Site icon Vistara News

Tippu jayanti | ಟಿಪ್ಪು ಸುಲ್ತಾನ್‌ ದೇಶಪ್ರೇಮಿ, ಆದರ್ಶ ಸ್ವರೂಪಿ ಜನನಾಯಕ ಎಂದು ಹೊಗಳಿದ ಸಿದ್ದರಾಮಯ್ಯ

tippu siddu

ಬೆಂಗಳೂರು: ಟಿಪ್ಪು ಸುಲ್ತಾನ್‌ ಒಬ್ಬ ಪರಧರ್ಮ ಸಹಿಷ್ಣು, ಅಪ್ರತಿಮ ದೇಶಪ್ರೇಮಿ ಮತ್ತು ಆದರ್ಶ ಸ್ವರೂಪಿ ಜನನಾಯಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಟಿಪ್ಪು ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವ ಆದೇಶ ಹೊರಡಿಸಿ ಭಾರಿ ಚರ್ಚೆಗೆ ಕಾರಣವಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ದಿನವಾದ ಗುರುವಾರ ಟ್ವಿಟರ್‌ನಲ್ಲಿ ಟಿಪ್ಪುವನ್ನು ನೆನಪಿಸಿಕೊಂಡಿದ್ದಾರೆ.
ʻʻಅಪ್ರತಿಮ ದೇಶಪ್ರೇಮಿ, ವೀರ ಸ್ವಾತಂತ್ರ್ಯ ಹೋರಾಟಗಾರ, ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶಸ್ವರೂಪಿ ಜನನಾಯಕ. ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳುʼʼ ಎಂದು ಅವರು ಬರೆದಿದ್ದಾರೆ.

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ೨೦೧೫ರ ನವೆಂಬರ್‌ ೧೦ರಂದು ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ಮುಂದಾದಾಗ ಕೊಡಗಿನಲ್ಲಿ ದೊಡ್ಡ ಪ್ರಮಾಣದ ಗಲಭೆ ಸೃಷ್ಟಿಯಾಗಿ ಕುಟ್ಟಪ್ಪ ಎಂಬವರು ಪ್ರಾಣ ಕಳೆದುಕೊಂಡಿದ್ದರು. ಮುಂದೆ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗ ಟಿಪ್ಪು ಜಯಂತಿಯನ್ನು ರದ್ದುಪಡಿಸಿತ್ತು. ಮುಂದೆ ಅದು ಕೆಲವು ಸಂಘಟನೆಗಳಿಗೆ ಸೀಮಿತವಾಗಿತ್ತು.
ಈ ನಡುವೆ, ಈ ಬಾರಿ ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಯ ಹೊಸ ಆಚರಣೆಗೆ ಅವಕಾಶ ನೀಡಿದ್ದು ಮತ್ತೆ ಸುದ್ದಿಯಾಗಿದೆ. ಇದರ ನಡುವೆಯೇ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿಗೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ | Tippu jayanthi | ಈದ್ಗಾ ಮೈದಾನ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆ ನಾಯಕ ಮುತಾಲಿಕ್‌ಗೆ ತಡೆ

Exit mobile version