Site icon Vistara News

Thirthahalli Election Results: ತೀರ್ಥಹಳ್ಳಿಯಲ್ಲಿ ಗೆದ್ದ ಆರಗ ಜ್ಞಾನೇಂದ್ರ; ಸೋಲು ಕಂಡ ಕಿಮ್ಮನೆ

Theerthahalli karnataka Election results winner Araga Jnanendra

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಗಮನ ಸೆಳೆದ ವಿಧಾನಸಭಾ ಕ್ಷೇತ್ರಗಳಲ್ಲಿ ತೀರ್ಥಹಳ್ಳಿಯೂ (Thirthahalli Election Results) ಒಂದು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಆರಗ ಜ್ಞಾನೇಂದ್ರ ಅವರೇ ಜಯಗಳಿಸಿದ್ದಾರೆ. ಈ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಜನರು ಮನ್ನಣೆ ನೀಡಿದ್ದಾರೆ.

ಅಭಿವೃದ್ಧಿಯೇ ಆರಗ ಗೆಲುವಿಗೆ ಶ್ರೀರಕ್ಷೆ

40 ವರ್ಷಗಳ ಕಾಲ ಕ್ಷೇತ್ರದಲ್ಲಿ ರಾಜಕಾರಣ ಮಾಡಿರುವ ಆರಗ ಜ್ಞಾನೇಂದ್ರ ಮೊದಲ ಬಾರಿ ಸಚಿವರಾಗಿ ಕ್ಷೇತ್ರದಲ್ಲಿ ಅನುದಾನದ ಹೊಳೆಯನ್ನೇ ಹರಿಸಿದ್ದರು. 9 ಬಾರಿ ಸ್ಪರ್ಧಿಸಿ 4 ಬಾರಿ ಗೆಲುವನ್ನು ಸಾಧಿಸಿರುವ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿದ್ದರು. ಅಭಿವೃದ್ಧಿಯ ಮಂತ್ರದೊಂದಿಗೆ ಕಣಕ್ಕಿಳಿದಿದ್ದು, ಇದೇ ಇವರ ಗೆಲುವಿಗೆ ಶ್ರೀರಕ್ಷೆಯಾಗಿದೆ.

ಸೋತ ಕಿಮ್ಮನೆ ರತ್ನಾಕರ್‌

ಕಾಂಗ್ರೆಸ್‌ನ ಹಲವು ಆಂತರಿಕ ಘರ್ಷಣೆಯ ನಡುವೆಯೂ ಟಿಕೆಟ್‌ ಪಡೆದು ಸ್ಪರ್ಧೆ ಮಾಡಿದ್ದ ಕಿಮ್ಮನೆ ರತ್ನಾಕರ್ ಕೂಡ ಕೊನೆಯ ಚುನಾವಣೆಯ ಟ್ರಂಪ್ ಕಾರ್ಡ್ ಅನ್ನೇ ಬಳಸಿದ್ದರು. ಆದರೆ, ಇದಕ್ಕೆ ಮತದಾರ ಅಷ್ಟಾಗಿ ಒಲವು ತೋರಲಿಲ್ಲ. ಇನ್ನು ಕಾಂಗ್ರೆಸ್‌ಗೆ ವಲಸೆ ಬಂದಿರುವ ಆರ್‌.ಎಂ. ಮಂಜುನಾಥ್ ಗೌಡ ಅವರೂ ಮುನಿಸು ಪ್ರಚಾರ ಮಾಡಿದ್ದರೂ ಸಹ ಗೆಲುವಿನ ಸಮೀಪಕ್ಕೆ ಬಂದು ಸೋಲು ಕಂಡಿದ್ದಾರೆ.

ಕೈಚೆಲ್ಲಿದ ಜೆಡಿಎಸ್‌

ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಯಡೂರು ರಾಜಾರಾಮ್ ಅವರು ಅಷ್ಟಾಗಿ ಯಾವುದೇ ಪೈಪೋಟಿ ನೀಡದೆ ಕೈಚೆಲ್ಲಿದ್ದಾರೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಬಾರಿಯ ಫಲಿತಾಂಶ ಏನು?
ಆರಗ ಜ್ಞಾನೇಂದ್ರ (ಬಿಜೆಪಿ): 67,527 | ಕಿಮ್ಮನೆ ರತ್ನಾಕರ್ (ಕಾಂಗ್ರೆಸ್): 45,572 | ಗೆಲುವಿನ ಅಂತರ: 11,955

ಈ ಬಾರಿ ಚುನಾವಣಾ ಫಲಿತಾಂಶ ಇಂತಿದೆ
ಆರಗ ಜ್ಞಾನೇಂದ್ರ (ಬಿಜೆಪಿ) 84563 | ಕಿಮ್ಮನೆ ರತ್ನಾಕರ್ (ಕಾಂಗ್ರೆಸ್) 72322 | ಅಂತರ –12241

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ…

Exit mobile version