Site icon Vistara News

Teachers Day | ದಾಖಲಾತಿ ಆಂದೋಲನ ಮಾಡಿ ದಾಖಲೆ ಮಾಡಿದ ಚಿಕ್ಕೋಡಿಯ ಆದರ್ಶ ಶಿಕ್ಷಕ!!

Chikkodi teacher

ಚಿಕ್ಕೋಡಿ: ಸರ್ಕಾರಿ ಶಾಲೆಯ ಶಿಕ್ಷಕ ಸರ್ಕಾರಿ ಶಾಲೆಯ ಅಭಿವೃದ್ದಿ, ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಮಾಡಿದ ಪ್ರಯತ್ನದ ಪ್ರತಿಫಲವಾಗಿ ೩೦೦ ಇದ್ದ ಶಾಲಾ ದಾಖಲಾತಿ ಸಂಖ್ಯೆ ಬರೊಬ್ಬರಿ ೭೫೦ಕ್ಕೆ ಏರಿದೆ.

ತಮ್ಮ ಸೇವಾ ಉತ್ಕೃಷ್ಟತೆಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ವಲಯದ ತುಕ್ಕಾನಟ್ಟಿ ಗ್ರಾಮದ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ಅಪ್ಪಾಸಾಹೇಬ್ ಗಿರೆನ್ನವರ್ ಪಾತ್ರರಾಗಿದ್ದಾರೆ.

ತುಕ್ಕಾನಟ್ಟಿ ಎಂಬ ಶಿಕ್ಷಣದ ಬಗ್ಗೆ ಅಸಡ್ಡೆಯಿದ್ದ ಗ್ರಾಮದಲ್ಲಿ ಶಿಕ್ಷಕ ಗಿರೆನ್ನವರ್ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಶಾಲೆಯ ಮಕ್ಕಳಿಗಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಕ್ಕಳಿಗೆ ನಾಟಕ, ಸಂಗೀತ, ಹಾಗೂ ಕಂಠಪಾಠ ಸ್ಪರ್ಧೆ ಹಾಗೂ ಗೋಕಾಕದ ಮ್ಯೂಸಿಕ್ ಸ್ಟುಡಿಯೋಗೆ ವಿದ್ಯಾರ್ಥಿಗಳನ್ನು ಕರೆತಂದು ಅವರಿಗೆ ಸಂಗೀತ ಹಾಗೂ ನಾಟಕದ ಪಾತ್ರಗಳ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕ ಗಿರೆನ್ನವರ್ ಮಾಡಿದ್ದಾರೆ.

ಶಾಲೆ ದಾಖಲಾತಿ ಅಂದೋಲನದ ದಾಖಲೆ!!

ಶಿಕ್ಷಕ ಗಿರೆನ್ನವರ್ ಅವರು ತುಕ್ಕಾನಟ್ಟಿ ಗ್ರಾಮದಲ್ಲಿ, ತೆರೆದ ಸಾರೋಟಿನಲ್ಲಿ ಮಕ್ಕಳ ಮೆರವಣಿಗೆ ಮಾಡುವುದರ ಮೂಲಕ ಮಕ್ಕಳು ಹಾಗೂ ಪೋಷಕರ ಗಮನವನ್ನು ಸರ್ಕಾರಿ ಶಾಲೆಯತ್ತ ಸೆಳೆಯಲು ಶ್ರಮಿಸಿದ್ದಾರೆ. ಅಲ್ಲದೆ ವಾರದಲ್ಲಿ ಎರಡು ಬಾರಿ ಮಕ್ಕಳಿಗೆ ಬಿಸಿಯೂಟದಲ್ಲಿ ಅನ್ನ ಸಾರು ಬಿಟ್ಡು ವಿವಿಧ ಖಾದ್ಯಗಳನ್ನು ಮಾಡಿ ಮಕ್ಕಳ ಚಿತ್ತವನ್ನು ಶಾಲೆಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಿರೆನ್ನವರ್ ಕೆಲಸ ಮೆಚ್ಚಿಕೊಂಡ ಗ್ರಾಮಸ್ಥರು ಹಾಗೂ ಅಧಿಕಾರಿಗಳು..

ಗಿರೆನ್ನವರ್ ಅವರು ಶಾಲಾ ದಾಖಲಾತಿ ಹೆಚ್ಚು ಮಾಡಲು ಮಾಡಿದ ಎಲ್ಲ ಪ್ರಯತ್ನಗಳು ಯಶಸ್ವಿಯಾಗುತ್ತ ಬಂದಿದ್ದು ೩೦೦ ಇದ್ದ ಶಾಲೆಯ ದಾಖಲಾತಿ ಇಂದು ೭೫೦ ತಲುಪಿದೆ. ಇದನ್ನು ಮೆಚ್ಚಿ ಹಲವು ಉನ್ನತ ಶ್ರೇಣಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಗಿರೆನ್ನವರ್ ಅವರ ಕಾರ್ಯವನ್ನು ಮೆಚ್ಚಿದ್ದಾರೆ. ಅಲ್ಲದೇ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಕ್ಚೇತ್ರ ಶಿಕ್ಷಣಾಧಿಕಾರಿ ಅಜೀತ್ ಮಣ್ಣಿಕೇರಿಯವರು ಅಪ್ಪಾಸಾಹೇಬ್ ಗಿರೆನ್ನವರ್ ಅವರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ | Teachers Day | ವಿಜಯನಗರದ ಅಪೂರ್ವ ಶಿಕ್ಷಕರಿವರು; ಪಠ್ಯೇತರ ಜ್ಞಾನಕ್ಕೂ ಮಾರ್ಗದರ್ಶಕರಿವರು!

Exit mobile version