ಬೆಂಗಳೂರು, ಕರ್ನಾಟಕ: ಬಾಗಲಕೋಟೆಯ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ತೇರದಾಳ ಕ್ಷೇತ್ರವನ್ನು ಬಿಜೆಪಿಯ ಅಭ್ಯರ್ಥಿ ಸಿದ್ದು ಸವದಿ ಅವರು ಗೆದ್ದುಕೊಂಡಿದ್ದಾರೆ. ಅವರು 72672 ಮತಗಳನ್ನು ಪಡೆದುಕೊಂಡಿದ್ದಾರೆ. ಸಿದ್ದು ಸವದಿ ಅವರು ಕಾಂಗ್ರೆಸ್‌ನ ಸಿದ್ದು ರಾಮಪ್ಪ ಕೊಣ್ಣೊರು ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯು 62457 ಮತಗಳನ್ನು ಪಡೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಪೂರ್ತಿ ಕಾಂಗ್ರೆಸ್‌ಮಯವಾಗಿದ್ದರೂ ತೇರಳದಾಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ(Terdal Election Results).
2023ರ ಚುನಾವಣೆಯ ಅಭ್ಯರ್ಥಿಗಳು
ಹಾಲಿ ಶಾಸಕ ಸಿದ್ದು ಸವದಿ ಅವರು ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಕಾಂಗ್ರೆಸ್ ಈ ಬಾರಿ ಉಮಾಶ್ರಿ ಅವರ ಬದಲಿಗೆ ಸಿದ್ದಪ್ಪ ಕೊನ್ನೂರು ಅವರಿಗೆ ಟಿಕೆಟ್ ನೀಡಿತ್ತು. ಜೆಡಿಎಸ್‌ನಿಂದ ಸುರೇಶ್ ಮಡಿವಾಳರ್ ಅವರು ಸ್ಪರ್ಧಿಸಿದ್ದರು.
2018 ಚುನಾವಣಾ ಫಲಿತಾಂಶ ಏನಾಗಿತ್ತು?
2008ರಲ್ಲಿ ರಚನೆಯಾದ ತೇರದಾಳ ವಿಧಾನಸಭೆ ಕ್ಷೇತ್ರದಲ್ಲಿ ಈವರೆಗೆ ಒಮ್ಮೆ ಕಾಂಗ್ರೆಸ್ ಮತ್ತು ಎರಡು ಬಾರಿ ಬಿಜೆಪಿ ಗೆದ್ದಿದೆ. 2008ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸಿದ್ದು ಸವದಿ ಅವರು ಪ್ರಸಕ್ತ ಹಾಲಿ ಸಚಿವರು. ಅವರು ಮತ್ತೊಮ್ಮೆ ಆಯ್ಕೆ ಬಯಸಿ ಕಣದಲ್ಲಿದ್ದರು. 2013ರಲ್ಲಿ ಈ ಕ್ಷೇತ್ರದಿಂದ ನಟಿ ಉಮಾಶ್ರೀ ಅವರು ಗೆದ್ದಿದ್ದರು. 2018ರಲ್ಲಿ ಬಿಜೆಪಿಯ ಸಿದ್ದು ಸವದಿ ಅವರು 87213 ಮತಗಳನ್ನು ಪಡೆದುಕೊಂಡು ಗೆಲುವು ಕಂಡಿದ್ದರು. ಕಾಂಗ್ರೆಸ್‌ನ ಉಮಾಶ್ರಿ ಅವರಿಗೆ 66324 ಮತಗಳು ಬಂದಿದ್ದವು. ಜೆಡಿಎಸ್‌ನ ಬಸಪ್ಪ ಕೊಣ್ಣೊರು ಅವರು 12435 ಮತಗಳನ್ನು ಪಡೆದುಕೊಂಡಿದ್ದರು.