Site icon Vistara News

Medical Negligence: ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ತಿಂಗಳ ಮಗು ಸಾವು? ಲಸಿಕೆ ಹಾಕಿ ಗಂಟೆಯೊಳಗೇ ಮರಣ!

Medical Negligence in tumkur

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) ಮೂರು ತಿಂಗಳ ಮಗುವೊಂದು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಲಸಿಕೆ ಹಾಕಿದ ಒಂದು ಗಂಟೆಯೊಳಗೆ ಮಗು ಮೃತಪಟ್ಟಿದ್ದು, ಪೋಷಕರು, ಸಂಬಂಧಿಕರು ಪ್ರತಿಭಟನೆ (Protest) ನಡೆಸಿದ್ದಾರೆ.

ಚುಚ್ಚುಮದ್ದು ಪಡೆದು ಮನೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮಗು ಮೃತಪಟ್ಟಿದೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆಗಿದೆ. ಮಗು ಅಲ್ಲಿಯವರೆಗೆ ಆರೋಗ್ಯವಾಗಿಯೇ ಇತ್ತು ಎಂದು ಆರೋಪಿಸಿ ಆಸ್ಪತ್ರೆ ಎದುರು ಮೃತ ಮಗುವಿನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಭೇಟಿ ನೀಡಿ ಮೃತ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

ವೈದ್ಯರು ಹಾಗೂ ಸಿಬ್ಬಂದಿ ಸೇರಿ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಡಾ. ಮಧು, ಸಿಬ್ಬಂದಿ ಸಾನಿಯಾ, ಮಮತಾ, ಶೋಭಾ, ಲಕ್ಷ್ಮೀದೇವಿ, ಚಂದ್ರಪ್ರಭಾ ವಿರುದ್ಧ ದೂರು ದಾಖಲು ಮಾಡಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿಯಲ್ಲಿ ಗರ್ಭಿಣಿಗೆ ಸಿಗದ ಚಿಕಿತ್ಸೆ; ಹೊಟ್ಟೆಯಲ್ಲೇ ಶಿಶು ಸಾವು

ಯಾದಗಿರಿ: ತಾಲೂಕಿನ ಹೊನಗೇರಾದಲ್ಲಿನ ಪ್ರಾಥಮಿಕ ಆಸ್ಪತ್ರೆಗೆ ಹೆರಿಗೆಗೆಂದು ತೆರಳಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಅವರ ಹೊಟ್ಟೆಯಲ್ಲಿಯೇ ಶಿಶು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಯಾದಗಿರಿ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು. ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸಿದ್ದರು.

ಇದನ್ನೂ ಓದಿ: Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

ಆಶನಾಳ ಗ್ರಾಮದ ಗರ್ಭಿಣಿ ಲಕ್ಷ್ಮಿ ಎಂಬುವವರಿಗೆ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ಹೀಗೆ ಆಗಿದೆ ಎಂದು ಆರೋಪ ಮಾಡಲಾಗಿತ್ತು. ಮೊದಲಿಗೆ ಆಶಾ ಕಾರ್ಯಕರ್ತೆಯು ಇವರನ್ನು ಪ್ರಾಥಮಿಕ‌ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಇರದ ಹಿನ್ನೆಲೆಯಲ್ಲಿ ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಗರ್ಭಿಣಿ ಲಕ್ಷ್ಮಿಯ ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಶಿಶು ಮೃತಪಟ್ಟಿದ್ದ ಬಗ್ಗೆ ತಿಳಿದುಬಂದಿದೆ. ಕೊನೆಗೆ ಮೃತ ಶಿಶುವನ್ನು ಶಸ್ತ್ರಚಿಕಿತ್ಸೆ ‌ಮೂಲಕ ವೈದ್ಯರು ಹೊರ ತೆಗೆದಿದ್ದಾರೆ. ಬಳಿಕ ಬಾಣಂತಿ ಲಕ್ಷ್ಮಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ.

Exit mobile version