ಬೆಳಗಾವಿ: ಕಳ್ಳರೆಂದು ಭಾವಿಸಿ ಅಪರಿಚಿತ ವ್ಯಕ್ತಿಗಳನ್ನು ಕಟ್ಟಿ ಹಾಕಿ ಹೊಡೆಯುವ ದುಷ್ಕೃತ್ಯಗಳು ಹೆಚ್ಚಾಗಿವೆ. ಸದ್ಯ ಕಳ್ಳರೆಂದು (Theft Case) ಭಾವಿಸಿ ಯುವಕರ ಮೇಲೆ ಜೋಡಕುರುಳಿ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಜೋಡಕುರಳಿ ಗ್ರಾಮಕ್ಕೆ ಬೆಳ್ಳಂಬೆಳಗ್ಗೆ ನಾಲ್ವರು ಯುವಕರು ತಲೆಗೆ ಮಂಕಿ ಕ್ಯಾಂಪ್ ಹಾಕಿಕೊಂಡು ಬಂದಿದ್ದರು. ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ನಾಲ್ವರು ಯುವಕರನ್ನು ಯಾರು ಏನು ಎಂದು ವಿಚಾರಿಸುತ್ತಿದ್ದರು.
ಈ ವೇಳೆ ಓರ್ವ ಯುವಕ ಪರಾರಿ ಆಗಿದ್ದ, ಹೀಗಾಗಿ ಅನುಮಾನಗೊಂಡ ಗ್ರಾಮಸ್ಥರು ತಕ್ಷಣ ಅಲ್ಲಿದ್ದ ಮೂವರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ಕಟ್ಟಿಗೆಯಿಂದ ಹೊಡೆದು, ಮುಖಕ್ಕೆ ಕಾಲಿನಿಂದ ಒದೆಯುತ್ತಾ ಮನಬಂದಂತೆ ಥಳಿತಿಸಿದ್ದಾರೆ. ಇತ್ತ ಯುವಕರು ನಾವು ಕಳ್ಳರಲ್ಲ ಎಂದು ಹೇಳಿದರೂ ಬಿಡದೆ ಸಿಕ್ಕಸಿಕ್ಕವರು ಹೊಡೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರಿಂದ ತೆರಳಿ ಮೂವರು ಯುವಕರನ್ನು ರಕ್ಷಣೆ ಮಾಡಿದ್ದಾರೆ. ಗ್ರಾಮಸ್ಥರ ಹೊಡಿಬಡಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲ್ಲೆಗೊಳಗಾದ ಮೂವರು ಯುವಕರು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದವರೆಂಬ ಮಾಹಿತಿ ಇದೆ. ಯುವಕರ ಮೇಲೆ ಹಲ್ಲೆ ಮಾಡಿದ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: JOB Fraud case : ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಪಡೆದು ರೈಲು ಬಿಟ್ಟ ವಂಚಕಿ!
ಬೈಕ್ ಕಳ್ಳನ ಬಂಧನ
ಬೆಂಗಳೂರಿನ ಬನಶಂಕರಿ ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿದ್ದಾರೆ. ರೋಹಿತ್ ಬಂಧಿತ ಆರೋಪಿ. ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯುತ್ತಿದ್ದ ರೋಹಿತ್ ಬೈಕ್ ಹ್ಯಾಂಡಲ್ ಮುರಿದು ಕ್ಷಣಾರ್ಧದಲ್ಲೇ ಎಸ್ಕೇಪ್ ಆಗುತ್ತಿದ್ದ. ಸದ್ಯ ತನಿಖೆ ನಡೆಸಿ ಬಂಧಿತನಿಂದ 10 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪಾಲಿಶ್ ಮಾಡುವುದಾಗಿ ಹೇಳಿ ಚಿನ್ನಾಭರಣ ಎಗರಿಸಿದ ಕಳ್ಳರು
ಚಿನ್ನ, ಬೆಳ್ಳಿ ಕ್ಲೀನ್ ಮಾಡಿ ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಚಿನ್ನಾಭರಣವನ್ನು ಎಗರಿಸಿದ್ದಾರೆ. ಈ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಶಾಂತಿ ನಗರದಲ್ಲಿ ನಡೆದಿದೆ. ಲಕ್ಷ್ಮೀ ಪವಾರ್ ಎಂಬುವವರ ಮನೆಗೆ ಬಂದ ಕಳ್ಳರಿಬ್ಬರು ಕಣ್ಕಟ್ಟು ಮಾಡಿ 30 ಗ್ರಾಂ ಚಿನ್ನಾಭರಣ ಎಗರಿಸಿದ್ದಾರೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ