1. Pulse of Karnataka: ಮಧ್ಯ ಕರ್ನಾಟಕ: ವಿಸ್ತಾರ-ಅಖಾಡಾ ಸಮೀಕ್ಷೆ: ಸಿಎಂ ಬೊಮ್ಮಾಯಿ ತವರು ಪ್ರದೇಶದಲ್ಲಿ ಯಾರು ಹೆಚ್ಚು ಫೇಮಸ್?
ಕರುನಾಡಿನಲ್ಲಿ ಇದೀಗ ಎಲೆಕ್ಷನ್ ಫೀವರ್. 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನ ಯಾವ ಪಕ್ಷದ ಕಡೆಗೆ ಒಲುವು ತೋರುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ..? ವಲಯವಾರು ಯಾವ ರಿಸಲ್ಟ್ ಬರಬಹುದು..? ಹೀಗೆ ಒಟ್ಟು 13 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತವನ್ನ ಅರಿಯುವ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಮೂರು ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಮೇಲುಗೈ
ಮೂರು ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಪೈಕಿ ತ್ರಿಪುರ ಮತ್ತು ನಾಗಾಲ್ಯಾಂಡ್ ಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮೇಘಾಲಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಹೊರತಾದ ಎನ್ ಪಿ ಪಿ ಮೈತ್ರಿಕೂಟ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ಸರಳ ಬಹುಮತ ಗಳಿಸಲು ವಿಫಲವಾಗಿದೆ. ಆದರೆ ಬಿಜೆಪಿ ಜತೆ ಸೇರಿ ಅದು ಸರ್ಕಾರ ರಚಿಸುವ ಸಾಧ್ಯತೆ ಇದೆ. ಉಪ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಮಹಾರಾಷ್ಟ್ರದ ಕಸಬಾಪೇಟ್ ನ ತನ್ನ ಭದ್ರಕೋಟೆಯಲ್ಲೇ ಸೋತು ಹಿನ್ನಡೆ ಅನುಭವಿಸಿದೆ. ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. ಚುನಾವಣಾ ಆಯುಕ್ತರ ನೇಮಕಕ್ಕೆ ಮೂವರ ಸಮಿತಿ ಕಡ್ಡಾಯ: ಪಿಎಂ, ಸಿಜೆಐ, ಪ್ರತಿಪಕ್ಷ ನಾಯಕ
ಚುನಾವಣೆಯ ಹೊಸ್ತಿಲಲ್ಲಿ ಸುಪ್ರೀಂ ಕೋರ್ಟ್ ಮಹತ್ವದ, ಐತಿಹಾಸಿಕ ಎನಿಸುವ ತೀರ್ಪೊಂದನ್ನು ನೀಡಿದೆ. ಚುನಾವಣಾ ಆಯೋಗದ ಮಹತ್ವದ ಹುದ್ದೆಗಳ ನೇಮಕಾತಿಯನ್ನು ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರತಿಪಕ್ಷ ನಾಯಕರಿರುವ ಸಮಿತಿ ಅಂತಿಮಗೊಳಿಸಬೇಕು ಎಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಆದೇಶ
ಅದಾನಿ-ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿ ತನಿಖೆ ನಡೆಸಲು (Adani vs Hindenburg) ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ. ಜತೆಗೆ ಈಗಿನ ವಿದ್ಯಮಾನಗಳ ಸ್ಥಿತಿಗತಿ ಬಗ್ಗೆ ಇನ್ನೆರಡು ತಿಂಗಳೊಳಗೆ ವರದಿ ನೀಡುವಂತೆ ಸೆಬಿಗೆ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಮತ್ತೆ 5 ವರ್ಷ ಅವಕಾಶ ಕೊಟ್ಟರೆ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ: ರಾಜನಾಥ್ ಸಿಂಗ್
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಶಯದಂತೆ ಬಿಜೆಪಿಗೆ ರಾಜ್ಯದಲ್ಲಿ ಮೂರನೇ ಎರಡು ಬಹುಮತ ಕೊಡಿ. ಕರ್ನಾಟಕದಲ್ಲಿ ಮತ್ತೆ 5 ವರ್ಷ ಆಡಳಿತಕ್ಕೆ ಅವಕಾಶ ಕೊಟ್ಟರೆ ರಾಜ್ಯವನ್ನು ಅತ್ಯಂತ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ನಂದಗಢದಲ್ಲಿ ಬಿಜೆಪಿ ಎರಡನೇ ವಿಜಯ ಸಂಕಲ್ಪ ರಥ ಯಾತ್ರೆಗೆ (BJP Rathayatre) ಚಾಲನೆ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮನವಿ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಬಿಜೆಪಿ ನಾಯಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ, ಕಾಂಗ್ರೆಸ್ ಕೈಗೆ ಮತ್ತೊಂದು ಕಮಿಷನ್ ಅಸ್ತ್ರ
ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಅವರು ಲೋಕಾಯುಕ್ತ ಬಲೆಗೆ (Lokayukta raid) ಬಿದ್ದಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಮತ್ತು ಕಾಂಗ್ರೆಸ್ ಶೇ. 40 ಕಮಿಷನ್ ಆರೋಪ ಮಾಡುತ್ತಿರುವ ಸಮಯದಲ್ಲಿ ನಡೆದಿರುವ ದಾಳಿ ಮತ್ತು ಬಂಧನ ರಾಜಕೀಯ ಚರ್ಚೆಗೂ ಕಾರಣವಾಗಬಹುದಾದ ಬೆಳವಣಿಗೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ವಿಶ್ವ ನಾಯಕರಲ್ಲೇ ಮೋದಿ ಹೆಚ್ಚು ಪ್ರೀತಿಪಾತ್ರರು, ಇಟಲಿ ಪ್ರಧಾನಿ ಮೆಲೋನಿ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನಲ್ಲೇ ಜನಪ್ರಿಯ ನಾಯಕ ಎಂಬುದಾಗಿ ಹತ್ತಾರು ಅಂತಾರಾಷ್ಟ್ರೀಯ ಸಮೀಕ್ಷೆಗಳಿಂದ ದೃಢಪಟ್ಟಿದೆ. ಇದರ ಬೆನ್ನಲ್ಲೇ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಕೂಡ ನರೇಂದ್ರ ಮೋದಿ (Giorgia Meloni On Modi) ಅವರನ್ನು ಹೊಗಳಿದ್ದಾರೆ. “ಜಾಗತಿಕ ನಾಯಕರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಪ್ರೀತಿಪಾತ್ರರು” ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಪೂರಕ ಸುದ್ದಿ: ಇಟಲಿ ಪ್ರಧಾನಿ ಮೆಲಾನಿ ಹೊಗಳಿಕೆಗೆ ಪ್ರಧಾನಿ ಮೋದಿಯವರ ಮುಖಭಾವ ಹೀಗಿತ್ತು!; ವೈರಲ್ ಆಯ್ತು ವಿಡಿಯೊ
8. ಜೆಎನ್‌ಯುನಲ್ಲಿ ಪ್ರತಿಭಟನೆ ಮಾಡಿದರೆ 20 ಸಾವಿರ ರೂ., ದುರ್ವರ್ತನೆಗೆ 50 ಸಾವಿರ ರೂ. ದಂಡ
ಸಂಶೋಧನೆ, ಅಧ್ಯಯನ ಹಾಗೂ ಅಂಕ ಸಾಧನೆಗಿಂತ ಪ್ರತಿಭಟನೆ, ಗಲಾಟೆ, ಸಾರ್ವಜನಿಕ ಆಸ್ತಿಗೆ ಧ್ವಂಸದಂತಹ ಪ್ರಕರಣಗಳಿಂದಲೇ ಸುದ್ದಿಯಲ್ಲಿರುವ ದೆಹಲಿಯ ಜೆಎನ್‌ಯುನಲ್ಲಿ ಹೊಸ ಕಠಿಣ (New JNU Rules) ನಿಯಮ ಜಾರಿಗೊಳಿಸಲಾಗಿದೆ. “ಜೆಎನ್‌ಯುನಲ್ಲಿ ಉಪವಾಸ ನಿರಶನ, ಧರಣಿ ಅಥವಾ ಪ್ರತಿಭಟನೆ ನಡೆಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ” ಎಂದು ವಿವಿ ಆಡಳಿತ ಮಂಡಳಿ ಅಧಿಸೂಚನೆ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ಕಾರ್ಪೊರೇಟರ್‌ಗಳಿಲ್ಲದೆ ಸತತ 3ನೇ ಬಾರಿ ಬಜೆಟ್ ಮಂಡನೆ; 11,158 ಕೋಟಿ ರೂಪಾಯಿಯ ಬಿಗ್ ಬಜೆಟ್‌ನಲ್ಲಿ ಏನುಂಟು, ಏನಿಲ್ಲ?
ಬಿಬಿಎಂಪಿ 2023-24ನೇ ಸಾಲಿನ ಆಯವ್ಯಯ (BBMP Budget 2023) ಮಂಡನೆಯನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ನಗರದ ಟೌನ್ ಹಾಲ್‌ನಲ್ಲಿ ಗುರುವಾರ ಮಂಡಿಸಿದ್ದಾರೆ. ಕಳೆದ ಬಾರಿಗಿಂತ ಈ ವರ್ಷದ ಬಜೆಟ್ ಗಾತ್ರ ದೊಡ್ಡದಾಗಿದ್ದು, 11,158 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಅತ್ತಿಗೆ ಜತೆ ಸಂಬಂಧ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡಿದ ವ್ಯಕ್ತಿ!
ಶತಮಾನಗಳ ಹಿಂದೆ ಶೀಲವತಿ ಎಂಬುದನ್ನು ಸಾಬೀತುಪಡಿಸಲು, ಪತಿ ತೀರಿಕೊಂಡ ಬಳಿಕ ಮಹಿಳೆಯರು ಅಗ್ನಿ ಪರೀಕ್ಷೆ ಎದುರಿಸುತ್ತಿದ್ದರು, ಅಗ್ನಿ ಪ್ರವೇಶ ಮಾಡುತ್ತಿದ್ದರು. ಶ್ರೀರಾಮನ ಪತ್ನಿ ಸೀತೆಯೂ ಅಗ್ನಿಪರೀಕ್ಷೆ ಎದುರಿಸಿದ್ದರು. ಆಧುನಿಕ ಕಾಲದಲ್ಲಿ ಇಂತಹ ಪದ್ಧತಿಗಳೆಲ್ಲ ಗೌಣವಾಗಿವೆ. ಆದರೆ, ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತಾನು ಸಹೋದರನ ಹೆಂಡತಿ (ಅತ್ತಿಗೆ) ಜತೆ ಸಂಬಂಧ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗ್ನಿಪ್ರವೇಶ (Man Takes Agnipariksha) ಮಾಡಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇನ್ನಷ್ಟು ಪ್ರಮುಖ ಸುದ್ದಿಗಳಿವು
- ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ
- Devine power : ದೇವೇಗೌಡರ ಆರೋಗ್ಯ, ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ 11 ದಿನಗಳ ಮಹಾಯಾಗಕ್ಕೆ ಮೊರೆ ಹೋದ ಎಚ್‌ಡಿಕೆ
- ರೀ ಮಂತ್ರಿಗಳೇ ನಿಂತ್ಕೊಳ್ರಿ ಎಂದ ಡಿ.ಕೆ. ಸುರೇಶ್: ಡಾ. ಸಿ.ಎನ್. ಅಶ್ವತ್ಥನಾರಾಯಣ್ ಜತೆ ಮತ್ತೆ ಜಟಾಪಟಿ
- ಸದನದಲ್ಲಿ ನಾನಿಲ್ಲದಿರುವಾಗ ಸಿಎಂ ಆರೋಪ ಮಾಡಿದ್ದಾರೆ: ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ
- ಎಷ್ಟು ಪೌಡರ್ ಹಾಕಿದರೂ ಬಿಳಿ ಆಗಲ್ಲ ಎಂದು ಹೆಂಡತಿಯನ್ನೇ ಕತ್ತು ಹಿಸುಕಿ ಕೊಂದ ಗಂಡ
- ಐಷಾರಾಮಿ ತಾಣದಲ್ಲಿ ವ್ಲಾದಿಮಿರ್ ಪುಟಿನ್, ಗರ್ಲ್‌ಫ್ರೆಂಡ್ ರಹಸ್ಯ ವಾಸ, ಯಾರೀಕೆ ಗೆಳತಿ?