Site icon Vistara News

Karnataka Election: ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ; ಅದು ಸಾಧ್ಯವಿಲ್ಲ ಗೊತ್ತಾಯ್ತಾ?: ಸಿದ್ದರಾಮಯ್ಯ ಗರಂ

Check out the siddaramaiah political profile right here in kannada

ಬಾಗಲಕೋಟೆ: ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಅದು ಸಾಧ್ಯ ಇಲ್ಲ ಗೊತ್ತಾಯ್ತಾ? ನಾನು ಲಿಂಗಾಯತರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದೇನೆ. ಲಿಂಗಾಯತ ಸಮಾಜ, ಧರ್ಮದ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಚುನಾವಣಾ (Karnataka Election) ಪ್ರಚಾರಕ್ಕಾಗಿ ಕೂಡಲಸಂಗಮಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕೂಡಲಸಂಗಮದಲ್ಲಿ‌ ಮಾಧ್ಯಮದರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟ ಎಂಬ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು ವಿವಾದಾತ್ಮಕವಾಗಿ ಮಾತನಾಡಿದ್ದೇನೆ ಅಂತ ಯಾರು ಹೇಳಿದ್ದಾರೆ? ನಾನು ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟೇ ಇಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Nirmala Sitharaman: ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರಗಳೂ ನಂದಿನಿ ಏಳಿಗೆಗೆ ಕೊಡುಗೆ ನೀಡಿವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಲಿಂಗಾಯತರ ಜಾತಿ ಬಗ್ಗೆ ಹೇಳಿಲ್ಲ

ಲಿಂಗಾಯತರನ್ನು ಎಲೆಕ್ಷನ್ ಕಾರ್ಡ್ ಮಾಡಿಕೊಂಡಿದ್ದಾರೆಂದು ಅವರೇ ಕೇಳಿದರು. ನಾನದಕ್ಕೆ ಉತ್ತರ ಕೊಟ್ಟೆ. ಲಿಂಗಾಯತ ಸಮುದಾಯದವರು ಬಹಳ ಒಳ್ಳೆ ಮುಖ್ಯಮಂತ್ರಿ ಆಗಿದ್ದರು. ನಿಜಲಿಂಗಪ್ಪ ಅವರು ಸಹ ಒಳ್ಳೇ ಸಿಎಂ ಆಗಿದ್ದರು. ಅವರು ಎಐಸಿಸಿ ಅಧ್ಯಕ್ಷರಾಗಿದ್ದರು. ವೀರೇಂದ್ರ ಪಾಟೀಲ್‌ ಅವರು ದಕ್ಷ ಸಿಎಂ ಆಗಿದ್ದರು. ನಾನು ಹೇಳಿದ್ದು ಬಸವರಾಜ್ ಬೊಮ್ಮಾಯಿ ಬಂದ ಮೇಲೆ ಕರಪ್ಟ್ ಆಗಿಬಿಟ್ಟಿದ್ದಾರೆ ಎಂದಷ್ಟೇ ಹೇಳಿದ್ದೇನೆ. ಲಿಂಗಾಯತರ ಜಾತಿ ಅಂತ ಹೇಳಿಲ್ಲ. ಅದಕ್ಕೆ ಎಲ್ಲವನ್ನೂ ಸೇರಿಸಿ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ ಕಾರ್ಯಕ್ರಮದ ಹಿಂದೆ ಲಿಂಗಾಯತರ ಮತ ಸೆಳೆಯುವ ಉದ್ದೇಶ ಇಲ್ಲ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಕೂಡಲಸಂಗಮಕ್ಕೆ ಕರೆಸಿರುವುದರ ಹಿಂದೆ ಲಿಂಗಾಯತ ಮತ ಸೆಳೆಯುವ ಉದ್ದೇಶವೇನಿಲ್ಲ. ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಅವರನ್ನು ಆಯೋಜಕರು ಆಹ್ವಾನ ನೀಡಿದ್ದರು. ಹಾಗಾಗಿ ಅವರು ಬಂದರು ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಲಿಂಗಾಯತ ಮತ ಸೆಳೆಯುವ ಉದ್ದೇಶ ಇಲ್ಲ, ರಾಹುಲ್‌ ಗಾಂಧಿ ಅವರನ್ನು ಕರೆಸುವಂತೆ ಆಯೋಕರು ಎಂ.ಬಿ. ಪಾಟೀಲ್‌ ಅವರಲ್ಲಿ ಕೇಳಿಕೊಂಡಿದ್ದರು. ಎಂ.ಬಿ. ಪಾಟೀಲ್ ಅವರು ವೇಣುಗೋಪಾಲ್‌ ಅವರಿಗೆ ತಿಳಿಸಿ ರಾಹುಲ್‌ರನ್ನು ಕರೆಸಿದ್ದಾರೆ. ಇದನ್ನು ಚುನಾವಣೆಗೋಸ್ಕರ ಮಾಡಿದ್ದಲ್ಲ. ಅಲ್ಲದೆ, ಇಂದು ವಿಜಯಪುರದಲ್ಲಿ ರ‍್ಯಾಲಿ, ರೋಡ್ ಶೋ ಇತ್ತು. ಅಲ್ಲಿಗೆ ಬಂದಿದ್ದರು. ಇಲ್ಲಿ ಕೂಡ ಕರೆದಿದ್ದಕ್ಕೆ ಬಂದಿದ್ದಾರಷ್ಟೇ ಎಂದು ಉತ್ತರಿಸಿದರು.

ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣನೆ ಆಗುತ್ತಿದೆ. ಹಾಗಾಗಿ ಲಿಂಗಾಯತ ಶಕ್ತಿ ಕೇಂದ್ರಗಳಿಗೆ ಭೇಟಿ ಮಾಡುತ್ತೀದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಶಕ್ತಿ ಕೇಂದ್ರಗಳಿಗೆ ಭೇಟಿ ಕೊಡಬೇಕು ಎಂಬ ರಾಜಕೀಯ ಉದ್ದೇಶ ಇಲ್ಲ. ಆಹ್ವಾನ ಮಾಡಿದ್ದಕ್ಕಷ್ಟೇ ಬಸವ ಜಯಂತಿಯಲ್ಲಿ ಭಾಗಿಯಾಗಿದ್ದರು ಎಂದು ಪುನರುಚ್ಚಾರ ಮಾಡಿದರು.

ಕೂಡಲ ಸಂಗಮದ ಕಾರ್ಯಕ್ರಮದಲ್ಲಿ ಕೆಲವು ಕಾಂಗ್ರೆಸ್‌ ನಾಯಕರು ಗೈರಾಗಿದ್ದಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶೃಂಗೇರಿಗೆ ಹೋಗಿದ್ದಾರೆ. ಇಲ್ಲಿ ಆಯೋಜಕರು ಯಾರನ್ನೂ ಕರೆದಿರಲಿಲ್ಲ. ಇನ್ನು ಅವರದ್ದೇ ಬೇರೆ ಪ್ರವಾಸ ಇದೆ, ನಮ್ಮದೇ ಬೇರೆ ಇದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಶೆಟ್ಟರ್‌ ಪ್ರಚಾರ; ನಾಯಕರಿಲ್ಲ ಎಂಬುದನ್ನು ಕಾಂಗ್ರೆಸ್‌ ಒಪ್ಪಿದ ಹಾಗೆ ಎಂದು ಅಣ್ಣಾಮಲೈ ಟೀಕೆ

ಬಿಜೆಪಿಯಿಂದ ಲಿಂಗಾಯತರ ಕಡೆಗಣನೆ

ಈ ಸಮಯದಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸಿದ್ದು ಬಿಜೆಪಿಗೆ ಮುಳುವಾಗುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಮುಳುವಾಗುತ್ತದೆ ಎಂದೆಲ್ಲ ಹೇಳಲು ಆಗುವುದಿಲ್ಲ. ಆದರೆ, ಲಿಂಗಾಯತರನ್ನು ಕಡೆಗಣಿಸಿರೋದಂತೂ ಸತ್ಯ ಎಂದು ಹೇಳಿದರು.

Exit mobile version