ಮಂಗಳೂರು: ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ಮಂಗಳೂರಿನ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೆ ಭಾರಿ ಪ್ರಮಾಣದ ಮಳೆ ನೀರು ನುಗ್ಗಿದೆ. ಇದರಿಂದಾಗಿ ಪ್ರಾಣಿಗಳ ವಾಸ್ತವ್ಯಕ್ಕೆ ಸಮಸ್ಯೆಯುಂಟಾಗಿದೆ.
2004ರಲ್ಲಿ ಉದ್ಘಾಟನೆಗೊಂಡ ಪಿಲಿಕುಳ ಮೃಗಾಲಯದಲ್ಲಿ ಇದೇ ಮೊದಲ ಬಾರಿಗೆ ನೆರೆ ಪರಿಸ್ಥಿತಿ ಉದ್ಭವಿಸಿದೆ. ಎಕರೆಗಟ್ಟಲೆ ಪ್ರದೇಶದಲ್ಲಿ ಪಿಲಿಕುಳ ಮೃಗಾಲಯದ ವ್ಯಾಪ್ತಿಯಿದ್ದು, ಬಹುತೇಕ ಭಾಗ ಮುಳುಗಡೆಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪಿಲಿಕುಳದಲ್ಲಿ ದೊಡ್ಡ ಪ್ರಮಾಣದ ನೀರು ಹರಿದು ಬಂದು ಪಿಲಿಕುಳದ ಪಾದಚಾರಿ ಮಾರ್ಗ ಬಂದ್ ಆಗಿದೆ.
ಮೃಗಾಲಯಕ್ಕೆ ನೀರು ನುಗ್ಗಿ ಕೆಲ ಪ್ರಾಣಿಗಳ ವಾಸ್ತವ್ಯಕ್ಕೆ ಸಮಸ್ಯೆ ಆಗಿದ್ದು, ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಕಟ್ಟಡಗಳ ಸುತ್ತ ನೀರು ಜಲಾವೃತಗೊಂಡಿದೆ. ಪಿಲಿಕುಳದ ಜೈವಿಕ ಉದ್ಯಾನ, ಲೇಕ್ ಗಾರ್ಡನ್, ಸಂಸ್ಕೃತಿ ಗ್ರಾಮ ಹಾಗೂ ಗುತ್ತು ಮನೆಯ ಪರಿಸ್ಥಿತಿಯೂ ಇದೇ ರೀತಿ ಆಗಿದೆ.
ಇದನ್ನೂ ಓದಿ | Rain News | ಮಂಗಳೂರು ಏರ್‌ಪೋರ್ಟ್ ರನ್ ವೇ ಬಳಿ ರಸ್ತೆ ಕುಸಿತ, ಫ್ಲೈಟ್ ಹಾರಾಟಕ್ಕಿಲ್ಲ ತೊಂದರೆ