Site icon Vistara News

ನಿಧಿ ಆಸೆಗಾಗಿ ಮೂರ್ತಿಯನ್ನೇ ಕಿತ್ತುಹಾಕಿದ ಖದೀಮರು, ಶಿವಪುರದಲ್ಲಿ ಶಿವಲಿಂಗ ಭಗ್ನ

shivalinga

ಕೊಪ್ಪಳ: ನಿಧಿ ಇರಬಹುದು ಎಂಬ ಆಸೆಯಲ್ಲಿ ಖದೀಮರು ದೇವಸ್ಥಾನದ ಮೂರ್ತಿಯನ್ನೆ ಕಿತ್ತು ಹಾಕಿದ ವಿದ್ಯಮಾನ ಕೊಪ್ಪಳ ತಾಲೂಕಿನ ಶಿವಪುರದಲ್ಲಿ ನಡೆದಿದೆ.

ಇಲ್ಲಿನ ಬೆಟ್ಟದ ಮೇಲಿರುವ ಐತಿಹಾಸಿಕ ಸೋಮನಾಥೇಶ್ವರ ದೇವಾಲಯದಲ್ಲಿ ಶಿವಲಿಂಗವನ್ನೇ ಭಗ್ನಗೊಳಿಸಲಾಗಿದೆ. ಈ ಮೂರ್ತಿಯ ಆಸುಪಾಸಿನಲ್ಲಿ, ಅಡಿ ಭಾಗದಲ್ಲಿ ನಿಧಿ ಇರಬಹುದು ಎಂಬ ಆಸೆಯಿಂದ ಖದೀಮರು ಅಗೆದಿದ್ದಾರೆ. ಅವರಿಗೆ ಏನಾದರೂ ಸಿಕ್ಕಿದೆಯೋ ಗೊತ್ತಿಲ್ಲ. ಆದರೆ, ಅಗೆತಕ್ಕೆ ಬಳಸಿ ಕಬ್ಬಿಣದ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

ದೇವಸ್ಥಾನದ ಅರ್ಚಕರಾಗಿರುವ ಕೃಷ್ಣ ಎಂಬವರು ಬೆಳಗ್ಗೆ ಪೂಜೆಗೆಂದು ಬಂದಾಗ ಕಳ್ಳರ ಕೃತ್ಯ ಬಯಲಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುನಿರಾಬಾದ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದು ವಿಜಯನಗರ ಸಾಮ್ರಾಜ್ಯದ ಕಾಲದ ಪುರಾತನ ಸೋಮನಾಥ ದೇವಾಲಯವಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ.

Exit mobile version