Site icon Vistara News

Janaspandana | ಬೆಂಗಳೂರಿನಲ್ಲಿ ಕೆಲ ಮಾರ್ಗಗಳ ವಾಹನ ಸಂಚಾರ ಬದಲು, ಪರ್ಯಾಯ ವ್ಯವಸ್ಥೆ

Janaspandana

ಬೆಂಗಳೂರು: ರಾಜ್ಯ ಸರ್ಕಾರದಿಂದ ದೊಡ್ಡಬಳ್ಳಾಪುರದಲ್ಲಿ ಸೆ.1೦ರಂದು ʼಜನಸ್ಪಂದನʼ ಸಾಧನಾ ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವಾಹನ ದಟ್ಟನೆ ನಿಯಂತ್ರಿಸುವ ಸಲುವಾಗಿ ಸಂಚಾರ ಪೊಲೀಸರು, ನಗರದಲ್ಲಿ ತಾತ್ಕಾಲಿಕವಾಗಿ ಕೆಲ ಮಾರ್ಗಗಳ ವಾಹನ ಸಂಚಾರ ಬದಲಿಸಿ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.

ತುಮಕೂರು ಕಡೆ ಹೋಗುವ ಭಾರಿ ವಾಹನಗಳಿಗೆ ಮಾರ್ಗ ಬದಲಾವಣೆ
ಎನ್ಎಚ್-44 ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಮಾರ್ಗದಿಂದ ಬರುವ ವಾಹನಗಳು, ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ (NH-44) ಬದಲಾಗಿ ದೇವನಹಳ್ಳಿ ರಾಣಿ ಕ್ರಾಸ್ ಮೂಲಕ ಸಂಚಾರಕ್ಕೆ ಅವಕಾಶ.

ದೊಡ್ಡಬಳ್ಳಾಪುರ ಕಾರ್ಯಕ್ರಮಕ್ಕೆ ಹೋಗುವ ವಾಹನಗಳಿಗೆ ಮಾರ್ಗ:

ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಕಡೆಯಿಂದ ಹೋಗುವ ವಾಹನಗಳು
ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ, ಬೆಂಗಳೂರು ನಗರ, ವಿಶ್ವನಾಥಪುರ, ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ

ಕೊಲಾರ, ಕೆ.ಜಿ.ಎಫ್,ಹೊಸಕೋಟೆ ಕಡೆಯಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ವಾಹನಗಳು
ವಿಜಯಪುರ, ವಿಜಯಪುರ ಕ್ರಾಸ್, ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ ಬೆಂಗಳೂರು ನಗರ, ವಿಶ್ವನಾಥಪುರ,
ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ.

ಬೆಂಗಳೂರು ನಗರದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ವಾಹನಗಳಿಗೆ(ಬಸ್ ಮತ್ತು ಕ್ಯಾಬ್‌ಗಳಿಗೆ)
ಹೆಬ್ಬಾಳ ಫ್ಲೈ ಓವರ್, ಕೆಂಪಾಪುರ ಕ್ರಾಸ್ ಫ್ಲೈ ಓವರ್, ಕಾಫಿ ಡೇ, ಹುಣಸೇಮಾರನಹಳ್ಳಿ ಕ್ರಾಸ್, ಕೋಟೆ ಕ್ರಾಸ್, ಸಾದಹಳ್ಳಿ ಗೇಟ್, ವಯಾ ದೊಡ್ಡಬಳ್ಳಾಪುರ ಕ್ರಾಸ್‌ನಿಂದ ಬೆಂಗಳುರು ಗ್ರಾಮಾಂತರ ಜಿಲ್ಲಾ ಸರಹದ್ದು, ವಿಶ್ವನಾಥಪುರ, ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ.

ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ದ್ವಿಚಕ್ರ ವಾಹನಗಳಿಗೆ ಮಾರ್ಗ
ಹೆಬ್ಬಾಳ ಫ್ಲೈ ಓವರ್, ಸಂಜೀವನಗರ ಕ್ರಾಸ್ ಎಡ ತಿರುವು ಸರ್ವೀಸ್ ರಸ್ತೆ, ಕೊಡಿಗೇಹಳ್ಳಿ ಕ್ರಾಸ್, ಬ್ಯಾಟರಾಯನಪುರ ಕ್ರಾಸ್, ಜಕ್ಕೂರ್ ಕ್ರಾಸ್-ಎಡ ತಿರುವು ಫ್ಲೈ ಓವರ್, ಯಲಹಂಕ ಪೊಲೀಸ್ ಠಾಣೆ, ದೊಡ್ಡಬಳ್ಳಾಪುರ ರಸ್ತೆ, ಪುಟ್ಟೇನಹಳ್ಳಿ, ನಾಗೇನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರಹದ್ದು, ಸಿಂಗನಾಯಕನಹಳ್ಳಿ, ರಾಜನಕುಂಟೆ, ಮಾರಸಂದ್ರ, ಮೂಲಕ ದೊಡ್ಡಬಳ್ಳಾಪುರಕ್ಕೆ ಸಂಚಾರ ಮಾಡಲು ಅವಕಾಶ.

ಇದನ್ನೂ ಓದಿ | Janaspandana‌ | ಜನಸ್ಪಂದನಕ್ಕೆ 3 ಲಕ್ಷ ಜನ ಬರ್ತಾರೆ ಎಂದ ಸಚಿವ ಡಾ.ಕೆ. ಸುಧಾಕರ್

Exit mobile version