Site icon Vistara News

Accident | ರಾಯಭಾಗ ಬಳಿ ಮಾಜಿ ಡಿಸಿಎಂ ಸವದಿ ಕಾರು ಪಲ್ಟಿ, ಪ್ರಾಣಾಪಾಯದಿಂದ ಪಾರು

Accident

ಚಿಕ್ಕೋಡಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಕಾರು ಅಪಘಾತಕ್ಕೀಡಾಗಿದೆ. ರಸ್ತೆಯಲ್ಲಿ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದ್ದು (Accident), ಲಕ್ಷ್ಮಣ ಸವದಿ ಸೇರಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಬಳಿ ಬುಧವಾರ ಅಪಘಾತ ನಡೆದಿದೆ. ಕಾರು ಪಲ್ಟಿಯಾಗುತ್ತಿದ್ದಂತೆ ಸಹಾಯಕ್ಕೆ ಸ್ಥಳೀಯರು ಧಾವಿಸಿ, ಕಾರಿನೊಳಗೆ ಇದ್ದವರನ್ನು ರಕ್ಷಿಸಿದ್ದಾರೆ. ಎಲ್ಲರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ; ವಿದ್ಯಾರ್ಥಿಗೆ ಥಳಿಸಿದ ಕಿಡಿಗೇಡಿಗಳು!

Exit mobile version