Site icon Vistara News

ಕಾರಿಗೆ ಸಿಕ್ಕಿ ನರಳಾಡಿ ನರಳಾಡಿ ಸತ್ತ ಶ್ವಾನ: ಬೆಂಗಳೂರಿನಲ್ಲಿ ಅಮಾನವೀಯ ಘಟನೆ

ನರಳಾಡಿ ಸತ್ತ ಶ್ವಾನ

ಬೆಂಗಳೂರು: ಹಾಲಿನ ಬೂತ್‌ ಬಳಿ ಮಲಗಿದ್ದ ಬೀದಿ ನಾಯಿಯ ಮೇಲೆ ಅಮಾನವೀಯವಾಗಿ ಕಾರು ಹತ್ತಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಜಯನಗರದ 9ನೇ ಕ್ರಾಸ್‌ನಲ್ಲಿ ಮೂರು ದಿನದ ಹಿಂದೆ ನಡೆದ ಘಟನೆ ಬೆಳಕಿಗೆ ಬಂದಿದ್ದು, ಕಾರು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರಯ ಪೊಲೀಸ್‌ ಠಾನೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆದಿದ್ದವು. 2022ರ ಜನವರಿ 31ರಂದು ಸಿದ್ದಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 23 ವರ್ಷದ ಯುವಕ ತನ್ನ ಐಷಾರಾಮಿ ಆಡಿ ಕಾರನಿಂದ ರಸ್ತೆ ಬದಿ ಮಲಗಿದ್ದ ಬೀದಿ ನಾಯಿಯ ಮೇಲೆ ಕಾರನ್ನು ಹಾಯಿಸಿದ್ದ. ಎಸ್‌.ಎಂ. ಬದ್ರಿಪ್ರಸಾದ್‌ ಎಂಬಾತ ನಾಯಿಯನ್ನು ಸಾಯಿಸುವ ಉದ್ದೇಶದಿಂದಲೇ ಕಾರನ್ನು ಹರಿಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈತನಿಗ ವಿರುದ್ಧ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಸೆಕ್ಷನ್ 11 ಮತ್ತು ಐಪಿಸಿ ಸೆಕ್ಷನ್ 428 ರ ಅಡಿಯಲ್ಲಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾತ್ತು.

ಇದನ್ನೂ ಓದಿ | Motivational story: ಕುಂಟ ನಾಯಿ ಮರಿಯ ನೋವು ಆ ಮಗುವಿಗಷ್ಟೇ ಅರ್ಥವಾಯ್ತು…

ಅಂತಹದೇ ಇನ್ನೊಂದು ಪ್ರಕರಣದಲ್ಲಿ 2022ರ ಫೆಬ್ರವರಿ 7ರಂದು ಮಾಜಿ ಸಂಸದ ಡಿ.ಕೆ. ಆದಿಕೇಶವುಲು ಅವರ ಮೊಮ್ಮಗ ಆದಿ ನಾರಾಯಣ ನಾಯ್ಡು ಇಂತಹದೇ ಕೃತ್ಯವನ್ನು ಎಸಗಿದ್ದ. ಬೆಂಗಳೂರು ಕಾಕ್ಸ್ ಟೌನ್ ನಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಚಲಾಯಿಸಿದ್ದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿತ್ತು. ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಓಡುತ್ತಿರುವ ದೃಶ್ಯ ವಿಡಿಯೋದಲ್ಲಿತ್ತು..

ಪ್ರಾಣಿಗಳ ಸಂಕಟವು ಅನೇಕ ನಾಗರಿಕರನ್ನು ಕೆರಳಿಸಿತ್ತು ಮತ್ತು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದರು. ಓಡಿಹೋದ ಆರೋಪಿಯ ವಿರುದ್ಧ ದೂರು ದಾಖಲು ಮಾಡಿ, ಪೋಲಿಸರು ಬಂದಿಸಿದ್ಧರು.

ದೂರು ನೀಡಿದವರು

ಇದೀಘ ಮೂರನೇ ಘಟನೆ ರಾಜಧಾನಿಯಲ್ಲಿ ನಡೆದಿದೆ. ಮೇ27ರಂದು ಜಯನಗರದ 9ನೇ ಕ್ರಾಸ್‌, 28ನೇ ಮುಖ್ಯರಸ್ತೆ, 39ನೆ ಅಡ್ಡರಸ್ತೆಯ ಹಾಲಿನ ಬೂತ್‌ ಬಳಿ ನಾಯಿ ಮಲಗಿತ್ತು.

ಮಲಗಿದ್ದ ಬೀದಿ ನಾಯಿ ಮೇಲೆ, ಒಬ್ಬ ಕಿಡಿಗೇಡಿ ಕಾರು ಹರಿಸಿ ಹಿಂದೆಯೂ ತಿರುಗಿನೋಡದೆ ಓಡಿಹೋಗಿದ್ದಾನೆ.

ಕಾರು ಹತ್ತಿಸಿದ ಕಾರಣ ಆ ನಾಯಿ ನರಳಾಡಿ ಸಾವನ್ನಪ್ಪಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣದ ಕುರಿತು ಶ್ವಾನಪ್ರಿಯರಾದ ನಾಗರಾಜ್‌ ಹಾಗೂ ಬದ್ರೀ ಪ್ರಸಾದ್‌ರಿಂದ ದೂರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ತಾವುಗಳು ಸಾಖಿರುವ ಕರಿಯ ಎಂಬ ನಾಯಿಯು ಮಿಲ್ಕ್‌ ಬೂತ್‌ ಬಳಿ ಮಲಗಿತ್ತು. ಹತ್ತಿರದಲ್ಲಿರುವ ಡೆಂಟಲ್‌ ಕ್ಲಿನಿಕ್‌ ಬಳಿಯಲ್ಲಿ ಕಾರನ್ನು ನಿಲ್ಲಿಸಿದ್ದ. ಕೆಲ ಹೊತ್ತಿನ ನಂತರ ಕಾರನ್ನು ಚಲಾಯಿಸಿಕೊಂಡು, ಮಲಗಿದ್ದ ನಾಯಿಯ ಮೇಲೆ ಹರಿಸಿದ್ದಾನೆ. ನಂತರ ಕೆಲಹೊತ್ತು ಒದ್ದಾಡಿದ ನಾಯಿ ಸಾವನ್ನಪ್ಪಿದೆ. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಇದನ್ನೂ ಓದಿ: Viral Video: ನಾಯಿಯಾಗಲು 12 ಲಕ್ಷ ರೂಪಾಯಿ ವ್ಯಯಿಸಿದ ವ್ಯಕ್ತಿ; ಈತನೀಗ ಥೇಟ್‌ ಶ್ವಾನ

Exit mobile version