Site icon Vistara News

Exam Scam: ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್ ಕೊನೆಗೂ ಬಂಧನ

RD Patil

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ (Exam Scam) ಕಿಂಗ್‌ಪಿನ್ ಆರ್‌.ಡಿ. ಪಾಟೀಲ್‌ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಅಫಜಲಪುರ- ಮಹಾರಾಷ್ಟ್ರ ಗಡಿಯಲ್ಲಿ ಕಲಬುರಗಿ ಜಿಲ್ಲೆ ವಿಶೇಷ ಪೊಲೀಸ್ ತಂಡ ಬಂಧಿಸಿದೆ.

ಪೊಲೀಸರು ಆರ್‌.ಡಿ. ಪಾಟೀಲ್‌ನನ್ನು ಬಂಧಿಸಿ ಕಲಬುರಗಿಗೆ ಕರೆತರುತ್ತಿದ್ದಾರೆ. ನ 6. ರಂದು ಕಲಬುರಗಿ ನಗರದ ವರ್ಧಾ ಲೇಔಟ್‌ನ ಮಹಾಲಕ್ಷ್ಮಿ ಅಪಾರ್ಟ್ಮೆಂಟ್‌ನ ಕಾಂಪೌಂಡ್ ಹಾರಿ ಆರ್‌.ಡಿ. ಪಾಟೀಲ್ ಎಸ್ಕೇಪ್ ಆಗಿದ್ದ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದಾದ ನಂತರ ಆತನ ಸಹಚರ ಮತ್ತು ಆಶ್ರಯ ನೀಡಿದವರನ್ನು ಬಂಧಿಸಲಾಗಿತ್ತು. ಇದೀಗ ಪಾಟೀಲ್‌ ಕೂಡ ಸಿಕ್ಕಿಬಿದ್ದಿದ್ದಾನೆ.

ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಎರಡು ದಿನದಲ್ಲಿ ಆರೋಪಿ ಆರ್‌.ಡಿ.ಪಾಟೀಲ್ ಶರಣಾಗಬಹುದು, ಇಲ್ಲವೇ ಪೊಲೀಸರೇ ಬಂಧಿಸಬಹುದು ಎಂದು ನ. 9 ರಂದು ವಿಸ್ತಾರ ನ್ಯೂಸ್‌ ಸುದ್ದಿ ಪ್ರಸಾರ ಮಾಡಿತ್ತು. ಇದಾದ ಬೆನ್ನಲ್ಲೇ ಆರೋಪಿಯ ಬಂಧನವಾಗಿದೆ.

ಇದನ್ನೂ ಓದಿ | Drugs Case : ಬೆಂಗಳೂರಲ್ಲೊಂದು ಡ್ರಗ್ಸ್‌ ಫ್ಯಾಕ್ಟರಿ; ಕುಕ್ಕರ್‌ನಲ್ಲಿ ಮಾರಕ ಎಂಡಿಎಂಎ ತಯಾರಿ

ಅಕ್ಟೋಬರ್‌ 28 ಮತ್ತು 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination authority-KEA) ನಡೆಸಿದ ನಿಗಮ ಮತ್ತು ಮಂಡಳಿ ನೇಮಕಾತಿ ಪರೀಕ್ಷೆಯ (Exam Scam) ವೇಳೆ ಅಭ್ಯರ್ಥಿಗಳಿಗೆ ಬ್ಲೂ ಟೂತ್‌ ಮೂಲಕ ಮಾಹಿತಿ ನೀಡಿ ಅಕ್ರಮ ಎಸಗಲಾಗಿತ್ತು. ಇದರ ಮಾಸ್ಟರ್‌ಮೈಂಡ್ ಆರ್‌.ಡಿ. ಪಾಟೀಲ್‌ ಪರಾರಿಯಾಗಿದ್ದ. ನಂತರ ಆತನ ಸಹಚರ ಮತ್ತು ಪಾಟೀಲ್‌ಗೆ ಆಶ್ರಯ ನೀಡಿದವರನ್ನು ಬಂಧಿಸಲಾಗಿತ್ತು.

ಆತನ ಸಹಚರ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದ ಶಿವಕುಮಾರ್ ಎಂಬಾತನನ್ನು ಬಂಧಿಸಲಾಗಿತ್ತು. ಶಿವಕುಮಾರ್ ಆರ್.ಡಿ. ಪಾಟೀಲ್ ಆಪ್ತ ಮತ್ತು ಗುತ್ತಿಗೆದಾರನಾಗಿದ್ದಾರೆ. ಆರ್. ಡಿ. ಪಾಟೀಲ್ ಎಸ್ಕೇಪ್ ಆದ ಬಳಿಕ ಶಿವಕುಮಾರ್ ಜತೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿತ್ತು. ಕಾಲ್ ಹಿಸ್ಟರಿಯಲ್ಲಿ ಶಿವಕುಮಾರ್ ಸಂಪರ್ಕದಲ್ಲಿರೋದು ಪತ್ತೆಯಾದ ಹಿನ್ನೆಲೆಯಲ್ಲಿ ಶಿವಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಆಶ್ರಯ ನೀಡಿದ ಇಬ್ಬರು ಅರೆಸ್ಟ್‌

ಇದನ್ನೂ ಓದಿ | Road Accident: ಬೊಲೆರೊ- ಸಾರಿಗೆ ಬಸ್ ಡಿಕ್ಕಿಯಾಗಿ 7 ಮಂದಿಗೆ ಗಾಯ

ಆರೋಪಿ ಆರ್.ಡಿ ಪಾಟೀಲ್‌ಗೆ ಆಶ್ರಯ ಕೊಟ್ಟ ಆರೋಪದಲ್ಲಿ ಅಫ್ಜಲ್‌ಪುರ ಪೊಲೀಸರು, ಶಹಾಪುರ ನಿವಾಸಿ‌ ಶಂಕರ್ ಗೌಡ ಯಳವಾರ ಮತ್ತು ದೀಲಿಪ್ ಪವಾರ್ ಎಂಬವರನ್ನು ಬಂಧಿಸಿದ್ದಾರೆ. ಶಂಕರ ಗೌಡ ಅವರು ವರದಾ ನಗರದ ಅಪಾರ್ಟ್ಮೆಂಟ್ ಮಾಲೀಕರು. ದಿಲೀಪ್‌ ಪವಾರ್‌ ಅಪಾರ್ಟ್ಮೆಂಟ್ ನೋಡಿಕೊಳ್ಳುತ್ತಿದ್ದ. ಕಳೆದ ಅಕ್ಟೋಬರ್ 3ರಂದೇ ಇವರು ಆರ್‌.ಡಿ ಪಾಟಿಲ್‌ಗೆ ಕೋಣೆಯ ಕೀ ಕೊಟ್ಟಿದ್ದರು. ಬಸವರಾಜ್ ಪಾಟೀಲ್ ಎಂಬುವ ಹೆಸರಿನಲ್ಲಿ ಆರ್‌.ಡಿ. ಪಾಟೀಲ್‌ ಕೀ ಪಡೆದಿದ್ದ ಎನ್ನಲಾಗಿದೆ. ತಾನು ರಿಯಲ್ ಎಸ್ಟೆಟ್ ವ್ಯವಹಾರ ಮಾಡುತ್ತಿರುವುದಾಗಿ ಆತ ಕೋಣೆಯನ್ನು ಬಾಡಿಗೆಗೆ ಪಡೆದಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version