Site icon Vistara News

Terrorists in Bengaluru : ಉಗ್ರರು ಇದ್ದದ್ದು ಹಿಂದುಗಳ ಮನೆಯಲ್ಲಿ; ತಾಯಿ, ತಂಗಿಯನ್ನು ತೋರಿಸಿ ಮನೆ ಪಡೆದಿದ್ದ ಉಗ್ರ!

Suspeceted terrorist suhail

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದೊಡ್ಡ ಸ್ಫೋಟವೊಂದನ್ನು ನಡೆಸಲು ಸ್ಕೆಚ್‌ ಹಾಕುವ ವೇಳೆ ಬಂಧಿತರಾದ ಐವರು ಶಂಕಿತ ಉಗ್ರರು (Terrorists in Bengaluru) ತಮ್ಮ ಕಾರ್ಯಸಾಧನೆಗಾಗಿ ಹಲವಾರು ತಂತ್ರಗಳನ್ನು ಬಳಸಿರುವುದು ಬಯಲಾಗಿದೆ. ಬೆಂಗಳೂರಿನ ಸಿಸಿಬಿ ಪೊಲೀಸರು (Bangalore CCB Police) ಬೆಂಗಳೂರಿನ ಕನಕ ನಗರದ ಸುಲ್ತಾನಾ ಪಾಳ್ಯದ ಮಸೀದಿ (Sultanapalya Mosque) ಬಳಿ ಟೆರರ್‌ ಮೀಟಿಂಗ್‌ (Terror Meeting) ನಡೆಯುತ್ತಿದ್ದ ವೇಳೆ ದಾಳಿ ಮಾಡಿ ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ ಮತ್ತು ರಬ್ಬಾನಿ ಎಂಬವರನ್ನು ಬಂಧಿಸಿದ್ದಾರೆ. ಈ ಐವರು ಆರೋಪಿಗಳು ಕನಕನಗರದ ಒಂದು ಮನೆಯಲ್ಲಿ ವಾಸವಾಗಿದ್ದರು. ಅವರು ಈ ಮನೆಯನ್ನು ಪಡೆದುದೇ ಒಂದು ರೋಚಕ ಕಥೆ!

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬ್ಯಾಚುಲರ್‌ಗಳಿಗೆ ಮನೆಯನ್ನು ಕೊಡಲು ಮಾಲೀಕರು ಹಿಂದೆ ಮುಂದೆ ನೋಡುತ್ತಾರೆ. ಅದರಲ್ಲೂ ಐದಾರು ಜನ ಯುವಕರು ಜತೆ ಸೇರಿದರೆ ಹೆಚ್ಚಿನವರು ನಿರಾಕರಣೆ ಮಾಡುತ್ತಾರೆ. ಈ ಸಮಸ್ಯೆಯ ನಿವಾರಣೆಗೆ ಈ ದುಷ್ಟ ಕೂಟ ದೊಡ್ಡದೊಂದು ಪ್ಲ್ಯಾನ್‌ನ್ನು ಮಾಡಿತ್ತು. ಅದೇನೆಂದರೆ ಶಂಕಿತ ಉಗ್ರರಲ್ಲಿ ಒಬ್ಬನ ತಾಯಿ ಮತ್ತು ತಂಗಿಯನ್ನೇ ಕರೆದುಕೊಂಡು ಬಂದು ತಾವು ಫ್ಯಾಮಿಲಿ ಎಂದು ಬಿಂಬಿಸಿದ್ದು.

ಹೌದು, ಬಂಧಿತರಲ್ಲಿ ಒಬ್ಬನಾದ ಸುಹೇಲ್‌ ಎಂಬಾತ ತನ್ನ ತಾಯಿ ಮತ್ತು ತಂಗಿಯನ್ನು ಕರೆದುಕೊಂಡು ಬಂದು ಈ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದ. ಆತನ ಇತರ ಗೆಳೆಯರು ಅಲ್ಲಿಗೆ ಬಂದಿರುತ್ತಿದ್ದರು. ಇವರ ದುಷ್ಟ ಕೂಟದ ಚಟುವಟಿಕೆಗಳೆಲ್ಲ ಈ ತಾಯಿ, ಮಗಳ ಮುಂದೆ ಕದ್ದು ಮುಚ್ಚಿ ನಡೆಯುತ್ತಿತ್ತು ಎನ್ನಲಾಗಿದೆ. ಅಥವಾ ಈ ಮಹಿಳೆಯರು ಕೂಡಾ ಇದರಲ್ಲಿ ಭಾಗಿಗಳಾ ಎಂದು ತನಿಖೆಯಲ್ಲಿ ಬಯಲಾಗಬೇಕಾಗಿದೆ.

ಕನಕನಗರದಲ್ಲಿ ಇದೊಂದು ಸಣ್ಣ ಮನೆಯಾಗಿದ್ದು, ಸುಹೇಲ್‌ ತನ್ನ ತಾಯಿ ಮತ್ತು ತಂಗಿಯನ್ನು ಕರೆದುಕೊಂಡು ಬಂದು ಫ್ಯಾಮಿಲಿ ಎಂದು ಮಾಲೀಕರನ್ನು ನಂಬಿಸಿದ್ದ. ಆದರೆ, ಹೆಚ್ಚಿನ ಸಮಯದಲ್ಲಿ ಈ ಮನೆಯಲ್ಲಿ ಇರುತ್ತಿದ್ದುದು ಬಂಧಿತ ಐವರು ಶಂಕಿತರೇ.

ಚಿಕ್ಕ ಮನೆಯಲ್ಲಿ ಸಂಚು ನಡೆಸಿದರೆ ಯಾರಿಗೂ ಸಂಶಯ ಬರುವುದಿಲ್ಲ ಎನ್ನುವ ಕಾರಣಕ್ಕಾಗಿ, ಇಕ್ಕಟ್ಟಿನ ಏರಿಯಾದಲ್ಲಿರುವ ಸಣ್ಣ ಮನೆಯನ್ನೇ ಆರೋಪಿಗಳು ಆಯ್ಕೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಇಕ್ಕಟ್ಟಿನ ಜಾಗದ ಎರಡನೇ ಮಹಡಿಯಲ್ಲಿ ಈ ಮನೆ ಇತ್ತು. ಈ ಮನೆಗೆ 50000 ರೂ. ಅಡ್ವಾನ್ಸ್‌ ಪಡೆಯಲಾಗಿತ್ತು.

ಸುಲ್ತಾನ್ ಪಾಳ್ಯದ ಮುಕ್ರಾಮ್ ಮಸೀದಿ ಬಳಿ ಈ ಮನೆಯಿದ್ದು, ಕಳೆದು ಮೂರು ತಿಂಗಳ ಹಿಂದೆ ಬಂದು ವಾಸವಾಗಿದ್ದಾರೆ. ಅಚ್ಚರಿ ಎಂದರೆ, ಈ ದುಷ್ಟರು ವಾಸವಾಗಿದ್ದು ಹಿಂದುಗಳಿಗೆ ಸೇರಿದ್ದ ಬಾಡಿಗೆ ಮನೆಯಲ್ಲಿ. ಹಿಂದು ಮಾಲೀಕರಿಗೆ ಇವರ ಬಗ್ಗೆ ಯಾವುದೇ ಸಂಶಯ ಬಾರದೆ ಅವರು ಒಳ್ಳೆಯತನದಿಂದ ಬಾಡಿಗೆಗೆ ಮನೆ ಕೊಟ್ಟಿದ್ದರು.

ಚಿಕ್ಕಮಗಳೂರಿನಲ್ಲಿ ಸೈಯದ್‌ ಖಾಲಿದ್‌ ಅಹಮದ್‌ ಬಂಧನ

ಈ ನಡುವೆ, ಪ್ರಕರಣದ ಆರನೇ ಆರೋಪಿ ಎಂದು ಹೇಳಲಾಗಿರುವ ಸೈಯದ್‌ ಖಾಲಿದ್‌ ಅಹಮದ್‌ನನ್ನು ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. ಆತನಿಂದ ಒಂದು ಡ್ರಾಗರ್‌ ವಶಕ್ಕೆ ಪಡೆಯಲಾಗಿದೆ. ಆರೋಪಿ ಸೈಯದ್‌ ಖಾಲಿದ್‌ ಅಹಮದ್‌ ತನ್ನ ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಹೋಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಚಿಕ್ಕಮಗಳೂರು ಪೊಲೀಸರ ಸಹಾಯ ಪಡೆದು ಸೈಯದ್ ಖಾಲಿ ಅಹಮದ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Bangalore Terror : ಬೆಂಗಳೂರು ಸ್ಫೋಟಕ್ಕೆ ಸ್ಕೆಚ್‌ ಹಾಕಿದ್ದ ಶಂಕಿತ ಉಗ್ರರು; ಬಂಧಿತರಿಂದ ಭಯಾನಕ ವಿವರ ಬಹಿರಂಗ

Exit mobile version