉದ್ಯಮವನ್ನು ‘ಆತ್ಮನಿರ್ಭರ’ ಮಾಡುವಲ್ಲಿ ಭಾರತ್-ಎನ್‌ಸಿಎಪಿಯ ಪಾತ್ರವನ್ನು ಒತ್ತಿಹೇಳುತ್ತದೆ. ಭಾರತ್-ಎನ್‌ಸಿಎಪಿ ಕಾರು ಸುರಕ್ಷತಾ ಮಾನದಂಡವು ಭಾರತವನ್ನು ಜಾಗತಿಕ ಆಟೋಮೊಬೈಲ್ ಹಬ್ ಮಾಡಲು ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅವುಗಳ ರಫ್ತು ಯೋಗ್ಯತೆಯನ್ನು ಹೆಚ್ಚಿಸುವ ಸರ್ಕಾರದ ದೃಷ್ಟಿಯನ್ನು ಅರಿತುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಎಂಡಿ ಶೈಲೇಶ್ ಚಂದ್ರ ಮಾತನಾಡಿ, ಮೊದಲು ಬಹಳ ಕಡಿಮೆ ಚರ್ಚೆ ಆಗುತ್ತಿದ್ದ ಸುರಕ್ಷತೆ ವಿಚಾರ ಈಗ ಭಾರತೀಯ ಕಾರು ಖರೀದಿದಾರರ ಪ್ರಮುಖ ಆದ್ಯತೆಯಾಗಿದೆ. ಸುರಕ್ಷತೆ ಎಂಬುದು ಟಾಟಾ ಮೋಟಾರ್ಸ್‌ನ ನಮ್ಮ ಡಿಎನ್‌ಎಯಲ್ಲಿಯೇ ಇದೆ. ಅದರಿಂದಲೇ ನಾವು ಉದ್ಯಮದಲ್ಲಿ ಮಾನದಂಡ ಸ್ಥಾಪಿಸುವಂತಾಗಿದೆ.

ಇದನ್ನೂ ಓದಿ: Pralhad Joshi: ಚುನಾವಣೆ ಸೋಲಿನ ಸೇಡಿಗಾಗಿ ಯಡಿಯೂರಪ್ಪ ಮೇಲೆ ರಾಜಕೀಯ ವೈಷಮ್ಯ; ಪ್ರಲ್ಹಾದ್‌ ಜೋಶಿ

ಸುರಕ್ಷತಾ ಮಾನದಂಡವನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಪ್ರವರ್ತಕರಾಗಿ ಮುಂದುವರೆದಿದ್ದೇವೆ. ಬೆಲೆಯನ್ನು ಲೆಕ್ಕಿಸದೆ ನಾವು ತಯಾರಿಸುವ ಪ್ರತಿಯೊಂದು ವಾಹನವೂ ಸುರಕ್ಷಿತವಾಗಿರಬೇಕು ಎಂಬುದರ ಕುರಿತು ನಾವು ಬದ್ಧವಾಗಿದ್ದೇವೆ. ನಾವು ಕಟ್ಟುನಿಟ್ಟಾದ ಸರ್ಕಾರಿ ಸುರಕ್ಷತಾ ಮಾನದಂಡಗಳನ್ನು ಒಪ್ಪಿಕೊಳ್ಳುತ್ತೇವೆ ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ಪಡೆದು ಭಾರತ್-ಎನ್‌ಸಿಎಪಿ ಪ್ರೋಟೋಕಾಲ್ ಅನ್ನು ಪಾಲಿಸಿದ ಹಾಗೂ ಅಲ್ಲಿಗೆ ವಾಹನವನ್ನು ಕಳುಹಿಸಿದ ಮೊದಲ ವಾಹನ ತಯಾರಕರು ಎಂದು ಹೆಮ್ಮೆಪಡುತ್ತೇವೆ. ಪಂಚ್.ಇವಿ ಭಾರತದಲ್ಲಿ ಉತ್ಪಾದಿಸಲ್ಪಡುವ ಸುರಕ್ಷಿತ ಇವಿ ವಾಹನ ಎಂದು ಹೇಳಿಕೊಳ್ಳಲು ನಾವು ಸಂತೋಷಪಡುತ್ತೇವೆ. ಜತೆಗೆ ನೆಕ್ಸಾನ್.ಇವಿ 5-ಸ್ಟಾರ್ ರೇಟಿಂಗ್‌ ಪಡೆಯುವುದರ ಮೂಲಕ ಸುರಕ್ಷತೆಯ ಪರಂಪರೆಯನ್ನು ಮುಂದುವರೆಸಿದೆ.

ಒಟ್ಟಾಗಿ, ಭಾರತ್-ಎನ್‌ಸಿಎಪಿ ಅಡಿಯಲ್ಲಿ ಪರೀಕ್ಷೆಗೆ ಒಳಗಾದ ನಮ್ಮ ಎಲ್ಲಾ ನಾಲ್ಕು ಎಸ್‌ಯುವಿಗಳು 5-ಸ್ಟಾರ್ ರೇಟಿಂಗ್‌ಗಳನ್ನು ಪಡೆದಿವೆ. ಈ ಮೂಲಕ ಎಲ್ಲಾ ಪ್ರಯಾಣಿಕ ವಾಹನಗಳು ಅನುಸರಿಸಬಹುದಾದ ಮಾನದಂಡವನ್ನು ಸ್ಥಾಪಿಸಿವೆ. ಸುರಕ್ಷತೆಯ ಕುರಿತಾದ ನಮ್ಮ ಗಟ್ಟಿ ನಿಲುವು ಮುಂದುವರಿಯುತ್ತದೆ. ಅದಕ್ಕೆ ಬೇಕಾದ ಉತ್ತಮ ಆರ್ & ಡಿ ಬೆಂಬಲವು ನಮಗೆ ಈ ನಿಟ್ಟಿನಲ್ಲಿ ಬೆಳೆಯಲು ಹಾಗೂ ಪ್ರತಿ ಪ್ರಯಾಣಿಕರಿಗೆ ಸುರಕ್ಷಿತ ಭವಿಷ್ಯವನ್ನು ರಚಿಸಲು ದಾರಿ ಮಾಡಿಕೊಡಲು ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಪಂಚ್.ಇವಿ ಪ್ರಾರಂಭವಾದಾಗಿನಿಂದಲೂ ಇವಿ ಆಸಕ್ತರಿಗೆ ಮತ್ತು ಮೊದಲ ಬಾರಿಯ ಖರೀದಿದಾರರಲ್ಲಿ ಆಕರ್ಷಣೆ ಉಂಟು ಮಾಡಿದೆ. ಗ್ರಾಮೀಣ ಮಾರುಕಟ್ಟೆಗಳಲ್ಲಿ 35%ಕ್ಕಿಂತ ಹೆಚ್ಚು ಇವಿ ಮಾಲೀಕರು ಇದ್ದಾರೆ. ದೀರ್ಘ ರೇಂಜ್, ಉತ್ಕೃಷ್ಟ ಕಾರ್ಯಕ್ಷಮತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರತೀ ವಿಭಾಗಗಳಲ್ಲಿ ಸಿಗುವ 2 – 3 ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿರುವ ಪಂಚ್.ಇವಿ ತನ್ನ ಕುಟುಂಬದಲ್ಲಿ 10,000 ಕ್ಕೂ ಹೆಚ್ಚು ಹೆಮ್ಮೆಯ ಸದಸ್ಯರನ್ನು ಹೊಂದಿದೆ. ಇದು ನಿಜವಾದ ವಿದ್ಯುತ್ ಎಸ್ ಯು ವಿ ಮಾತ್ರವಲ್ಲ, ಇದು ಚಲನಶೀಲತೆಯ ಭವಿಷ್ಯಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದೆ. ಪಂಚ್.ಇವಿ ಅನುಕೂಲ ವಿಚಾರದಲ್ಲಿಯೂ ಹೆಚ್ಚು ಅಂಕ ಗಳಿಸುತ್ತದೆ ಮತ್ತು ಗ್ರಾಹಕರಿಗೆ ಸುಭವಾಗಿ ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

ಭಾರತದ ಇವಿ ಕ್ರಾಂತಿಯ ಕಿಕ್‌ಸ್ಟಾರ್ಟರ್ ಎಂದು ಮನ್ನಣೆ ಪಡೆದಿರುವ ನೆಕ್ಸಾನ್.ಇವಿ 2020ರಲ್ಲಿ ಪ್ರಾರಂಭವಾದಾಗಿನಿಂದ 68,000 ಯೂನಿಟ್‌ಗಳನ್ನು ಮಾರಾಟ ಮಾಡಿದೆ. 2023ರಲ್ಲಿ ಅನಾವರಣಗೊಂಡ ಎಸ್‌ಯುವಿಯ ನವೀಕರಿಸಿದ ಗೇಮ್‌ಚೇಂಜಿಂಗ್ ಹೊಸ ಅವತಾರವು ಇಡೀ ಭಾರತೀಯ ವಾಹನ ಉದ್ಯಮದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಇದರ ಆಕರ್ಷಕ ಡಿಜಿಟಲ್-ಫಸ್ಟ್ ವಿನ್ಯಾಸ, ತಂತ್ರಜ್ಞಾನ- ಚಾಲಿತ ಚಾಲನಾ ಅನುಭವ ಮತ್ತು ಅದ್ಭುತ ಆವಿಷ್ಕಾರಗಳು ಇದನ್ನು ಚಕ್ರಗಳಿರುವ ಗ್ಯಾಜೆಟ್ ಎಂದು ಕರೆಯುವಂತೆ ಮಾಡಿದೆ ಮತ್ತು ಈ ಕಾರು ಭಾರತೀಯ ಇವಿ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.

Exit mobile version