Site icon Vistara News

Tejasvi Surya : ತೇಜಸ್ವಿ ಸೂರ್ಯ ಮೊಬೈಲ್‌ನಿಂದ ಹಣ ಸುಲಿಗೆಯ ಬೆದರಿಕೆ ಕರೆ

Tejaswi Soorya

ಬೆಂಗಳೂರು: ಬಿಜೆಪಿ ಸಂಸದ ಹಾಗೂ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಅವರ ಮೊಬೈಲ್‌ನಿಂದ ಗುಜರಾತ್‌ನಲ್ಲಿನ ಬಿಜೆಪಿ ಯುವ ಮೋರ್ಚಾ ನಾಯಕನಿಗೆ ಹಣ ಮತ್ತು ವಜ್ರದ ಸುಲಿಗೆಯ ಬೆದರಿಕೆ ಕರೆ ಹೋಗಿರುವ ಪ್ರಕರಣ ನಡೆದಿದೆ. ತಮ್ಮ ಮೊಬೈಲ್‌ ದುರ್ಬಳಕೆ ಆಗಿರುವ ಬೆನ್ನಲ್ಲೇ ತೇಜಸ್ವಿ ಸೂರ್ಯ ಅವರು ದಕ್ಷಿಣ ಸೆನ್‌ ಪೊಲೀಸ್‌ ಠಾಣೆಯಲ್ಲಿ (South CEN Police station) ದೂರು ದಾಖಲಿಸಿದ್ದಾರೆ.

ಆಗಿದ್ದೇನು? : ಸಂಸದ ತೇಜಸ್ವಿ ಸೂರ್ಯ ಅವರ ಪರ್ಸನಲ್‌ ಸೆಕ್ರೆಟರಿ ಭಾನು ಪ್ರಕಾಶ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಪ್ರಕಾರ ತೇಜಸ್ವಿ ಸೂರ್ಯ ಅವರು ಕೆಲಸದ ಒತ್ತಡದಲ್ಲಿ ಇರುವುದರಿಂದ ಅವರ ಮೊಬೈಲ್‌ ಫೋನ್‌ ಭಾನು ಪ್ರಕಾಶ್‌ ಬಳಿ ಇರುತ್ತದೆ. ಕರೆಗಳಿಗೆ ಅವರು ಉತ್ತರಿಸುತ್ತಾರೆ. ಆದರೆ ಯಾರೋ ಸಂಸದರ ಮೊಬೈಲ್‌ ಫೋನ್‌ ಅನ್ನು ದುರ್ಬಳಕೆ ಮಾಡಿದ್ದಾರೆ. ಯಾರೋ ತೇಜಸ್ವಿ ಸೂರ್ಯ ಅವರ ಮೊಬೈಲ್‌ ಅನ್ನು ಕದ್ದು ಹಣ ಸುಲಿಗೆಯ ಬೆದರಿಕೆ ಕರೆ ಮಾಡಿ, ಬಖಿಕ ಇಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ಭಾನು ಪ್ರಕಾಶ್‌ ಹೇಳಿದ್ದಾರೆ.

ಕಳೆದ ಜುಲೈ 1ರಂದು ಬಿಜೆವೈಎಂ ಗುಜರಾತ್‌ ಘಟಕದ ಅಧ್ಯಕ್ಷ ಪ್ರಶಾಂತ್‌ ಕೊರಟ್‌ ಅವರು ತೇಜಸ್ವಿ ಸೂರ್ಯ ಅವರ ಮೊಬೈಲಿನಿಂದ ಕರೆ ಸ್ವೀಕರಿಸುತ್ತಾರೆ. ಬಳಿಕ ಕೊರಟ್‌ ಅವರು ಸಂಶಯ ಬಂದು ಸಂಸದ ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿ ಸುಲಿಗೆಯ ಬೆದರಿಕೆ ಕರೆ ಬಂದಿರುವ ಬಗ್ಗೆ ತಿಳಿಸಿದ್ದಾರೆ. ದಕ್ಷಿಣ ಸೆನ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಅಗತ್ಯವಾಗಿದೆ ಎಂದು ಭಾನು ಪ್ರಕಾಶ್‌ ಅವರು ಒತ್ತಾಯಿಸಿದ್ದಾರೆ.

Exit mobile version