weather report Rain is likely in Karnataka for the next two daysWeather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ - Vistara News

ಉಡುಪಿ

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

Weather Report: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌ನಿಂದಾಗಿ ರಾಜ್ಯಾದ್ಯಂತ ಇನ್ನೂ ಎರಡು ದಿನ ಭಾರಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ವರುಣ (Rain News) ಗುಡುಗಿದ್ದರೆ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಕೊಂಚ ತಗ್ಗಿದ್ದಾನೆ.

VISTARANEWS.COM


on

Rain in koppal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಪರ್‌ಜಾಯ್‌ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯಾದ್ಯಂತ ಇನ್ನೆರಡು ದಿನ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮೈಸೂರು, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಳಗಾವಿ, ಬಾಗಲಕೋಟೆ ಮತ್ತು ಧಾರವಾಡ, ಗದಗ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಕೆಲವು ಕಡೆ ವ್ಯಾಪಕ ಮಳೆಯಾಗಲಿದೆ. ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ವರುಣ ಅಬ್ಬರಿಸಲಿದ್ದಾನೆ.

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಗುಡುಗು ಮುನ್ನೆಚ್ಚರಿಕೆ

ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು ಕೂಡ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 35-45 ಕಿಮೀ ಇಂದ 55 ಕಿಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಬುಧವಾರದಂದು ಕರಾವಳಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಯಾದಗಿರಿಯ ಕವಾಡಿಮಟ್ಟಿ ಏ‌ಆರ್‌ಜಿ‌ 6 ಸೆಂ.ಮೀ ಮಳೆಯಾಗಿದೆ. ಕಲಬುರಗಿಯ ಸುಲೇಪೇಟೆ 3 ಸೆಂ.ಮೀ ಹಾಗೂ ಕೋಡ್ಲಾ, ಚಿಂಚೋಳಿ, ಕುಣಿಗಲ್, ಹೆಸರಘಟ್ಟ, ತುಮಕೂರಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಬೆಳ್ತಂಗಡಿ, ಕಾರವಾರ, ಕೋಟ, ಹೊನಾವರ ಹಾಗೂ ಮುಧೋಳೆ, ಅಡಕಿ, ಸೇಡಂ, ಸೈದಾಪುರ, ಬೀದರ್ ಪಿಟಿಒ, ಬೀದರ್, ಹುಮನಾಬಾದ್, ಬಾಳೆಹೊನ್ನೂರು, ಕೊಟ್ಟಿಗೆಹಾರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಗರಿಷ್ಠ ಉಷ್ಣಾಂಶ 41.5 ಡಿಗ್ರಿ ಸೆಲ್ಸಿಯಸ್ ಕಲಬುಗಿರಯಲ್ಲಿ ದಾಖಲಾಗಿದೆ.

Rain News
ಕೊಪ್ಪಳದಲ್ಲಿ ಮಳೆ ಅಬ್ಬರ

ಬಿರುಗಾಳಿ ಮಳೆಗೆ ಕೊಪ್ಪಳ ತತ್ತರ

ಕೊಪ್ಪಳ ತಾಲೂಕಿನ ಕುಟುಗನಹಳ್ಳಿ ಗ್ರಾಮದಲ್ಲಿ ಗುರುವಾರ (ಜೂ. 8) ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಅಸ್ತಮಾ‌ ಕಾಯಿಲೆಗೆ ಔಷಧಿ ಪಡೆಯಲು ಬಂದಿದ್ದ ಜನರು ಪರದಾಡಿದರು. ಕುಟುಗನಹಳ್ಳಿಯಲ್ಲಿ ಅಸ್ತಮಾಕ್ಕೆ ವನಸ್ಪತಿ ಔಷಧಿ ನೀಡಲಾಗುತ್ತಿದೆ. ಔಷಧಿಗಾಗಿ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನರು ಬಂದಿದ್ದಾರೆ. ಮಳೆಗೆ ಕೆಲವರು ಮರದಡಿ ಆಶ್ರಯ ಪಡೆದರೆ, ಹಲವರು ತಾವು ತಂದಿದ್ದ ಕೊಡೆಗಳ ಸಹಾಯವನ್ನು ಪಡೆದಿದ್ದರು. ಜತೆಗೆ ಅಕ್ಕಿ ಚೀಲವನ್ನು ಹಿಡಿದು ಕ್ಯೂನಲ್ಲಿ ನಿಂತಿರುವುದು ಕಂಡು ಬಂತು.

rain News
ಔಷಧಿ ಪಡೆಯಲು ಬಂದಿದ್ದ ಜನರಿಗೆ ಮಳೆಕಾಟ

ಕಾರಿನ ಮೇಲೆ ಉರುಳಿ ಬಿದ್ದ ಮರ

ಕೊಪ್ಪಳ ನಗರ ಹೊರವಲಯದ ವಿಶ್ವತೇಜ ಮೋಟರ್ಸ್ ಬಳಿ ಕಾರಿನ ಮೇಲೆ ಬೃಹತ್‌ ಮರವೊಂದು ಬಿದ್ದಿದೆ. ಡಸ್ಟರ್‌ ಕಾರನ್ನು ಸರ್ವಿಸ್‌ಗಾಗಿ ನಿಲ್ಲಿಸಲಾಗಿತ್ತು. ಭಾರಿ ಗಾಳಿ ಮಳೆಗೆ ಮರವು ಕಾರಿನ ಮೇಲೆ ಬಿದ್ದಿದ್ದು, ಜಖಂಗೊಂಡಿದೆ.

Rain News
ಭಾರಿ ಮಳೆಗೆ ಕಾರಿನ ಮೇಲೆ ಉರುಳಿ ಬಿದ್ದ ಮರ

ಇನ್ನು ಬಿಸಿಲಿನಿಂದ ಕಂಗೆಟ್ಟಿದ್ದ ಮಂಗಳೂರಿನ ಜನರಿಗೆ ವರುಣ ತಂಪೆರೆದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮಳೆ ಸುರಿಯುತ್ತಿದೆ. ಮಳೆ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಮಳೆಯಿಂದಾಗಿ ಜನರು ಸಂತಸಗೊಂಡಿದ್ದಾರೆ.

ಇದನ್ನೂ ಓದಿ: Monsoon Precaution: ಮಳೆಗಾಲಕ್ಕೆ ಶುರುವಾಯ್ತು ಕ್ಷಣಗಣನೆ; ಈ ಆ್ಯಪ್‌ಗಳು ಈಗ ನಿಮಗೆ ಅತ್ಯಗತ್ಯ

Rain News
ಕೋಲಾರದಲ್ಲಿ ಆಲಿಕಲ್ಲು ಸಹಿತ ಮಳೆ

ಕೋಲಾರದಲ್ಲಿ ಆಲಿಕಲ್ಲು ಮಳೆ

ಕೋಲಾರ ಹಾಗೂ ಶ್ರೀನಿವಾಸಪುರದಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಭಾರಿ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಆಗುತ್ತಿದ್ದು, ತರಕಾರಿ ತೋಟಗಳಿಗೆ ಹಾನಿ ಆಗಿದೆ. ಮಾವು ಬೆಳೆಗಾರರಿಗೆ ಕಾಯಿ ಉದುರುವ ಭೀತಿ ಎದುರಾಗಿದೆ. ಇನ್ನೂ ಎರಡು ದಿನಗಳ‌ ಕಾಲ ಕೋಲಾರ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಇದೆ. ಹೀಗಾಗಿ ರೈತರು ಮುಂಜಾಗ್ರತಾ ಕ್ರಮವನ್ನು ತೆಗೆದು ಕೊಳ್ಳಲು ಕೃಷಿ ವಿಜ್ಞಾನ ಕೇಂದ್ರ ಸೂಚನೆ ನೀಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಮುಂದಿನ 4 ತಿಂಗಳು ವಾಡಿಕೆಗಿಂತ‌ ಹೆಚ್ಚು ಮಳೆ; ನಾಳಿನ ಹವಾಮಾನ ಏನು?

Karnataka Weather : ಬರಗಾಲದಿಂದ ತತ್ತರಿಸಿರುವ ಜನತೆಗೆ ಮುಂಗಾರು ಮಳೆಯು ವರವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಇದರ ಮಧ್ಯೆ ಈ ವಾರ ಪೂರ್ತಿ ಗುಡುಗು ಸಹಿತ ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಿಗೆ ಮಳೆ ಸೂಚನೆ ಇದೆ ಇಲ್ಲಿದೆ ಮಾಹಿತಿ.

VISTARANEWS.COM


on

By

Karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮಳೆ ಕಾಣದೆ ಕಂಗೆಟ್ಟಿದ್ದ ಕರ್ನಾಟಕಕ್ಕೆ ಭಾರತೀಯ ಹವಾಮಾನ ಇಲಾಖೆಯು (Karnataka Weather Forecast) ದೀರ್ಘಕಾಲಿನ ಮುಂಗಾರು ಮಳೆ ಕುರಿತು ಗುಡ್ ನ್ಯೂಸ್ ನೀಡಿದೆ. ಈ ಬಾರಿ ವಾಡಿಕೆಗಿಂತ ತುಸು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ನೈರುತ್ಯ ಭಾರತದಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ.

ರಾಜ್ಯಕ್ಕೆ ಮುಂಗಾರು ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 85.2 ಸೆ.ಮೀ ರಷ್ಟಿದೆ. ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ದೀರ್ಘಾವಧಿ ಸರಾಸರಿ ವಾಡಿಕೆ ಮಳೆ ಜೂನ್‌ನಲ್ಲಿ 19.9 ಸೆಂ.ಮೀ, ಜುಲೈನಲ್ಲಿ 27.1 ಸೆಂ.ಮೀ. ಆಗಸ್ಟ್‌ನಲ್ಲಿ 22 ಸೆಂ.ಮೀ ಹಾಗೂ ಸೆಪ್ಟೆಂಬರ್‌ನಲ್ಲಿ 16.1 ಸೆಂ.ಮೀ ನಷ್ಟಿದ್ದು ಒಟ್ಟಾರೆ ರಾಜ್ಯಕ್ಕೆ ಮುಂಗಾರು ಹಂಗಾಮಿನಲ್ಲಿ 85.2 ಸೆಂ.ಮೀ ನಷ್ಟಿದೆ.

2024ರ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಾದ್ಯಂತ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಶೇಕಡಾ 5ರಷ್ಟು ವ್ಯತ್ಯಯದೊಂದಿಗೆ ಶೇಕಡಾ 106 ರಷ್ಟು ವಾಡಿಕೆಗಿಂತಾ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಕಳೆದ 1971-2020ರ ಸರಾಸರಿ ವಾಡಿಕೆ ಮಳೆ ಪ್ರಮಾಣ 87 ಸೆಂ.ಮೀ ನಷ್ಟಿದೆ . ಮುಂಗಾರು ಮಳೆ ಮುನ್ಸೂಚನೆ ಅನ್ವಯ ದೇಶದಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದೀರ್ಘಾವಧಿ ಸರಾಸರಿ ಶೇ. 104-110ರಷ್ಟು ಇರಲಿದೆ.

ಇದನ್ನೂ ಓದಿ: Physical Abuse : ಇವನೆಂಥ ಗಂಡ! ಕಾಲ್‌ ಗರ್ಲ್‌ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ

ಇನ್ನೊಂದು ವಾರ ಮಳೆ ಅಬ್ಬರ

ನಾಳೆಯಿಂದ ಅಂದರೆ ಏಪ್ರಿಲ್‌ 17 ರಿಂದ 22ರವರೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಇದೆ. ರಾಜ್ಯಾದ್ಯಂತ ಬುಧವಾರದಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರುಗಿ ಹಾಗೂ ಕೊಪ್ಪಳ, ರಾಯಚೂರು, ವಿಜಯಪುರ ಸೇರಿದಂತೆ ಯಾದಗಿರಿ, ಬಳ್ಳಾರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಉಳಿದಂತೆ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರಿನ ಒಂದೆರಡು ಕಡೆಗಳಲ್ಲಿ ಮಳೆ ಸಾಧ್ಯತೆ ಇದೆ. ಉಳಿದಂತೆ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 37 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರುವ ಸಾಧ್ಯತೆ ಇದೆ.

ಗುಡುಗು ಮುನ್ನೆಚ್ಚರಿಕೆ

ಏಪ್ರಿಲ್‌ 19, 20 ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ತಲುಪುವ ಜತೆಗೆ ಮೇಲ್ಮೈ ಮಾರುತಗಳು ಬಲವಾದ ಮತ್ತು ರಭಸದಿಂದ ಕೂಡಿರುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕರಾವಳಿ, ದಕ್ಷಿಣ ಒಳನಾಡಲ್ಲಿ ಮಂಕಾದ; ಮಲೆನಾಡು, ಉತ್ತರ ಒಳನಾಡಲ್ಲಿ ಮಳೆ ಸದ್ದು

Rain New : ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವರುಣ ಮಂಕಾಗಿದ್ದು, ಉತ್ತರ ಒಳನಾಡು ಹಾಗೂ ಮಲೆನಾಡಿನಲ್ಲಿ ಸಕ್ರಿಯನಾಗಿದ್ದಾನೆ. ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದರೆ, ಕೆಲವೆಡೆ ತಾಪಮಾನ ಏರಿಕೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರ ಮಳೆಯಾಗುವ (rain news) ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಒಣ ಹವೆ (Dry weather) ಮೇಲುಗೈ ಸಾಧಿಸಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಉತ್ತರ ಒಳನಾಡಿನ ಬೀದರ್, ಕಲಬುರಗಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸಲಿದೆ.

ಮಲೆನಾಡಿನ ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನದಲ್ಲಿ ಶುಷ್ಕ ವಾತಾವರಣ ಇರಲಿದೆ. ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಚದುರಿದಂತೆ ಮಳೆಯಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯಾವುದೇ ಮಳೆಯಾಗುವ ಮುನ್ಸೂಚನೆ ಇಲ್ಲ. ಬದಲಿಗೆ ಶುಷ್ಕ ವಾತಾವರಣ ಇರಲಿದೆ. ಬೆಂಗಳೂರಿನ ವಾತಾವರಣದಲ್ಲಿ ಯಾವುದೇ ಗಮರ್ನಾಹ ಬದಲಾವಣೆ ಇಲ್ಲ.

ಇದನ್ನೂ ಓದಿ: Hardik Pandya : ಪಾಂಡ್ಯ ಫಿಟ್ ಆಗಿಲ್ಲ, ಸುಮ್ಮನೆ ನಾಟಕ ಮಾಡುತ್ತಿದ್ದಾರೆ ಎಂದ ಆ್ಯಡಂ ಗಿಲ್​ಕ್ರಿಸ್ಟ್​​​

ತಾಪಮಾನ ಮುನ್ಸೂಚನೆ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣ ಇರಲಿದೆ. ಕೆಲವೊಮ್ಮೆ ತಾಪಮಾನದಲ್ಲೂ ಏರಿತ ಉಂಟಾಗಲಿದ್ದು, ಬಿಸಿಲ ಧಗೆ ಹೆಚ್ಚಾಗಿ ಇರಲಿದೆ.

ಗಾಳಿ ವೇಗದ ಎಚ್ಚರಿಕೆ

ಏಪ್ರಿಲ್ 18 ಮತ್ತು 19 ರಂದು ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಮೇಲ್ಮೈ ಗಾಳಿ 30-40 ಕಿ.ಮೀ ತಲುಪುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಬಿರುಗಾಳಿ ಮಳೆಗೆ ಕಲಬುರಗಿ ತತ್ತರ; ನಾಳೆಯೂ ಹಲವೆಡೆ ವರುಣನ ಅಬ್ಬರ

Rain News : ಎರಡು ದಿನಗಳ ಕಾಲ ಬ್ರೇಕ್‌ ಕೊಟ್ಟಿದ್ದ ವರುಣ ಮತ್ತೆ ಸಕ್ರಿಯಗೊಂಡಿದ್ದಾನೆ. ನಾಳೆ (ಏ.16) ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (karnataka weather Forecast) ನೀಡಿದೆ.

VISTARANEWS.COM


on

By

Karnataka Weather Forecast
ಬಿರುಗಾಳಿ ಮಳೆಗೆ ಕಲಬುರಗಿಯಲ್ಲಿ ನೆಲಕ್ಕುರುಳಿದ ಬಾಳೆ ತೋಟ
Koo

ಬೆಂಗಳೂರು: ರಾಜ್ಯದಲ್ಲಿ ಭಾನುವಾರದಂದು ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಿದ್ದು, ಕರಾವಳಿಯಲ್ಲಿ ಒಣ ಹವೆ ಇತ್ತು. ಕಲಬುರಗಿ ಹಾಗೂ ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 39.2 ಡಿ.ಸೆ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ಹಲವೆಡೆ ಮಳೆಯಾಗುವ (rain news) ಮುನ್ಸೂಚನೆಯನ್ನು ಹವಾಮಾನ ಇಲಾಖೆ (karnataka Weather Forecast) ನೀಡಿದೆ.

ಏ.16ರಿಂದ ಮಲೆನಾಡಿನಾದ್ಯಂತ ಮಳೆಯಾಗುವ ನಿರೀಕ್ಷೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ದಕ್ಷಿಣ ಒಳನಾಡಿನ ಮೈಸೂರು, ಬಳ್ಳಾರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದೆಡೆ ಒಣಹವೆ ಇರುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಮುಖ್ಯವಾಗಿ ಆಕಾಶವು ನಿರ್ಮಲವಾಗಿರಲಿದೆ. ಗರಿಷ್ಠ ಉಷ್ಣಾಂಶ 36 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ.

ತಾಪಮಾನ ಮುನ್ಸೂಚನೆ

ಮಳೆ ಮುನ್ಸೂಚನೆ ನಡುವೆಯೂ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸಲಿದೆ. ಏಪ್ರಿಲ್‌ 18-19ರಂದು ರಾಜ್ಯದ ಒಂದೆರಡು ಕಡೆಗಳಲ್ಲಿ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ತಲುಪುವ ಜತೆಗೆ ಮೇಲ್ಮೈ ಮಾರುತಗಳು ಬಲವಾದ ಮತ್ತು ರಭಸದಿಂದ ಕೂಡಿರಲಿದೆ.

ಕಲಬುರಗಿಯಲ್ಲಿ ಬಿರುಗಾಳಿ ಮಳೆ

ಬಿಸಿಲ‌ನಗರಿ‌ ಕಲಬುರಗಿಯಲ್ಲಿ ಸೋಮವಾರ ಭಾರಿ ಬಿರುಗಾಳಿ ಮಳೆಯಾಗಿದೆ. ಗಾಳಿ ಮಳೆಗೆ ನೆಲಕ್ಕುರುಳಿದ ಬಾಳೆ ಬೆಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ನಷ್ಟವಾಗಿದೆ. ಅಫಜಲಪುರ‌ ತಾಲೂಕಿನ ಸುತ್ತಮುತ್ತ ಗುಡುಗು ಸಿಡಿಲು ಸಹಿತರಾತ್ರಿ ಭಾರಿ ಮಳೆಯಾಗಿದೆ. ಬಳೂರ್ಗಿ ಗ್ರಾಮದಲ್ಲಿ ಬಾಳೆ ತೋಟ ನೆಲಸಮವಾಗಿದೆ. ಮಹ್ಮದ ರಫಿ ಗೌರ್ಕರ್ ಅವರ ತೋಟದಲ್ಲಿ ಬೆಳೆದ‌ ಸುಮಾರು ಮೂರು ಎಕರೆ ಪ್ರದೇಶದ ಬಾಳೆ ತೋಟ ನಾಶವಾಗಿದೆ. ಬರಗಾಲದಲ್ಲೂ ಅಲ್ಪಸ್ವಲ್ಪ ಬಾಳೆ ಬೆಳೆ ಬೆಳಯಲಾಗಿತ್ತು. 3 ಲಕ್ಷ ರೂಪಾಯಿ ಬಂಡವಾಳ ಹಾಕಿ ಟ್ಯಾಂಕರ್‌ ಮೂಲಕ ನೀರುಹಾಯಿಸಿ ಬಾಳೆ ಬೆಳೆಸಿದ್ದರು.

ಇದನ್ನೂ ಓದಿ: Borewell Tragedy : ಕೊಳವೆ ಬಾವಿಯಿಂದ ಬದುಕಿ ಬಂದ ಸಾತ್ವಿಕ್‌ನನ್ನು ತೊಟ್ಟಿಲಿಗೆ ಹಾಕಿ ಹರಕೆ ತೀರಿಸಿದ ಕಲ್ಲಿನಾಥ ಸ್ವಾಮೀಜಿ

ಬೇಸಿಗೆಯಲ್ಲಿ ಕೂದಲನ್ನು ನಯವಾಗಿರಿಸಲು ಕಷ್ಟವಾಗುತ್ತಿದೆಯೆ? ಈ ಸಲಹೆಗಳನ್ನು ಪಾಲಿಸಿ

ಬೇಸಿಗೆಯ ಹೊಡೆತಕ್ಕೆ ಸಿಲುಕಿ ನಲುಗದಂತೆ ನಮ್ಮ ಕೂದಲನ್ನು ಕಾಪಾಡಿಕೊಳ್ಳುವುದು ಹೇಗೆ? ಬೆವರಿನಿಂದ ತಲೆಯ ಚರ್ಮ ಪದೇಪದೆ ಕೊಳಕಾಗಿ, ಅಂಟಾಗಿ, ನವೆಯುಂಟಾಗಿ, ಹೊಟ್ಟಾಗಿ ತೊಂದರೆ ಕೊಡುತ್ತದೆ. ಉರಿಯುತ್ತಿರುವ ಗೋಳದಂಥ ಸೂರ್ಯನ ಅತಿನೇರಳೆ ಕಿರಣಗಳಿಂದ ಕೂದಲಿಗೆ ಹಾನಿಯಾಗಬಹುದು, ಒಣಗಿ ತುಂಡಾಗಬಹುದು. ಬೇಸಿಗೆಯಲ್ಲಿ ಪೋಷಕಾಂಶಗಳ ಕೊರತೆಯಾಗಿ ಕೂದಲು ಸಿಕ್ಕಾಪಟ್ಟೆ ಉದುರಲೂಬಹುದು. ಇಂಥ ಸಂದರ್ಭದಲ್ಲಿ (summer hair care) ಏನು ಮಾಡಬಹುದು?

head bath

ತಲೆಸ್ನಾನ

ಬೆವರಿನಿಂದ ಕೂದಲು ಒದ್ದೆಯಾಗುತ್ತಿರುವಾಗ ಪದೇಪದೆ ತಲೆಸ್ನಾನ ಮಾಡಬೇಕೆನ್ನಿಸಿದರೆ ಸ್ವಲ್ಪ ತಾಳಿ. ಅತಿಯಾದ ಕ್ಲೋರಿನ್ ಅಂಶವೂ ಕೂದಲಿಗೆ ತೊಂದರೆ ಕೊಡುತ್ತದೆ. ಅಷ್ಟೇ ಅಲ್ಲ, ದಿನದಿನವೂ ತಲೆಸ್ನಾನ ಮಾಡುವುದು ಅರೆತಲೆ ಶೂಲೆಯಂಥ ಸಮಸ್ಯೆಗಳನ್ನು ತರಬಹುದು. ತಲೆ ಸ್ನಾನದ ಹೊತ್ತಿನಲ್ಲಿ ಸೌಮ್ಯವಾದ ಶಾಂಪೂ ಬಳಸಿ, ಕಂಡೀಶನರ್‌ ಉಪಯೋಗಿಸಬಹುದು. ರಾಸಾಯನಿಕ ಕಂಡೀಶನರ್‌ಗಳು ಬೇಡವೆಂದಿದ್ದರೆ ಮದರಂಗಿ, ಭೃಂಗರಾಜವನ್ನು ಬಳಸಬಹುದು.

ಬಿಸಿ ಬೇಡ

ಯಾವುದೋ ಮದುವೆ ಮನೆಗೆಂದು ಅಲಂಕರಿಸಿಕೊಳ್ಳುತ್ತಿದ್ದೀರಾದರೆ, ಸ್ವಲ್ಪ ಜಾಗ್ರತೆ ಮಾಡಿ. ಹೀಟ್‌ ಸ್ಟೈಲಿಂಗ್‌, ಅಂದರೆ ಡ್ರೈಯರ್‌, ಸ್ಟ್ರೇಟ್ನರ್‌, ಕೂದಲು ಸುರುಳಿ ಮಾಡುವುದು ಮುಂತಾದ ಹೀಟೀಂಗ್‌ ಉಪಕರಣಗಳನ್ನು ಬೇಸಿಗೆಯಲ್ಲಿ ಆದಷ್ಟೂ ಬಳಸಬೇಡಿ. ಸಾಮಾನ್ಯ ಜೆಲ್‌ಗಳಿಂದಲೂ ಸುಂದರ ಕೇಶಾಲಂಕಾರ ಸಾಧ್ಯವಿದೆ. ಕೂದಲಿಗೆ ಈ ಬೇಸಿಗೆಯಲ್ಲಿ ಮತ್ತೂ ಬಿಸಿ ಸೋಕಿಸುವುದು ಬೇಡ.

ಮುಚ್ಚಿಕೊಳ್ಳಿ

ತಲೆಗೂದಲಿಗೂ ಪರದೆ ಮುಚ್ಚಿಕೊಳ್ಳಬಹುದು. ಬಿಸಿಲಿಗೆ ಹೋಗುವಾದ ತೆಳುವಾದ ಸ್ಕಾರ್ಫ್‌ ಅಥವಾ ಕ್ಯಾಪ್‌ ಬಳಸುವುದರಿಂದ ಅತಿನೇರಳೆ ಕಿರಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳಬಹುದು. ಮಾತ್ರವಲ್ಲ, ಕೂದಲು ಒಣಗಿ, ಬಣ್ಣಗೆಟ್ಟು ತುಂಡಾಗುವುದನ್ನೂ ತಪ್ಪಿಸಬಹುದು. ಸಾಮಾನ್ಯವಾಗಿ ಕೂದಲ ತುದಿಗಳು ಸಪೂರಾಗಿ, ಕವಲೊಡೆದು ಹೋಗುವ ಸಂಭವವಿರುತ್ತದೆ. ಇವುಗಳನ್ನು ಕಾಲಕಾಲಕ್ಕೆ ಕತ್ತರಿಸಿ. ಇದರಿಂದ ಕೂದಲು ಸಿಕ್ಕಾಗಿ, ಬಾಚುವಷ್ಟರಲ್ಲಿ ಇನ್ನಷ್ಟು ತುಂಡಾಗಿ, ಉದುರುವುದನ್ನು ತಡೆಯಬಹುದು.

Woman Applying Coconut Oil on Hair Egg Benefits For Hair

ಮಸಾಜ್ ಮತ್ತು ಹೇರ್‌ಪ್ಯಾಕ್

ಕೂದಲ ಬುಡಗಳಿಗೆ ಮಸಾಜ್‌ ಬೇಕೆಬೇಕು. ಶುದ್ಧ ಕೊಬ್ಬರಿ ಎಣ್ಣೆಯೂ ಈ ಕೆಲಸಕ್ಕೆ ಅನುಕೂಲವೇ. ಅದಿಲ್ಲದಿದ್ದರೆ ನಿಮ್ಮಷ್ಟದ ಯಾವುದಾದರೂ ಕೇಶ ತೈಲ ಬಳಸಿ ತಲೆಗೆ ಮಸಾಜ್‌ ಮಾಡಿ. ಇದರಿಂದ ಕೂದಲ ಬುಡಕ್ಕೆ ಚೆನ್ನಾಗಿ ರಕ್ತಸಂಚಾರವಾಗಿ, ಬೆಳವಣಿಗೆ ಹೆಚ್ಚುತ್ತದೆ. ಜೊತೆಗೆ, ಮೆಂತೆ, ಮೊಸರು, ಮೊಟ್ಟೆ ಮುಂತಾದ ವಸ್ತುಗಳಿಂದ ಹೇರ್‌ಪ್ಯಾಕ್‌ ಮಾಡುವುದರಿಂದ ಕೂದಲು ಒಣಗಿ ತುಂಡಾಗುವುದನ್ನು ತಪ್ಪಿಸಬಹುದು.

ಆಹಾರ

ತಿನ್ನುವ ಆಹಾರ ಸಮತೋಲಿತವಾಗಿರಬೇಕು. ಸಾಕಷ್ಟು ಪ್ರೊಟೀನ್‌, ಖನಿಜ ಮತ್ತು ಜೀವಸತ್ವಗಳು ಇಲ್ಲದಿದ್ದರೆ ಕೂದಲುದುರುವುದನ್ನು ತಡೆಯಲು ಸಾಧ್ಯವಿಲ್ಲ. ಆಹಾರದಲ್ಲಿ ಸಾಕಷ್ಟು ಬೀಜಗಳು, ಸೊಪ್ಪು, ಇಡೀ ಧಾನ್ಯಗಳನ್ನು ಸೇರಿಸಿಕೊಳ್ಳಿ. ಕುಡಿಯುವ ನೀರಿನ ಪ್ರಮಾಣ ಕಡಿಮೆಯಾದರೂ ಕೂದಲಿಗೆ ಹಾನಿಯಾಗುತ್ತದೆ. ಬೇಸಿಗೆಯಲ್ಲಿ ಉಂಟಾಗುವ ನಿರ್ಜಲೀಕರಣವಂತೂ ಕೂದಲಿಗೆ ಸಿಕ್ಕಾಪಟ್ಟೆ ತೊಂದರೆ ನೀಡುತ್ತದೆ. ಹಾಗಾಗಿ ನೀರು-ಆಹಾರ ಎರಡೂ ಗಮನಿಸಬೇಕಾದ ಅಂಶಗಳು.

Improved Sleep Health Benefits Of Hot Water Bath

ನಿದ್ದೆ

ದೇಹದ ಯಾವುದೇ ಭಾಗಕ್ಕೆ ಆಗುವ ಹಾನಿಯನ್ನು ರಿಪೇರಿ ಮಾಡುವ ಸಮಯವೆಂದರೆ ನಿದ್ದೆ. ದಿನವಿಡೀ ನಾವು ಮಾಡುವ ಕೆಲಸಗಳಿಂದ ಉಂಟಾಗುವ ಮಾನಸಿಕ, ದೈಹಿಕ ಒತ್ತಡಗಳನ್ನು ನಿವಾರಿಸಿ ದೇಹವನ್ನು ಸಮಸ್ಥಿತಿಗೆ ತರುವಲ್ಲಿ ನಿದ್ದೆ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ಹಾರ್ಮೋನುಗಳ ಏರುಪೇರನ್ನೂ ಸರಿದೂಗಿಸಬಹುದು. ಹಾಗಾಗಿ ಪ್ರತಿದಿನ ಕಣ್ತುಂಬಾ ನಿದ್ದೆ ಮಾಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಮಲೆನಾಡಿಗಷ್ಟೇ ಮಳೆ ಅಲರ್ಟ್‌; ಬೆಂಗಳೂರಿನಲ್ಲಿ ಹೇಗೆ?

Dry weather : ರಾಜ್ಯಾದ್ಯಂತ ಎರಡು ದಿನಗಳ ಕಾಲ ಶುಷ್ಕ ವಾತಾವರಣವು ಮೇಲುಗೈ ಸಾಧಿಸಲಿದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯಾದ್ಯಂತ ಸೋಮವಾರ ಒಣಹವೆ (Dry weather) ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (karnataka Weather Forecast) ನೀಡಿದೆ. ಏ.16ರಿಂದ ಮಲೆನಾಡಿನಾದ್ಯಂತ ಮಳೆಯಾಗುವ (Rain News) ನಿರೀಕ್ಷೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಆದರೆ ಏಪ್ರಿಲ್ 15 ರಿಂದ 16 ರವರೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮುಂದುವರಿಯಲಿದೆ. ಹೀಗಾಗಿ ಬಿಸಿ ತಾಪಮಾನ ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಹವಾಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ.

ಬೆಂಗಳೂರಿನಿಂದ ದೂರ ಉಳಿದ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸದ್ಯಕ್ಕೆ ಹವಾಮಾನ ಇಲಾಖೆ ಪ್ರಕಾರ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಗರಿಷ್ಠ ಉಷ್ಣಾಂಶವು 35 ಹಾಗೂ ಕನಿಷ್ಠ ಉಷ್ಣಾಂಶವು 22 ಡಿ.ಸೆ ಇರಲಿದೆ.

ಇದನ್ನೂ ಓದಿ: Brain Exercise: ಚುರುಕಾಗಿರಬೇಕೇ? ದೇಹಕ್ಕೆ ವ್ಯಾಯಾಮ ಮಾಡಿದರೆ ಸಾಲದು, ಮೆದುಳಿಗೂ ಮಾಡಿ!

ಏಪ್ರಿಲ್‌ 17 ರಿಂದ ಮತ್ತೆ ಮಳೆ ಶುರು

ಏಪ್ರಿಲ್‌ 17 ರಿಂದ 20ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ನಿರೀಕ್ಷೆಇದೆ. ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕಲಬುರುಗಿ, ಕೊಪ್ಪಳ, ರಾಯಚೂರು, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

18ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

19ರಂದು ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

20ರಂದು ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Karnataka weather Forecast
ಮಳೆ11 mins ago

Karnataka Weather : ಮುಂದಿನ 4 ತಿಂಗಳು ವಾಡಿಕೆಗಿಂತ‌ ಹೆಚ್ಚು ಮಳೆ; ನಾಳಿನ ಹವಾಮಾನ ಏನು?

Oil Pulling
ಆರೋಗ್ಯ13 mins ago

Oil Pulling: ಆಯಿಲ್‌ ಪುಲ್ಲಿಂಗ್‌; ನಿಮ್ಮ ಬಾಯಿಯೊಳಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಇಲ್ಲಿದೆ!

UPSC Results 2023
ಪ್ರಮುಖ ಸುದ್ದಿ17 mins ago

UPSC Results 2023: ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್‌ ಆದ ಪೊಲೀಸ್‌ ಅಧಿಕಾರಿ!

Take action to close failed borewell says Vijayanagara DC MS Diwakar
ವಿಜಯನಗರ25 mins ago

Vijayanagara News: ವಿಫಲ ಕೊಳವೆಬಾವಿ ಮುಚ್ಚಲು ಕ್ರಮವಹಿಸಿ: ಡಿಸಿ ಎಂ.ಎಸ್. ದಿವಾಕರ್‌

Job Alert
ಉದ್ಯೋಗ26 mins ago

Job Alert: ಅಂಗನವಾಡಿಯಲ್ಲಿದೆ 513 ಹುದ್ದೆ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ; ಏ. 19 ಕೊನೆಯ ದಿನ

Kalaburagi MP Dr. Umesh Jadav spoke in booth level workers meeting Chittapur assembly constituency
ಕಲಬುರಗಿ28 mins ago

Lok Sabha Election 2024: ಕೋಲಿ ಸಮುದಾಯದ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು: ಡಾ. ಉಮೇಶ್ ಜಾಧವ್ ಕಿಡಿ

Maddur MLA Uday election campaign in various places of Maddur taluk
ಮಂಡ್ಯ32 mins ago

Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಬೆಂಬಲ ನೀಡಿ: ಶಾಸಕ ಉದಯ್

Lok Sabha Election 2024 HD DeveGowda Congress cries out at HD DeveGowda Complaint to Election Commission
Lok Sabha Election 202436 mins ago

Lok Sabha Election 2024: ಎಚ್‌.ಡಿ. ದೇವೇಗೌಡರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಿರಿಕ್‌; ಚುನಾವಣಾ ಆಯೋಗಕ್ಕೆ ದೂರು

jain monk
ಪ್ರಮುಖ ಸುದ್ದಿ43 mins ago

Viral Video: ಮೆರವಣಿಗೆಯಲ್ಲಿ ಸಾಗಿ 200 ಕೋಟಿ ರೂ. ಜನರ ಮೇಲೆ ಸುರಿದ ಜೈನ ದಂಪತಿ; ವಿಡಿಯೊ ವೈರಲ್​

Summer Fashion
ಫ್ಯಾಷನ್43 mins ago

Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ14 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌