ರಾಮನಗರ: ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ದಿಂದ ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಆಯೋಜಿಸಿದ್ದ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟೊಯೊಟಾ (Toyota) ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸಂಯೋಜಿತ ಉತ್ಪಾದನೆ (ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ) ವಿಭಾಗದ ವೈಯಕ್ತಿಕ ಪ್ರತಿಸ್ಪರ್ಧಿಯಾಗಿ ಪ್ರೇಮ್. ವಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್‌ನಲ್ಲಿ ಮೋಹಿತ್ ಎಂ.ಯು, ಹರೀಶ್ ಆರ್, ಮತ್ತು ನೆಲ್ಸನ್ ವಿ ತಂಡ ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.
ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ದರ್ಶನ್ ಗೌಡ ಸಿ.ಎಸ್. ಮತ್ತು ಭಾನು ಪ್ರಸಾದ್ ಎಸ್.ಎಂ ತಂಡ ಚಿನ್ನದ ಪದಕ ಗಳಿಸಿದೆ. ಹೇಮಂತ್ ಕೆ.ವೈ ಮತ್ತು ಉದಯ್ ಕುಮಾರ್ ಬಿ ತಂಡ ಬೆಳ್ಳಿ ಪದಕ ಗಳಿಸಿದೆ. ಇದಲ್ಲದೆ, ರೋಹನ್ ಎ.ಎಸ್. ಬೆಳ್ಳಿ ಪದಕ ಮತ್ತು ಸುದೀಪ್ ಎಸ್.ಎಂ. ಅವರು ಕಾರ್ ಪೇಂಟಿಂಗ್‌ನಲ್ಲಿ ವೈಯಕ್ತಿಕ ಸ್ಪರ್ಧಿಯಾಗಿ ಮೆಡಲಿಯನ್ ಆಫ್ ಎಕ್ಸಲೆನ್ಸ್ ಪಡೆದಿದ್ದಾರೆ.
ಇದನ್ನೂ ಓದಿ: Credit Card Safety Tips: ಕ್ರೆಡಿಟ್ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ
ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ನಡೆದ ಸ್ಪರ್ಧೆಯ “ಆಫ್-ಸೈಟ್” ಭಾಗದ ನಾಲ್ಕು ವಿಭಾಗಗಳಲ್ಲಿ ಟಿಟಿಟಿಐ ಭಾಗವಹಿಸಿತ್ತು. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್, ಮೆಕಾಟ್ರಾನಿಕ್ಸ್, ಕಾರ್ ಪೇಂಟಿಂಗ್ ಮತ್ತು ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಟಿಟಿಟಿಐನ ವಿದ್ಯಾರ್ಥಿಗಳು ಅದ್ಭುತ ಕೌಶಲ್ಯ ಮತ್ತು ಡೆಡಿಕೇಷನ್ ಅನ್ನು ಪ್ರದರ್ಶಿಸಿದ್ದಾರೆ.
ಈ ವೇಳೆ ಎನ್‌ಎಸ್‌ಡಿಸಿ ಯ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ಜನರಲ್ ಮ್ಯಾನೇಜರ್ ಮೋನಿಕಾ ನಂದಾ ಮಾತನಾಡಿ, “ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಗಮನಾರ್ಹ ಸಾಧನೆ ಮಾಡಿದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಟಿಟಿಟಿಐ) ನ ವಿದ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಅನುಕರಣೀಯ ಕೌಶಲ್ಯಗಳು ಮತ್ತು ಸಮರ್ಪಣೆ ಟಿಟಿಟಿಐನ ತರಬೇತಿ ಕಾರ್ಯಕ್ರಮಗಳ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ. ಈ ವಿಜೇತರು ತಮ್ಮ ಸಂಸ್ಥೆಗೆ ಗೌರವವನ್ನು ತರುವುದಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತೀಯ ಕೌಶಲ್ಯ ಅಭಿವೃದ್ಧಿಯ ಖ್ಯಾತಿಯನ್ನು ಹೆಚ್ಚಿಸುತ್ತಾರೆ. ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾದವರು ಈ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸುತ್ತಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ನಮಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಹಣಕಾಸು ಮತ್ತು ಆಡಳಿತದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಮಾತನಾಡಿ, “ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟಿಟಿಟಿಐ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳ ಬಗ್ಗೆ ನಾವು ಅಪಾರ ಹೆಮ್ಮೆ ಪಡುತ್ತೇವೆ. ಅವರ ಯಶಸ್ವಿ ಪ್ರಯಾಣ ನಮಗೆ ಹೆಚ್ಚು ಆನಂದವನ್ನು ನೀಡಿದೆ. ಕಠಿಣ ಪರಿಶ್ರಮದಿಂದಾಗಿ ಈ ಮೈಲಿಗಲ್ಲನ್ನು ವಿದ್ಯಾರ್ಥಿಗಳು ತಲುಪಿದ್ದಾರೆ ಎಂದು ತಿಳಿಸಿದ್ದಾರೆ.