Site icon Vistara News

Viral Video : ಜನಪದ ಹಾಡೂ ವೈರಲ್​! ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡಿಗೆ ಬಗೆಬಗೆಯ ರೀಲ್ಸ್​!

Viral Song in karnataka

#image_title

ಬೆಂಗಳೂರು: ಕಚ್ಚಾ ಬಾದಾಮ್​ ಎಂಬ ಹಾಡು ವರ್ಷದ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರೀಲ್ಸ್​ ಮಾಡುವವರ, ಟ್ರೋಲಿಗರ ಅಚ್ಚುಮೆಚ್ಚಿನ ಹಾಡಾಗಿದ್ದ ಕಾರಣ ಎಲ್ಲಿಗೆ ಹೋದರೂ ಅದೇ ಸ್ವರ ಕೇಳಿಬರುತ್ತಿತ್ತು. ಪಶ್ಚಿಮ ಬಂಗಾಳದಲ್ಲಿ ಶೇಂಗಾ ಮಾರುವ ವ್ಯಕ್ತಿಯೊಬ್ಬ ಗ್ರಾಹಕರನ್ನು ಸೆಳೆಯಲು ಹಾಡುತ್ತಿದ್ದ ಈ ಹಾಡು ಡಿಜಿಟಲ್​ ರೂಪ ಪಡೆದು ಇಂಟರ್ನೆಟ್​ ಸೆನ್ಸೇಷನ್ ಆಗಿತ್ತು. 5ಜಿ ​ ಯುಗದಲ್ಲಿ ಸಿನಿಮಾ ಹಾಡುಗಳು ಮಾತ್ರವಲ್ಲ, ಎಂಥದ್ದೇ ಹಾಡಾದರೂ ವೈರಲ್​ ಆಗಬಹುದು ಎಂಬ ಚರ್ಚೆ ಆ ವೇಳೆ ನಡೆದಿತ್ತು. ಅಂಥದ್ದೇ ಒಂದು ವೈರಲ್ ವರ್ತಮಾನ ಇದೀಗ ಕರ್ನಾಟಕದಲ್ಲಿ ಸೃಷ್ಟಿಯಾಗಿದೆ. 90ರ ದಶಕದಲ್ಲಿ ಕ್ಯಾಸೆಟ್​ ರೂಪ ಪಡೆದಿದ್ದ ಜನಪದ ಹಾಡೊಂದು ವೈರಲ್ (Viral Video) ಆಗಿದೆ. ಅದುವೇ, ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂಬ ಹಾಡು.

ಕರ್ನಾಟಕದಾದ್ಯಂತ ಈ ಹಾಡು ವೈರಲ್ ಆಗುತ್ತಿದೆ. ಇನ್​ಸ್ಟಾಗ್ರಾಮ್​, ಫೇಸ್​ಬುಕ್​​ಗಳನ್ನು ಓಪನ್​ ಮಾಡಿದರೆ ಅದೇ ಹಾಡು ಕೇಳಿಬರುತ್ತಿದೆ. ಅಷ್ಟೊಂದು ಹಳೆಯ ಹಾಡಾಗಿದ್ದರೂ ಅದಕ್ಕೀಗ ಡಾನ್ಸ್​ ಕೂಡ ಮಾಡಲು ಶುರು ಮಾಡಿದ್ದಾರೆ. ಈ ಮೂಲಕ ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡನ್ನು ಹಾಕಿಕೊಂಡು ರೀಲ್ಸ್ ಪ್ರೇಮಿಗಳು ಹಬ್ಬ ಮಾಡುತ್ತಿದ್ದಾರೆ. ಕೆಲವರು ಬೇರೆ ಬೇರೆ ರೂಪದಲ್ಲಿ ಈ ಹಾಡನ್ನು ಬಳಕೆ ಮಾಡುತ್ತಿದ್ದಾರೆ. ಕೆಲವರು ಅಪಾಹಾಸ್ಯ ಮಾಡಿದರೆ, ಇನ್ನು ಕೆಲವರು ತಮ್ಮ ಪ್ರದೇಶದ ಭಾಷೆಗೆ ಹೊಂದಿಕೆ ಮಾಡುತ್ತಿದ್ದಾರೆ.

ಇದೊಂದು ಅಪ್ಪಟ ಜಾನಪದ ಹಾಡು. ಹಾಡಿದವರು ಖ್ಯಾತ ಜನಪದ ಹಾಡುಗಾರ ಮಳವಳ್ಳಿ ಮಹಾದೇವಸ್ವಾಮಿ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದವರು. ಅರ್ಜುನನ ಜೋಗಿ ಹಾಡು ಭಾಗ 1ರಲ್ಲಿ ಈ ಹಾಡು ಬರುತ್ತದೆ. ಹತ್ತಿರಹತ್ತಿರ ಒಂದು ಗಂಟೆ ಇರುವ ಈ ಹಾಡಿನ ಸರಣಿಯಲ್ಲಿ ಮಧ್ಯದಲ್ಲಿನ ಹಾಡನ್ನು ಎತ್ತಿಕೊಂಡು ಈಗ ವೈರಲ್ ಮಾಡಿರುವುದೇ ಅಚ್ಚರಿಯ ಸಂಗತಿ. ಈ ಹಾಡು ಇತ್ತೀಚಿನ ಹಾಡುಗಳೇನೂ ಅಲ್ಲ. ದಶಗಳ ಹಿಂದಿನಿಂದಲೂ ಹಾಡಲಾಗುತ್ತಿದೆ. ಸಿಡಿ, ಕ್ಯಾಸೆಟ್​ಗಿಂತ ಹಿಂದಿನ ಕಾಲದಿಂದಲೂ ಅವರು ಈ ಹಾಡನ್ನು ಅವರು ಹಾಡುತ್ತಿದ್ದಾರೆ. ಅಂತ ಹಾಗೆ ಮಹಾದೇವಸ್ವಾಮಿ 1000ಕ್ಕೂ ಅಧಿಕ ಜಾನಪದ ಹಾಡುಗಳು ಹಾಡಿದ್ದಾರೆ.

ಮಹಾದೇವಸ್ವಾಮಿ ಹುಟ್ಟಿದ್ದು 1959ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ. ಇವರ ತಂದೆ ಶಹನಾಯಿ ವಾದಕ ಮಾದಯ್ಯ, ತಾಯಿ ಸೋಬಾನೆ ಹಾಡುಗಾರ್ತಿ ಮಂಚಮ್ಮ. ಮಲೆ ಮಾದೇವಪ್ಪ ಮತ್ತು ಮಂಟೆಸ್ವಾಮಿಯ ಭಕ್ತರಾಗಿರುವ ಮಹಾದೇವಸ್ವಾಮಿ ಅವರ ಹಾಡುಗಳು ಮಹದೇಶ್ವರ ಬಗೆಗಿದೆ. ಮಹದೇವಸ್ವಾಮಿ. 90ರ ದಶಕದಲ್ಲಿ ಅವರು ಹಾಡಿರುವ ಕ್ಯಾಸೆಟ್​​ಗಳಿಗೆ ಬೇಡಿಕೆ ಸೃಷ್ಟಿಯಾಗಿತ್ತು. ಇವರು ಹಾಡಿರುವ ಹಾಡುಗಳ 20 ಲಕ್ಷಕ್ಕೂ ಅಧಿಕ ಕ್ಯಾಸೆಟ್​​ಗಳು ಮಾರಾಟವಾಗಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Vinod Prabhakar: ಗಾಸಿಪ್‌ಗಳಿಗೆ ತೆರೆ ಎಳೆದು ಒಟ್ಟಿಗೆ ಕಾಣಿಸಿಕೊಂಡ ಟೈಗರ್‌ ಪ್ರಭಾಕರ್‌ ಮಕ್ಕಳು; ಪೋಟೊ ವೈರಲ್‌!

ಮಹಾದೇವಸ್ವಾಮಿ ಅವರು ಸಿದ್ದಪ್ಪಾಜಿಯ ಪವಾಡಗಳು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಓದಿದ್ದು 10ನೇ ತರಗತಿ. ಅದರೆ, ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ಯಾವಾಗ ರೆಕಾರ್ಡ್ ಆದ ಗೀತೆ?

ಅರ್ಜುನನ ಜೋಗಿ ಮಹಾದೇವಸ್ವಾಮಿ ಅವರ ಜನಪ್ರಿಯ ಹಾಡುಗಳ ಸರಣಿ. ಝೇಂಕಾರ ಮ್ಯೂಸಿಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ 2019ರ ಜೂನ್‌ 19ರಂದು ಈ ಸರಣಿ ಹಾಡುಗಳು ಬಿಡುಗಡೆಗೊಂಡಿವೆ. ಅಲ್ಲಿಂದ ಇಲ್ಲಿಯವರೆಗೂ ಈ ಹಾಡು 5ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇದೀಗ ರೀಲ್ಸ್‌ನಲ್ಲಿಯೂ ಈ ಹಾಡು ಟ್ರೆಂಡ್‌ ಆಗಿದೆ. ಜನಪದ ಹಾಡು ಟ್ರೆಂಡ್ ಆಗಿರುವ ಬಗ್ಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version