Site icon Vistara News

Electrocuted | ಭತ್ತದ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮೂವರು ರೈತರ ಸಾವು

Electrocuted

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕು ನಿಲಸೋಗೆ ಗ್ರಾಮದಲ್ಲಿ ಭತ್ತದ ಗದ್ದೆಗೆ ಗೊಬ್ಬರ ಹಾಕಲು ಹೋಗಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ (Electrocuted) ಮೂವರು ರೈತರು ಮೃತಪಟ್ಟಿದ್ದಾರೆ.

ರಾಚೇಗೌಡ (62), ಪುತ್ರ ಮಹದೇವಸ್ವಾಮಿ (44) ಹಾಗೂ ಹರೀಶ್ ​(38) ಮೃತರು. ಭತ್ತದ ಗದ್ದೆಗೆ ಗೊಬ್ಬರ ಹಾಕಲು ಭಾನುವಾರ ಮುಂಜಾನೆ ರೈತ ರಾಚೇಗೌಡ ತೆರಳಿದ್ದರು. ಈ ವೇಳೆ ತುಂಡಾಗಿ ಬಿದ್ದಿದ್ದ ತಂತಿ ತಗುಲಿ ವಿದ್ಯುತ್‌ ಆಘಾತವಾಗಿದೆ. ಅವರನ್ನು ರಕ್ಷಿಸಲು ಹೋದ ಪುತ್ರ ಮಹದೇವಸ್ವಾಮಿ ಕೂಡ ವಿದ್ಯುತ್‌ ತಗುಲಿವೆ. ಇವರಿಬ್ಬರನ್ನೂ ಅಪಾಯದಿಂದ ಪಾರು ಮಾಡಲು ಹೋದ ಹರೀಶ್​ ಎಂಬುವವರಿಗೂ ವಿದ್ಯುತ್‌ ಸ್ಪರ್ಶವಾಗಿದ್ದರಿಂದ ಮೂವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ನೂರಾರು ಗ್ರಾಮಸ್ಥರು ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರಂತಕ್ಕೆ ಸೆಸ್ಕ್‌ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Suicide Case | ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ

Exit mobile version