Site icon Vistara News

Sandalwood Smuggling: ಶ್ರೀಗಂಧದ ತುಂಡು ಕಳ್ಳ ಸಾಗಣೆ; ಮೂವರ ಬಂಧನ

Smuggling of sandalwood

ಮೈಸೂರು: ಶ್ರೀಗಂಧದ ತುಂಡುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಸಂಚಾರ ದಳ ಬಂಧಿಸಿ, 308 ಕೆ.ಜಿ. ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದೆ. ಈ ಬಗ್ಗೆ ಮೈಸೂರಿನ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ ನಿವಾಸಿ ರಾಘವೇಂದ್ರ ಗುಡಿಗಾರ್, ಶಿವಮೊಗ್ಗ ಸೊರಬ ನಿವಾಸಿ ಸಚಿನ್ ಗುಡಿಗಾರ್, ಮೈಸೂರಿನ ಕೆಸರೆ ನಿವಾಸಿ ನಾರಾಯಣ್ ಬಂಧಿತ ಆರೋಪಿಗಳು. ಶಿರಸಿಯಿಂದ ಮೈಸೂರಿಗೆ ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯೊಂದಿಗೆ ಅರಣ್ಯ ಸಂಚಾರ ದಳದ ಮೈಸೂರು ವಿಭಾಗ ತಂಡದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಈ ವೇಳೆ 308 ಕೆ.ಜಿ. ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಮಂಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Roof collapse in kolar

ಇದನ್ನೂ ಓದಿ | ಪೊಲೀಸ್‌ ಠಾಣೆಯೊಳಗೆ ಗುಂಡೇಟು ತಿಂದಿದ್ದ ಮಹಿಳೆ ಸಾವು; ಪೊಲೀಸ್‌ ಅಧಿಕಾರಿ ಸುಳಿವಿಗೆ ಬಹುಮಾನ ಘೋಷಣೆ

ಅರಣ್ಯ ಇಲಾಖೆ ಸಿಐಡಿ ಸುಧೀರ್‌ ಕುಮಾರ್‌ ರೆಡ್ಡಿ, ಮಡಿಕೇರಿ ಅರಣ್ಯ ಇಲಾಖೆ ಸಿಐಡಿ ವಿಭಾಗದ ಎಸ್‌ಪಿ ಎಸ್‌.ಎಸ್‌. ಕಾಶಿ ಅವರ ಮಾರ್ಗದರ್ಶನದಲ್ಲಿ ಮೈಸೂರು ಅರಣ್ಯ ಸಂಚಾರ ದಳದ ಎಸ್‌ಐ ಲಕ್ಷ್ಮೀ, ಕೊಳ್ಳೇಗಾಲ ಎಸ್‌ಐ ವಿಜಯರಾಜು, ಸಾಗರ ಎಸ್‌ಐ ವಿನಾಯಕ, ಸಕಲೇಶಪುರದ ಪಿಎಸ್‌ಐ ಸ್ವಾಮಿ ಮತ್ತು ಸಿಬ್ಬಂದಿ ಜುಹೂರ್‌ ಅಹಮದ್‌, ಹೇಮರಾಜು, ಕೃಷ್ಣೇಗೌಡ, ಅರುಣ್‌ ಕಾರ್ಯಾಚರಣೆ ನಡೆಸಿದ್ದಾರೆ.

ಮಲಗಿದ್ದವರ ಮೇಲೆ ಕುಸಿದ ಚಾವಣಿ; ಬಾಲಕಿ ಗಂಭೀರ, 7 ಮಂದಿಗೆ ಗಾಯ

Roof collapse in kolar

ಕೋಲಾರ : ಕೋಲಾರ ಜಿಲ್ಲೆಯ (kolar News) ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಮಲಗಿದ್ದವರ ಮೇಲೆ ಚಾವಣಿ ಕುಸಿದು (Roof collapse) ಬಿದ್ದಿದೆ. 7 ಮಂದಿಗೆ ಗಾಯವಾಗಿದ್ದು, ಓರ್ವ ಬಾಲಕಿ ಸ್ಥಿತಿ ಗಂಭೀರವಾಗಿದೆ.

ಶ್ರೀನಿವಾಸ್, ಹೇಮಶ್ರಿ, ಶಿವ, ನಾಗಮ್ಮ, ಮುನಿವೆಂಕಟಮ್ಮ ಮಕ್ಕಳಾದ, ಮೇಘನಾ (6), ವೈಶಾಲಿ (7) ಗಾಯಾಳುಗಳಾಗಿದ್ದು, ಎಲ್ಲರೂ‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ರೀನಿವಾಸ್ ಮತ್ತು ಕುಟುಂಬದವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ತಡರಾತ್ರಿ ಏಕಾಏಕಿ ಕಲ್ಲು ಚಪ್ಪಡಿ ಮನೆಯ ಚಾವಣಿಯು ಕುಸಿದಿದೆ.

ಕುಸಿದ ರಭಸಕ್ಕೆ ಬಾಲಕಿ ಮೇಘನಾಗೆ ಬಡಿದಿದೆ. ಸದ್ಯ ಈಕೆ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್​ಗೆ ದಾಖಲು ಮಾಡಲಾಗಿದೆ. ಮುನಿವೆಂಕಟಮ್ಮರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಶ್ರೀನಿವಾಸ್​ ಸೇರಿದ ಉಳಿದ ನಾಲ್ವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳಕ್ಕೆ ನಂಗಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾವಣಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಫೈಬರ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಳಗಿಬೀಸ್ ಬಳಿ ಇರುವ ಫೈಬರ್ ಫ್ಯಾಕ್ಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಹೊತ್ತಿ ಉರಿದಿದೆ. ರಾಘ ವಿಶ್ವೇಶ್ವರ ಹೆಗಡೆ ಮಸಿಗದ್ದೆ ಅವರಿಗೆ ಸೇರಿದ್ದ ಫೈಬರ್ ಫ್ಯಾಕ್ಟರಿ ಇದಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಹಾಗೂ ಪೊಲೀಸ್ ಸಿಬ್ಬಂದಿ ಬೆಂಕಿ ನಂದಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version