ಹಾವೇರಿ: ಶಿಗ್ಗಾಂವ್ನಲ್ಲಿ ಮಹಿಳೆಯೊಬ್ಬರ ಮೇಲೆ ಮುಸುಕುಧಾರಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಬುಧವಾರ ಸಾಯಂಕಾಲ 8 ಗಂಟೆಯ ಸುಮಾರಿಗೆ ಮನೆಯ ಮುಂದಿನ ಕಟ್ಟೆ ಮೇಲೆ ಕುಳಿತಿದ್ದ ಸಲ್ಮಾ ಬಾನು ಎಂಬ ಮಹಿಳೆ ಮೇಲೆ ಮುಸುಕುಧಾರಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕರೆಂಟ್ ಹೋಗಿದ್ದುದರಿಂದ ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಮಹಿಳೆ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಬೈಕ್ನಲ್ಲಿ ಬಂದಿದ್ದ ಮುಸುಕುಧಾರಿಗಳು ಗುಂಡು ಹಾರಿಸುತ್ತಿದ್ದಂತೆ ಕಟ್ಟೆ ಮೇಲೆ ಕುಳಿತಿದ್ದ ಸಲ್ಮಾ ಭಾನು ಬೆಚ್ಚಿ ಮನೆಯೊಳಗೆ ಓಡಿ ಹೋಗಿದ್ದಾರೆ. ಮನೆಯ ಗೋಡೆಗೆ ಗುಂಡು ಬಡಿದಿದೆ.
ಸಲ್ಮಾ ಬಾನು ಅವರ ಮೇಲೆ ನಡೆದ ಈ ಗುಂಡಿನ ದಾಳಿ ಶಿಗ್ಗಾಂವ್ ಜನರನ್ನ ಬೆಚ್ವಿಬಿಳಿಸಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಗೆ ಪತಿ ಪತ್ನಿ ಕಲಹ ಕಾರಣ ಎಂದು ಸಂಶಯಿಸಲಾಗಿದೆ. ಇದೇ ಸಂಶಯದ ಮೇಲೆ ಪತಿ ಅಬ್ದುಲ್ ಖಾದರ್ ವಿರುದ್ಧ ಪತ್ನಿ ಸಲ್ಮಾ ಬಾನು ದೂರು ನೀಡಿದ್ದಾರೆ. 15 ವರ್ಷಗಳ ಹಿಂದೆ ಶಿಗ್ಗಾಂವ್ ತಾಲೂಕಿನ ಸಲ್ಮಾ ಬಾನು ಹುಬ್ಬಳ್ಳಿಯ ಅರಳಿಕಟ್ಟಿ ಗ್ರಾಮದ ಅಬ್ದುಲ್ ಖಾದರ್ ಜೊತೆ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಇಬ್ಬರ ನಡುವೆ ದಾಂಪತ್ಯ ಕಲಹ ಸುರುವಾಗಿದ್ದು, ಕಳೆದೆರಡು ವರ್ಷಗಳಿಂದ ಪತಿಯಿಂದ ದೂರ ಇದ್ದ ಸಲ್ಮಾ ಬಾನು ಹುಲಗೂರಿನ ತಮ್ಮ ತವರುಮನೆ ಸೇರಿದ್ದರು. ಇದೇ ಕಾರಣಕ್ಕೆ ತಮ್ಮ ಮೇಲೆ ದಾಳಿ ನಡೆದಿದೆ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಗನ ಪಬ್ಜೀ ಹುಚ್ಚಾಟ ತಡೆದ ತಾಯಿ ಗುಂಡೇಟಿಗೆ ಬಲಿ